FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday 14 November 2015

15-11-2015
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ.
ಬೀರಂತಬೈಲು ಕಾಸರಗೋಡು.
"ಕಯ್ಯಾರರಿಗೆ ಅಕ್ಷರಾಂಜಲಿ'








ಪೆರಡಾಲ, ನವೆ.14ಕನ್ನಡ ಸಾರಸ್ವತ ಲೋಕದ ಕಣ್ಮಣಿಯಾಗಿದ್ದು ಗಡಿನಾಡ ಕಿಡಿಯೆನಿಸಿದ ಡಾ.ಕಯ್ಯಾರರ ಬದುಕು ಬರಹಗಳು ಅವರ ಆದರ್ಶಗಳನ್ನು ಪ್ರತಿಬಿಂಬಿಸುತ್ತಿವೆ. ಅವರ ಸಾಮಾಜಿಕ ಕಾಳಜಿ,ದುಡಿತದ ತುಡಿತ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ. ಇಂತಹ ಧೀಮಂತ ವ್ಯಕ್ತಿತ್ವದ ಕಯ್ಯಾರರಿಗೆ ಅಕ್ಷರಾಂಜಲಿಯು ಔಚಿತ್ಯಪೂರ್ಣವಾಗಿದೆ. ಇಂದಿನ ಮಕ್ಕಳಿಗೆ ಶ್ರೀಯುತರ ಆದರ್ಶಗಳನ್ನು ತಿಳಿಯಪಡಿಸುವ ಸಲುವಾಗಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲಿ ಜರಗಬೇಕುಎಲ್ಲ ಕನ್ನಡಿಗರ ಮನ ಮುಟ್ಟಬೇಕು ಎ೦ದು ಕಾಞ್ಞಂಗಾಡು ಜಿಲ್ಲಾ ಶಿಕ್ಷಣಾಧಿಕಾರಿ ಮಹಾಲಿಂಗೇಶ್ವರ ರಾಜ್ ನುಡಿದರು ಅವರು ನವಜೀವನ ಹೈಯರ್ ಸೆಕಂಡರಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕಯ್ಯಾರರಿಗೆ ಅಕ್ಷರಾಂಜಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಅಧ್ಯಕ್ಷರಾದ ಎಸ್.ವಿ.ಭಟ್ ವಹಿಸಿದ್ದರು.ನಲಂದಾ ಕಲಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಕಮಲಾಕ್ಷ ಕೆ ಮತ್ತು ವಿಶ್ರಾಂ ತ ಪ್ರಾಂಶುಪಾಲರಾದ ಬೇ.ಸಿ.ಗೋಪಾಲಕೃಷ್ಣ ಭಟ್ ನುಡಿನಮನ ಸಲ್ಲಿಸಿದರು.ಕಯ್ಯಾರರ ಪುತ್ರ ಡಾ.ಪ್ರಸನ್ನ ರೈ ಪ್ರಾಚಾರ್ಯರು ಸಂತ ಫಿಲೊಮಿನಾ ಕಾಲೇಜು ಪುತ್ತೂರು ಇವರು ತಮ್ಮ ತಂದೆಯವರ ಜನಪ್ರಿಯ ಕವಿತೆಗಳನ್ನು ಇಂಪಾಗಿ ಹಾಡಿದರು ಮಾತ್ರವಲ್ಲದೆ ಅವರ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಕೆ, ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಶುಭಾಶಂಸನೆಗೈದರು.
