FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday 21 October 2014

21-10-2014.
ಇವರು ಕಿಞ್ಞಣ್ಣನಾದರೂ ದೊಡ್ಡವರು 
               ನಾಡೋಜ, ಕವಿ, ಡಾ/ಕಿಞ್ಞಣ್ಣ ರೈಯವರು ಶತಾಯುಷಿಗಳು ಮಾತ್ರವಲ್ಲ, ಶತಮಾನ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಸಾಮಾಜಿಕ ಕಳಕಳಿ, ಸ್ನೇಹ ತತ್ಪರತೆ, ಕ್ರಿಯಾಶೀಲತೆ,ಸರಳತೆ ಇಂದಿನ ಜನಾಂಗಕ್ಕೇ ಆದರ್ಶಪ್ರಾಯವಾಗಿದೆ.ಇವರು ಅಜಾತಶತ್ರುಎಂದೆನಿಸಿ ಅಪಾರ ಮಿತ್ರರನ್ನು ಗಳಿಸಿದವರು ಎ೦ದು ತಮ್ಮ ಸ್ವರಚಿತ ಕವನದ ಮೂಲಕ ಶ್ರೀ ಕಯ್ಯಾರರ ವ್ಯಕ್ತಿತ್ವವನ್ನು ಹಿರಿಯ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ  ಸರಳವಾಗಿ ವಿವರಿಸಿದರು. ಅವರು ಕವಿತಾ ಕುಟೀರದಲ್ಲಿ ಜರಗಿದ ಕನ್ನಡ ಕುಸುಮ ಸಮರ್ಪಣೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.,1986-88 ನೇ ಶೈಕ್ಷಣಿಕ ವರ್ಷದಲ್ಲಿ ಮಾಯಿಪ್ಪಾಡಿಯಲ್ಲಿ ಶಿಕ್ಷಕ ತರಬೇತಿ ಮುಗಿಸಿದ ಶಿಕ್ಷಕರ ವತಿಯಿಂದ ತಯಾರಿಸಿದ ಅಡಕ ಮುದ್ರಿಕೆಯನ್ನು ಕಯ್ಯಾರರಿಗೆ ಸಮರ್ಪಿಸಲು ಶಿಕ್ಷಕರ ತಂಡವು ಕವಿಗಳ ನಿಲಯಕ್ಕೆ ತೆರಳಿತು. ರಾಧಾಕೃಷ್ಣ ಉಳಿಯತ್ತಡ್ಕರವರು ತಮ್ಮ ನೆನಪುಗಳನ್ನು ತೆರೆದಿಡುತ್ತಾ ಶ್ರೀ ಕಯ್ಯಾರರ ಶಿಷ್ಯನಾಬೇಕಾದರೆ ಪುಣ್ಯಮಾಡಬೇಕೆಂದರು.ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾವನೆಯೊಂದಿಗೆ ಸ್ವಾಗತವನ್ನು ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸೀತಾರಾಮ ಮಲ್ಲ ನಿರ್ವಹಿಸಿದರು. ಕೇರಳ ಪ್ರಾಂತ್ಯ ಕನ್ನಡ ಮಧ್ಯಮ ಅಧ್ಯಾಪಕ ಸಂಘದ ಉಪಾಧ್ಯಕ್ಶರಾದ ಮಹಾಲಿಂಗೇಶ್ವರ ಭಟ್ ಎಂ.ವಿ,  ಲಲಿತಾ ಲಕ್ಷ್ಮಿ ಕುಳಮರ್ವ,   ಚನಿಯ ಡಿ ,ಕೃಷ್ಣೋಜಿ ರಾವ್ಪ್ರಕಾಶ್ ಬಿ.ಎಂ,   ಪ್ರಸನ್ನಕುಮಾರಿ, ಸಾವಿತ್ರಿಪ್ರಭಾವತಿ ಕೆದಿಲ್ಲಾಯ ಪುಂಡೂರು,    ಶಿವರಾಮ ಪಿ.ವಿ, ಕರುಣಾಕರ ಎವಾಣಿ ಪಿ.ಎಸ್, ಶೈಲಜಾ ಬಿ, ಮೊದಲಾದವರು ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಭಟ್ ಕೆ ವಂದಿಸಿದರು.









No comments:

Post a Comment