FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Thursday 23 October 2014

23-10-2014.
ಅಧ್ಯಾಪಕ ಪಠ್ಯ ಬಂತು  ಕ್ಲಸ್ಟರ್ ಬಹಿಷ್ಕಾರ ಇನ್ನಿಲ್ಲ. ಅಧ್ಯಾಪಕ ಸಂಘ.
ಕೇರಳ ರಾಜ್ಯದಾದ್ಯಂತ ಎಸ್.ಎಸ್.. ವತಿಯಿಂದ ನಡೆಯುವ ವಿವಿಧ ಕ್ಲಸ್ಟರ್ ಸಭೆಗಳಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಘೋಷಿಸಿದ್ದ ಬಹಿಷ್ಕಾರವನ್ನು ಹಿಂದಕ್ಕೆ ಪಡೆದಿದೆ.ಸಂಘಟನೆಯು ಅಧ್ಯಾಪಕ ಪಠ್ಯ ರಹಿತ ಯಾವುದೇ ಕ್ಲಸ್ಟರ್ ತರಬೇತಿಯನ್ನು ಬಹಿಷ್ಕರಿಸುವುದಾಗಿ ಘೋಷಿಸಿ ಈ ಹಿಂದಿನ ಕ್ಲಸ್ಟರ್ ತರಬೇತಿಗೆ  ಬಹಿಷ್ಕಾರ ಹಾಕಿತ್ತುಕನ್ನಡ ಅಧ್ಯಾಪಕರು ಒಗ್ಗಟ್ಟಿನಿಂದ ಸಂಘಟನೆಯ ಕರೆಯನ್ನು ಸ್ವೀಕರಿಸಿದ್ದರು . ನಮ್ಮ ಬೇಡಿಕೆ ಈಡೇರುವ ವರೆಗೆ ಬಹಿಷ್ಕಾರ ನಿಲ್ಲದು ಎಂಬ ಅಚಲ ನಿರ್ಧಾರವನ್ನು  ಅಧಿಕೃತರಿಗೆ ಸ್ಫಷ್ಟವಾಗಿ ತಿಳಿಸಿತ್ತು. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಧ್ಯಾಪಕ ಪಠ್ಯವನ್ನು ತಲಪಿಸಲು ಸಹಕರಿಸಿದ  ಅಧಿಕಾರಿಗಳನ್ನು,    ಸಂಘಟನೆ ಅಭಿನಂದಿಸುತ್ತಿದೆ.ಇನ್ನು ಮುಂದೆ ಭಾಷಾಂತರಕ್ಕೆ ಬಾಕಿ ಇರುವ ದೈಹಿಕ ಶಿಕ್ಷಣ,ಕಲೆ ಮತ್ತು ವೃತ್ತಿ ಪರಿಚಯ ಕ್ಕೆ ಸಂಬಂಧಿಸಿದ ಪುಸ್ತಕಗಳು ಮಾತ್ರವಲ್ಲದೆ  ಪ್ರೀ ಪ್ರೈಮರಿ ಪಠ್ಯಪುಸ್ತಕವನ್ನೂ ಆದಷ್ಟು ಬೇಗ ಒದಗಿಸಬೇಕೆಂದು ಒತ್ತಾಯಿಸಿದೆ.ಈ ಸಂಬಂಧ ಜಿಲ್ಲೆಯ ಉಪನಿರ್ದೇಶಕರಿಗೂ ಎಸ್.ಸಿ..ಆರ್.ಟಿ. ನಿರ್ದೇಶಕರಿಗೆ ಮತ್ತು ಎಸ್.ಎಸ್..ನಿರ್ದೇಶಕರಿಗೆ  ಮನವಿ ಸಲ್ಲಿಸಲಾಗಿದೆ.

Tuesday 21 October 2014

21-10-2014
ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ  ಮತ್ತು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ   ಸನ್ಮಾನ.

 


  ಎಂ.ಸೀತಾರಾಮ ಇವರಿಗೆ ಸ್ಮರಣಿಕೆ ನೀಡುತ್ತಿರುವುದು.


 ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೈಲಾಸ ಮೂರ್ತಿಯವರಿಗೆ ಸಂಘಟನೆಯ ವತಿಯಿಂದ ಸನ್ಮಾನ ಮಾಡಲಾಯಿತು.
 
21-10-2014.
ಇವರು ಕಿಞ್ಞಣ್ಣನಾದರೂ ದೊಡ್ಡವರು 
               ನಾಡೋಜ, ಕವಿ, ಡಾ/ಕಿಞ್ಞಣ್ಣ ರೈಯವರು ಶತಾಯುಷಿಗಳು ಮಾತ್ರವಲ್ಲ, ಶತಮಾನ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಸಾಮಾಜಿಕ ಕಳಕಳಿ, ಸ್ನೇಹ ತತ್ಪರತೆ, ಕ್ರಿಯಾಶೀಲತೆ,ಸರಳತೆ ಇಂದಿನ ಜನಾಂಗಕ್ಕೇ ಆದರ್ಶಪ್ರಾಯವಾಗಿದೆ.ಇವರು ಅಜಾತಶತ್ರುಎಂದೆನಿಸಿ ಅಪಾರ ಮಿತ್ರರನ್ನು ಗಳಿಸಿದವರು ಎ೦ದು ತಮ್ಮ ಸ್ವರಚಿತ ಕವನದ ಮೂಲಕ ಶ್ರೀ ಕಯ್ಯಾರರ ವ್ಯಕ್ತಿತ್ವವನ್ನು ಹಿರಿಯ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ  ಸರಳವಾಗಿ ವಿವರಿಸಿದರು. ಅವರು ಕವಿತಾ ಕುಟೀರದಲ್ಲಿ ಜರಗಿದ ಕನ್ನಡ ಕುಸುಮ ಸಮರ್ಪಣೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.,1986-88 ನೇ ಶೈಕ್ಷಣಿಕ ವರ್ಷದಲ್ಲಿ ಮಾಯಿಪ್ಪಾಡಿಯಲ್ಲಿ ಶಿಕ್ಷಕ ತರಬೇತಿ ಮುಗಿಸಿದ ಶಿಕ್ಷಕರ ವತಿಯಿಂದ ತಯಾರಿಸಿದ ಅಡಕ ಮುದ್ರಿಕೆಯನ್ನು ಕಯ್ಯಾರರಿಗೆ ಸಮರ್ಪಿಸಲು ಶಿಕ್ಷಕರ ತಂಡವು ಕವಿಗಳ ನಿಲಯಕ್ಕೆ ತೆರಳಿತು. ರಾಧಾಕೃಷ್ಣ ಉಳಿಯತ್ತಡ್ಕರವರು ತಮ್ಮ ನೆನಪುಗಳನ್ನು ತೆರೆದಿಡುತ್ತಾ ಶ್ರೀ ಕಯ್ಯಾರರ ಶಿಷ್ಯನಾಬೇಕಾದರೆ ಪುಣ್ಯಮಾಡಬೇಕೆಂದರು.ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾವನೆಯೊಂದಿಗೆ ಸ್ವಾಗತವನ್ನು ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸೀತಾರಾಮ ಮಲ್ಲ ನಿರ್ವಹಿಸಿದರು. ಕೇರಳ ಪ್ರಾಂತ್ಯ ಕನ್ನಡ ಮಧ್ಯಮ ಅಧ್ಯಾಪಕ ಸಂಘದ ಉಪಾಧ್ಯಕ್ಶರಾದ ಮಹಾಲಿಂಗೇಶ್ವರ ಭಟ್ ಎಂ.ವಿ,  ಲಲಿತಾ ಲಕ್ಷ್ಮಿ ಕುಳಮರ್ವ,   ಚನಿಯ ಡಿ ,ಕೃಷ್ಣೋಜಿ ರಾವ್ಪ್ರಕಾಶ್ ಬಿ.ಎಂ,   ಪ್ರಸನ್ನಕುಮಾರಿ, ಸಾವಿತ್ರಿಪ್ರಭಾವತಿ ಕೆದಿಲ್ಲಾಯ ಪುಂಡೂರು,    ಶಿವರಾಮ ಪಿ.ವಿ, ಕರುಣಾಕರ ಎವಾಣಿ ಪಿ.ಎಸ್, ಶೈಲಜಾ ಬಿ, ಮೊದಲಾದವರು ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಭಟ್ ಕೆ ವಂದಿಸಿದರು.









