07-10-2014
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಮಹಾಸಭೆ
ಕಾಸರಗೋಡು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕಸಂಘದ ಕೇಂದ್ರ ಮಹಾಸಭೆಯು ಇದೇ ಬರುವ ತಾರೀಕು 19-10-2014 ನೇ ರವಿವಾರ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಲಿದೆ.ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್, ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಕೈಲಾಸಮೂರ್ತಿ,ನಂದಿಕೇಶನ್, ಕಾಯರ್ಕಟ್ಟೆ ಹೈಯರ್ ಸೆಕಂಡರಿ ಪ್ರಾಂಶುಪಾಲರಾದ ಬೇ.ಸಿ.ಬೋಪಾಲಕೃಷ್ಣ ಭಟ್ ಮತ್ತು ಸಂಘಟನೆ ಪದಾಧಿಕಾರಿಗಳು ಭಾಗವಹಿಸುವರು.ರಾಜ್ಯಪ್ರಶಸ್ತಿ ವಿಜೇತ ಶಂಕರ್ ಸಾರಡ್ಕ ಮತ್ತು ಎಂ.ಸೀತಾರಾಮರವರಿಗೆ ಅಭಿನಂದನೆ ನಡೆಯಲಿದೆ.ಉದ್ಘಾಟನಾ ಸಮಾರಂಭದ ಬಳಿಕ ಸಂಘಟನೆಯ ಮಹಾಸಭೆ ಜರಗಲಿದೆ. ಎಲ್ಲಾ ಕೇಂದ್ರಸಮಿತಿ ಸದಸ್ಯರು ಅಗತ್ಯವಾಗಿ ಹಾಜರಿರಬೇಕಾಗಿ ವಿನಂತಿ.
ಅದ್ಯಕ್ಷರು
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕಸಂಘ
ಕಾಸರಗೋಡು
No comments:
Post a Comment