ಚಿದಾನಂದ ಭಟ್ ಅಧ್ಯಕ್ಷರು ಕಾರ್ಯಕ್ರಮ ಸಮಿತಿ , ವಿಶಾಲಾಕ್ಷ. ಪುತ್ರಕಳ ಅಧಿಕೃತ ವಕ್ತಾರರು , ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿ, ಜ್ಯೋತಿ ಕೆ,ಅಧ್ಯಕ್ಷರು,ಕುಂಬಳೆ ಉಪಜಿಲ್ಲಾ ಘಟಕ. ರವೀಂದ್ರನಾಥ್ ಬಲ್ಲಾಳ್,ಅಧ್ಯಕ್ಷರು,ಮಂಜೇಶ್ವರ ಉಪಜಿಲ್ಲಾ ಘಟಕ. ಸುಭಾಷ್,ಅಧ್ಯಕ್ಷರು, ಕಾಸರಗೋಡು ಉಪಜಿಲ್ಲಾ ಘಟಕ. ನವೀನ್ ಕುಮಾರ್, ಶರತ್ ಕುಮಾರ್ ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಜಿಲ್ಲಾ ಪಂಚಾಯತ್ ಸದಸ್ಯರಾದ ನ್ಯಾಯವಾದಿ ಶ್ರೀಕಾಂತ್ ಕಯ್ಯಾರರ ನೆನಪು ನಮ್ಮ ಕನ್ನಡ ಹೋರಾಟಗಳಿಗೆ ಸ್ಪೂರ್ತಿಯಾಗಿದೆ ಎ೦ದರು.ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ ಇವರಿಗೆ ಸಂಘಟನೆಯ ಅಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಸ್ಮರಣಿಕೆಯನ್ನು ಇತ್ತು ಗೌರವಿಸಿದರು. ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎನ್ ಪ್ರಾಸ್ತಾವಿಕ ನುಡಿದರು. ಕೆ ಶ್ಯಾಮ ಭಟ್ ಸ್ವಾಗತಿಸಿ,ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಪುರುಷೋತ್ತಮ ಕುಲಾಲ್ ನಿರೂಪಣೆಗೈದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಧ ಸ್ಪರ್ಧೆಗಳನ್ನು ಮತ್ತು ಪ್ರತಿಭಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಫಲಿತಾಂಶಗಳು
ಕಿರಿಯ ಪ್ರಾಥಮಿಕ ವಿಭಾಗ ಕಥಾರಚನೆಃ ಪ್ರಥಮ-ಅಭಿಜ್ಞಾ ಬಿ.ಭಟ್,ಜಿ.ಬಿ.ಯು.ಪಿ.ಎಸ್.ಪೆರಡಾಲ. ದ್ವಿತೀಯ-ಮನಸ್ವಿ ಡಿ, ಸಂತ ಬಿ..ಎಸ್.ಬಿ.ಎಸ್.ಬೇಳ.ತೃತೀಯ-ಮನೀಷ್ ಕೆ, ಕೆ..ಎಲ್.ಪಿ.ಎಸ್.ಕೋಟೂರು.
ಹಿರಿಯ ಪ್ರಾಥಮಿಕ ವಿಭಾಗ ಕಥಾರಚನೆಃ ಪ್ರಥಮ-ಆಶಾ ಕೆ, .ಸಂ.ಕಾ.ಎಚ್.ಎಸ್.ಎಸ್.ನೀರ್ಚಾಲು. ದ್ವಿತೀಯ-ನಿಶ್ಮಾ ಎ೦, ಎಸ್.ಎಸ್..ಯು.ಪಿ.ಎಸ್. ಶೇಣಿ.ತೃತೀಯ-ರಕ್ಷಾ ಕೆ, ಎಚ್.ಎಫ್..ಎಸ್.ಬಿ.ಎಸ್. ಕುಂಬಳೆ.
ಹಿರಿಯ ಪ್ರಾಥಮಿಕ ವಿಭಾಗ ಕವಿತಾರಚನೆಃ ಪ್ರಥಮ-ಸೌಜನ್ಯಾ ಬಿ, .ಯು.ಪಿ.ಎಸ್.ಮುಳ್ಳೇರಿಯಾ. ದ್ವಿತೀಯ-ಪ್ರಿಯಾ ಎಸ್, ಬಿ..ಯು.ಪಿ.ಎಸ್.ಕಾಟುಕುಕ್ಕೆ.ತೃತೀಯ-ವಿದ್ಯಾಲಕ್ಷ್ಮಿ ಕೆ.ಎಚ್.ಎಫ್..ಎಸ್.ಬಿ.ಎಸ್. ಕುಂಬಳೆ.
ಪ್ರೌಢ ಶಾಲಾ ವಿಭಾಗ ಕಥಾರಚನೆಃ ಪ್ರಥಮ-ಅಕ್ಷತಾ ಕೆ, ಜಿ.ಎಚ್.ಎಸ್.ಎಸ್.ಚಂದ್ರಗಿರಿ.ದ್ವಿತೀಯ-ವಿದ್ಯಾರತ್ನ ಬಿ, ಜಿ.ವಿ.ಎಚ್.ಎಸ್.ಎಸ್.ಮುಳ್ಳೇರಿಯಾ. ತೃತೀಯ-ರಶ್ಮಿತಾ ಎ೦, ಬಿ..ಆರ್.ಎಚ್.ಎಸ್.ಎಸ್.ಬೋವಿಕ್ಕಾನ ಮತ್ತು ನಂದನಾ ಕೆ.,.ಸಂ.ಕಾ.ಎಚ್.ಎಸ್.ಎಸ್.ನೀರ್ಚಾಲು.