Sunday 19 October 2014

ಕನ್ನಡ ಕುಸುಮ 


ಕವಿ ಕಯ್ಯಾರರಿಗೊಂದು ಕನ್ನಡ ಕುಸುಮ
ಕಾಸರಗೋಡು,ಕನ್ನಡ ವಿದ್ಯಾರ್ಥಿಗಳಿಗೆ,ಅಧ್ಯಾಪಕರಿಗೆ ಉಪಯುಕ್ತವಾದ ಹಾಡುಗಳನ್ನು ಧ್ವನಿ ಮುದ್ರಿಸಿ ಕನ್ನಡ ಮಾಧ್ಯಮ ಶಾಲೆಗಳಿಗೆ ವಿತರಿಸಲು ಸಿದ್ಧಗೊಳಿಸಿದ ಪ್ರಯತ್ನವು ಶ್ಲಾಘನೀಯವಾಗಿದೆ.ಶಿಕ್ಷಕವೃಂದದಿಂದ ಇಂತಹ ಕಾರ್ಯಗಳು ನಡೆದು ಮಕ್ಕಳಿಗೆ ಸಿಗುವಂತಾಗಲಿ ಎ೦ದು ನಿವೃತ್ತ ಪ್ರಾಂಶುಪಾಲರಾದ ಕೋಟಿ ಕೆ. ಇವರು ನುಡಿದರು. ಕನ್ನಡ ಭವನ ಬೀರಂತಬೈಲಿನಲ್ಲಿ ನಡೆದ ಕವಿ ಕಯ್ಯಾರರಿಗೊಂದು ಕನ್ನಡ ಕುಸುಮ ಎ೦ಬ ಶ್ರಾವ್ಯ ಅಡಕ ಮುದ್ರಿಕೆಯನ್ನು ಬಿಡುಗಡೆ ಮಾಡಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆಯವರಿಗೆ ನೀಡಿದ ಬಳಿಕ ತಮ್ಮ ಆಶಯ ಭಾಷಣದಲ್ಲಿ ಶ್ರೀಯುತರು ಈ ಅಭಿಪ್ರಾಯಪಟ್ಟರು. 1986-88 ನೇ ಸಾಲಿನಲ್ಲಿ ಮಾಯಿಪ್ಪಾಡಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ತರಬೇತಿ ಮುಗಿಸಿದ ಶಿಕ್ಷಕರ ಬಳಗ ಸಿದ್ದಪಡಿಸಿದ ಈ ಯೋಜನೆ ಎಲ್ಲರಿಗೂ ಪ್ರಯೋಜನವಾಗಲಿ ಎ೦ದು ಡಾ/ಬೇ.ಸಿ.ಗೋಪಾಲಕೃಷ್ಣ ಭಟ್ ಶುಭಾಶಂಸನೆಗೈದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್,ಡಾ/ ಪ್ರಸನ್ನ ರೈ,ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್,ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್,ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ,ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶಂಕರ್ ಸಾರಡ್ಕ ಮತ್ತು ಸೀತಾರಾಮ ಮಲ್ಲ,ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಧ್ಯಾಪಕಸಂಘದ ಕೇಂದ್ರಾಧ್ಯಕ್ಷ, ಟಿ.ಡಿ. ಸದಾಶಿವ ರಾವ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦. ವಂದಿಸಿದರು.ವಾಣಿ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.ಕವಿ ಕಯ್ಯಾರರ ಪ್ರಸಿದ್ಧ ನೇತ್ರಾವತಿ ಹಾಡನ್ನು ಅವರ ಪುತ್ರ ಡಾ/ ಪ್ರಸನ್ನ ರೈ ಇಂಪಾಗಿ ಹಾಡಿದರು.ಕನ್ನಡ ಕುಸುಮ ಅಡಕ ಮುದ್ರಿಕೆಯಲ್ಲಿ ಹಾಡುಗಾರರಾಗಿ ಭಾಗವಹಿಸಿದ ಶ್ರೀವಾಣಿ ಕಾಕುಂಜೆ, ಮೀನಾ ಕೋಟೂರು,ಶ್ರದ್ಧಾ ಎನ್, ಭಾಗ್ಯ ಶ್ರೀ ಕೆ.ಎಸ್, ಅಭಿಷೇಕ್ ಎಸ್.ಮಯ್ಯ,ರಮ್ಯಶ್ರೀ ಅಂಬಕಾನ ಮತ್ತು ಅನುಷಾ ಎಸ್.ಮಯ್ಯ ಇವರಿಗೆ ಸ್ಮರಣಿಕೆಯಿತ್ತು ಅಭಿನಂದನೆಗೈಯಲಾಯಿತು.





