FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 19 October 2014

ಕನ್ನಡ ಕುಸುಮ 


ಕವಿ ಕಯ್ಯಾರರಿಗೊಂದು ಕನ್ನಡ ಕುಸುಮ
ಕಾಸರಗೋಡು,ಕನ್ನಡ ವಿದ್ಯಾರ್ಥಿಗಳಿಗೆ,ಅಧ್ಯಾಪಕರಿಗೆ ಉಪಯುಕ್ತವಾದ ಹಾಡುಗಳನ್ನು ಧ್ವನಿ ಮುದ್ರಿಸಿ ಕನ್ನಡ ಮಾಧ್ಯಮ ಶಾಲೆಗಳಿಗೆ ವಿತರಿಸಲು ಸಿದ್ಧಗೊಳಿಸಿದ ಪ್ರಯತ್ನವು ಶ್ಲಾಘನೀಯವಾಗಿದೆ.ಶಿಕ್ಷಕವೃಂದದಿಂದ ಇಂತಹ ಕಾರ್ಯಗಳು ನಡೆದು ಮಕ್ಕಳಿಗೆ ಸಿಗುವಂತಾಗಲಿ ಎ೦ದು ನಿವೃತ್ತ ಪ್ರಾಂಶುಪಾಲರಾದ ಕೋಟಿ ಕೆ. ಇವರು ನುಡಿದರು. ಕನ್ನಡ ಭವನ ಬೀರಂತಬೈಲಿನಲ್ಲಿ ನಡೆದ ಕವಿ ಕಯ್ಯಾರರಿಗೊಂದು ಕನ್ನಡ ಕುಸುಮ ಎ೦ಬ ಶ್ರಾವ್ಯ ಅಡಕ ಮುದ್ರಿಕೆಯನ್ನು ಬಿಡುಗಡೆ ಮಾಡಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆಯವರಿಗೆ ನೀಡಿದ ಬಳಿಕ ತಮ್ಮ ಆಶಯ ಭಾಷಣದಲ್ಲಿ ಶ್ರೀಯುತರು ಈ ಅಭಿಪ್ರಾಯಪಟ್ಟರು. 1986-88 ನೇ ಸಾಲಿನಲ್ಲಿ ಮಾಯಿಪ್ಪಾಡಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ತರಬೇತಿ ಮುಗಿಸಿದ ಶಿಕ್ಷಕರ ಬಳಗ ಸಿದ್ದಪಡಿಸಿದ ಈ ಯೋಜನೆ ಎಲ್ಲರಿಗೂ ಪ್ರಯೋಜನವಾಗಲಿ ಎ೦ದು ಡಾ/ಬೇ.ಸಿ.ಗೋಪಾಲಕೃಷ್ಣ ಭಟ್ ಶುಭಾಶಂಸನೆಗೈದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್,ಡಾ/ ಪ್ರಸನ್ನ ರೈ,ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್,ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್,ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ,ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶಂಕರ್ ಸಾರಡ್ಕ ಮತ್ತು ಸೀತಾರಾಮ ಮಲ್ಲ,ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಧ್ಯಾಪಕಸಂಘದ ಕೇಂದ್ರಾಧ್ಯಕ್ಷ, ಟಿ.ಡಿ. ಸದಾಶಿವ ರಾವ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦. ವಂದಿಸಿದರು.ವಾಣಿ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.ಕವಿ ಕಯ್ಯಾರರ ಪ್ರಸಿದ್ಧ ನೇತ್ರಾವತಿ ಹಾಡನ್ನು ಅವರ ಪುತ್ರ ಡಾ/ ಪ್ರಸನ್ನ ರೈ ಇಂಪಾಗಿ ಹಾಡಿದರು.ಕನ್ನಡ ಕುಸುಮ ಅಡಕ ಮುದ್ರಿಕೆಯಲ್ಲಿ ಹಾಡುಗಾರರಾಗಿ ಭಾಗವಹಿಸಿದ ಶ್ರೀವಾಣಿ ಕಾಕುಂಜೆ, ಮೀನಾ ಕೋಟೂರು,ಶ್ರದ್ಧಾ ಎನ್, ಭಾಗ್ಯ ಶ್ರೀ ಕೆ.ಎಸ್, ಅಭಿಷೇಕ್ ಎಸ್.ಮಯ್ಯ,ರಮ್ಯಶ್ರೀ ಅಂಬಕಾನ ಮತ್ತು ಅನುಷಾ ಎಸ್.ಮಯ್ಯ ಇವರಿಗೆ ಸ್ಮರಣಿಕೆಯಿತ್ತು ಅಭಿನಂದನೆಗೈಯಲಾಯಿತು.





 

No comments:

Post a Comment