 

Sunday 12 October 2014


12-10-2014
ಆಮಂತ್ರಣವನ್ನು ಸ್ವೀಕರಿಸಿ ಎಲ್ಲರೂ ಬನ್ನಿ.


Thursday 9 October 2014


-->
 09-10-2014
ಮಾಯಿಪ್ಪಾಡಿ ಶಿಕ್ಷಣ ಸಂಸ್ಥೆಯಲ್ಲಿ 1986 ರಿಂದ 1988ರ ವರೆಗಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕ ತರಬೇತಿ ಪಡೆದ ಸಹಪಾಠಿಗಳ ವತಿಯಿಂದ
ಕವಿಕಯ್ಯಾರರಿಗೊಂದು
ಕನ್ನಡ ಕುಸುಮ
ಪ್ರಿಯರೇ,
            ಕಾಸರಗೋಡಿನ ಕವಿ ಕಯ್ಯಾರರು  ಶತಮಾನವನ್ನು ಕಂಡ ಹಿರಿಯ ಚೇತನವೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಜಗದಗಲ ಖ್ಯಾತಿ ಹೊಂದಿದ ಶ್ರೀಯುತರ ಶತಮಾನೋತ್ಸವ ಸಂಭ್ರಮದ ಈ ವರ್ಷ ಅವರಿಗೊಂದು ಕಿರು ಕಾಣಿಕೆಯನ್ನು ಕೊಡುವ ಸದುದ್ದೇಶದಿಂದ ನಮ್ಮ ಸಹಪಾಠಿಗಳ ಬಳಗ ಕಯ್ಯಾರರಿಗೊಂದು ಕನ್ನಡ ಕುಸುಮ ಎ೦ಬ ಶ್ರಾವ್ಯ ಅಡಕಮುದ್ರಿಕೆಯನ್ನು ತಯಾರಿಸಿ ಎಲ್ಲಾ ಕನ್ನಡ ಮಾಧ್ಯ ಶಾಲೆಗಳಿಗೆ ತಲಪಿಸಲು ತೀರ್ಮಾನಿಸಿದೆ. ಇದರಲ್ಲಿ ಕಯ್ಯಾರರ ಕೆಲವುಜನಪ್ರಿಯ ಹಾಡುಗಳು ಮಾತ್ರವಲ್ಲದೆ ಕಂಠಪಾಠವಾಗಿ ಹಾಡಬಹುದಾದ ಕೆಲವು ಕಾವ್ಯಭಾಗಗಳು,ಮಂಜೇಶ್ವರಗೋವಿಂದಪೈ,ಕುವೆಂಪು ಬೀ.ಎ೦.ಶ್ರೀಕಂಠಯ್ಯ,ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ,ವಿ.ಬಿ.ಕುಳಮರ್ವ,ಮಾದಲಾದವರ ಹಾಡುಗಳು, ಸರ್ವಜ್ಞ ವಚನಗಳು ಮತ್ತು ಕನಕದಾಸರ ಕೀರ್ತೆನೆಗಳೇ ಮೊದಲಾದವುಗಳನ್ನು ಅಳವಡಿಸಲಾಗಿದೆ.ಈ ಹಾಡುಗಳಿಗೆ ಕಾಸರಗೋಡಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳು ದ್ವನಿಗೂಡಿಸಿದ್ದಾರೆ. ಖ್ಯಾತ ಸಂಗೀತ ವಿದ್ವಾಂಸರಾದ ಬಳ್ಳಪದವು ಯೋಗೀಶ್ ಶರ್ಮರೇ ಮೊದಲಾದ ಸಂಪನ್ನ ವ್ಯಕ್ತಿಗಳ ಸಲಹೆಯೊಂದಿಗೆ ಧ್ವನಿ ಮುದ್ರಿಸಿ ಇದನ್ನು ಸಿದ್ಧಗೊಳಿಸಿ ನಿಮ್ಮ ಮುಂದಿಡಲು ಸಂತೋಷಪಡುತ್ತಿದ್ದೇವೆ. ಇದರ ಔಪಚಾರಿಕ ಉದ್ಘಾಟನೆಯು ಇದೇ ಬರುವ ತಾರೀಕು 19-10-2014 ನೇ ರವಿವಾರ ಬೆಳಗ್ಗೆ10.00 ಗಂಟೆಗೆ ಕನ್ನಡ ಅಧ್ಯಾಪಕ ಭವನ ಬೀರಂತಬೈಲಿನ ಸಭಾಂಗಣದಲ್ಲಿ ನಡೆಯಲಿದೆ.ಎಲ್ಲಾ ಸಹೃದಯ ಬಂಧುಗಳನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.
ತಾರೀಕುಃ 8-10-2014                                 ಅಧ್ಯಕ್ಷರು ಮತ್ತು ಸದಸ್ಯರು
ಸ್ಥಳಃ ಮಾಯಿಪ್ಪಾಡಿ.                                            ಸಂಘಟನಾ ಸಮಿತಿ.

Wednesday 8 October 2014

08-10-2014
ಕಂಬನಿ
ನಮ್ಮೊಡನೆ ಸದಾ ನಗುನಗುತ್ತಾ ಇದ್ದು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದ ಶಿವಾನಂದ ಅರಿಬೈಲು ಮತ್ತು  ವಿದ್ಯಾರ್ಥಿ ಸಹೋದ್ಯೋಗಿಗಳನ್ನೇ ಬಂಧುಗಳಂತೆ ಕಾಣುತ್ತಿದ್ದ ಸಮಯ ನಿಷ್ಠೆಯ ಪ್ರಾಮಾಣಿಕ ಶಿಕ್ಷಕರಾಗಿದ್ದ ಸಿ.ಎಚ್.ಸುಬ್ರಹ್ಮಣ್ಯ ಭಟ್ ನಮ್ಮಗಲಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಪ್ರಾರ್ಥಿಸುತ್ತಿದೆ.

Tuesday 7 October 2014

 07-10-2014
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಮಹಾಸಭೆ
ಕಾಸರಗೋಡು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕಸಂಘದ ಕೇಂದ್ರ ಮಹಾಸಭೆಯು ಇದೇ ಬರುವ ತಾರೀಕು 19-10-2014 ನೇ ರವಿವಾರ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಲಿದೆ.ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್, ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಕೈಲಾಸಮೂರ್ತಿ,ನಂದಿಕೇಶನ್, ಕಾಯರ್ಕಟ್ಟೆ  ಹೈಯರ್ ಸೆಕಂಡರಿ ಪ್ರಾಂಶುಪಾಲರಾದ ಬೇ.ಸಿ.ಬೋಪಾಲಕೃಷ್ಣ ಭಟ್ ಮತ್ತು ಸಂಘಟನೆ ಪದಾಧಿಕಾರಿಗಳು  ಭಾಗವಹಿಸುವರು.ರಾಜ್ಯಪ್ರಶಸ್ತಿ ವಿಜೇತ ಶಂಕರ್ ಸಾರಡ್ಕ ಮತ್ತು ಎಂ.ಸೀತಾರಾಮರವರಿಗೆ ಅಭಿನಂದನೆ ನಡೆಯಲಿದೆ.ಉದ್ಘಾಟನಾ ಸಮಾರಂಭದ ಬಳಿಕ ಸಂಘಟನೆಯ ಮಹಾಸಭೆ ಜರಗಲಿದೆ. ಎಲ್ಲಾ ಕೇಂದ್ರಸಮಿತಿ ಸದಸ್ಯರು ಅಗತ್ಯವಾಗಿ ಹಾಜರಿರಬೇಕಾಗಿ ವಿನಂತಿ.
                                                                           ಅದ್ಯಕ್ಷರು
                                                          ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕಸಂಘ
                                                                       ಕಾಸರಗೋಡು

Thursday 2 October 2014

01-10-2014
ಶಿಕ್ಷಣ ಸಚಿವರು ಕರೆದ ಅಂಗೀಕೃತ ಅಧ್ಯಾಪಕ ಸಂಘಟನೆಗಳ ಸಭೆಯಲ್ಲಿ,
 ತಿರುವನಂತಪುರ, ಶಿಕ್ಷಣ ಸಚಿವರಾ ಶ್ರೀ ಅಬ್ದು ರಬ್ ರವರು ಕರೆದ ಅಧ್ಯಾಪಕ ಸಂಘಟನೆಗಳ ಸಭೆಯಲ್ಲಿ ಅಧ್ಯಾಪಕರ ಹುದ್ದೆ ನಿರ್ಣಯ ಮತ್ತು ಪುನರ್ವಿನ್ಯಾಸ, ಭಾಷಾ ಅಧ್ಯಾಪಕರ ನೇಮಕಾತಿಯಲ್ಲಿ ಬಂದ ಲೋಪದೋಷ, ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಆರ್.ಎಂ.ಎಸ್.ಎ. ಶಾಲೆಗಳ ಕುರಿತು ಅವಲೋಕನ, ಶಾಲೆಗಳ ಮಧ್ಯಾಹ್ನ ಭೋಜನದ ಕುರಿತಾದನೂತನ ನೀತಿ ಮತ್ತು ಸ್ವಚ್ಛ ಭಾರತದ ಸಂಕಲ್ಪ ಮೊದಲಾದ ವಿಚಾರಗಳನ್ನು ಚರ್ಚಿಸಲಾಯಿತು.ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಉಪಾಧ್ಯಕ್ಷರಾದ  ಮಹಾಲಿಂಗೇಶ್ವರ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಭಾಗವಿಸಿದರು. ಶಾಲಾ ಕಲೋತ್ಸವ ಮ್ಯಾನುವಲ್ ನಲ್ಲಿ ಸೇರಿಸಬೇಕಾದ ಕನ್ನಡದ ಸ್ಪರ್ಧೆಗಳ ಕುರಿತು, ಸ್ಟೆಟೆಸ್ಕೋ ವ್ಯವಸ್ಥೆಯನ್ನು ಕನ್ನಡ ಶಾಲೆಗಳಿಗೂ ಏರ್ಪಡಿಸಬೇಕು ಮತ್ತು ಕಾಸರಗೋಡಿನಲ್ಲಿ ಯಾವುದು ಅಲ್ಪಸಂಖ್ಯಾತ ಭಾಷೆಯೆಂದು ತಿಳಿಯದ ಅಧಿಕಾರಿಗಳಿಗೆ ಸ್ಪಷ್ಟೀಕರಣ ನೀಡುವಂತೆ ಮನವಿ ಮೊದಲಾದವುಗಳನ್ನು ನೀಡಿ ಅದರ ಕುರಿತು ಅಧಿಕೃತರೊಡನೆ ಚರ್ಚಿಸಲಾಯಿತು.  ಎ.ಜಿ.ಕಛೇರಿಯಲ್ಲಿ  ತಡೆಹಿಡಿಯಲಾಗಿದ್ದ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಒತ್ತಾಯಿಸಲಾಗಿದೆ.