ಪ್ರೌಢ ಶಾಲಾ ವಿಭಾಗ ಕವಿತಾರಚನೆಃ ಪ್ರಥಮ-ಆಶಯಾ ಕೆ.ಎ೦, ಜಿ.ಎಚ್.ಎಸ್.ಎಸ್.ಪೈವಳಿಕೆ. ದ್ವಿತೀಯ-ನಫೀಸತ್ ವುಲ್ ಸ್ವಾದಿಕಾ, ಎಸ್..ಟಿ.ಎಚ್.ಎಸ್.ಮಂಜೇಶ್ವರ. ತೃತೀಯ-ದೀಪ್ತಿ ಎನ್, ಜಿ.ಎಚ್.ಎಸ್.ಎಸ್.ಬೆಳ್ಳೂರು.
ಪ್ರೌಢ ಶಾಲಾ ವಿಭಾಗ ಸಾಹಿತ್ಯ ರಸಪ್ರಶ್ನೆಃ ಪ್ರಥಮ-ಕ್ಷಿತೀಶ ಸಿ.ಎಚ್ ಮತ್ತು ರಾಹುಲ್ ಕೆ ಎಸ್.ಎಸ್.ಎಚ್.ಎಸ್.ಎಸ್.ಶೇಣಿ. ದ್ವಿತೀಯ-ಮಂಜುಶ್ರೀ ಶಿವಾನಿ ಬಿ.ಎಸ್ ಮತ್ತು ನಮಿತಾ ವೈ ಯನ್ ಎಚ್.ಎಚ್..ಬಿ.ಎಸ್.ಎಚ್.ಎಸ್.ಎಸ್. ಎಡನೀರು. ತೃತೀಯ-ಪುಷ್ಪಾ ಕೆ ಮತ್ತು ಜ್ಯೋತಿ ಲಕ್ಷ್ಮಿ ಎಸ್.ಜಿ.ಕೆ.ಎಚ್.ಎಸ್.ಕೂಡ್ಲು ಹಾಗೂ ಅಭಿಜಿತ್ ಕೆ.ಜೆ.ಮತ್ತು ಹರ್ಷವರ್ಧನ ಪಿ.ಜಿ. ಜಿ.ಎಚ್.ಎಸ್.ಎಸ್. ಬಂದಡ್ಕ.
ಹೈಯರ್ ಸೆಕಂಡರಿ ಶಾಲಾ ವಿಭಾಗ ಕಥಾರಚನೆಃ ಪ್ರಥಮ-ರಮ್ಯ ಶ್ರೀಎ, ಎಚ್.ಎಚ್..ಬಿ.ಎಸ್.ಎಚ್.ಎಸ್.ಎಸ್. ಎಡನೀರು. ದ್ವಿತೀಯ-ಫಾತಿಮತ್ ಅಸೀಬಾ, ಎನ್.ಎಚ್.ಎಸ್.ಎಸ್.ಪೆರಡಾಲ.
ಹೈಯರ್ ಸೆಕಂಡರಿ ಶಾಲಾ ವಿಭಾಗ ಕವಿತಾರಚನೆಃ ಪ್ರಥಮ- ವಿನಯ ಕೆ, ಎಚ್.ಎಚ್..ಬಿ.ಎಸ್.ಎಚ್.ಎಸ್.ಎಸ್. ಎಡನೀರು. ದ್ವಿತೀಯ-ಹರ್ಷಲತ, ಎನ್.ಎಚ್.ಎಸ್.ಎಸ್.ಪೆರಡಾಲ. ತೃತೀಯ-ಶ್ರೀಜಾ ರೈ, ಬಿ..ಆರ್.ಎಚ್.ಎಸ್.ಎಸ್.ಬೋವಿಕ್ಕಾನ.
ಹೈಯರ್ ಸೆಕಂಡರಿ ಶಾಲಾ ವಿಭಾಗ ಸಾಹಿತ್ಯ ರಸಪ್ರಶ್ನೆಃ ಪ್ರಥಮ-ನಿಶಾ ಭಟ್ ಮತ್ತು ನಿಶ್ಮಿತಾ ಕುಮಾರಿ ಎಸ್.ಆರ್,ಎಚ್.ಎಚ್..ಬಿ.ಎಸ್.ಎಚ್.ಎಸ್.ಎಸ್. ಎಡನೀರು. ದ್ವಿತೀಯ-ಅಖಿಲಾ ಎ೦ ಮತ್ತು ನವ್ಯ ಶ್ರೀ ಕೆ.ಎನ್, ಎಸ್.ಎಸ್.ಎಚ್.ಎಸ್.ಎಸ್. ಶೇಣಿ. ತೃತೀಯ-ದಿವ್ಯಶ್ರೀ ಮತ್ತು ವೈಶಾಲಿ ಎನ್.ಎಚ್.ಎಸ್.ಎಸ್.ಪೆರಡಾಲ.


ಸುಬ್ರಹ್ಮಣ್ಯ ಭಟ್ ಕೆ
ಪ್ರಧಾನ ಕಾರ್ಯದರ್ಶಿ

Monday 9 November 2015


09-11-2015
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ.
ಬೀರಂತಬೈಲು ಕಾಸರಗೋಡು.

ಪ್ರಿಯರೇ,
             ನಾಡೋಜ ಡಾ.ಕಯ್ಯಾರರ ಸ್ಮರಣಾರ್ಥ ಕಾಸರಗೋಡಿನ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳನ್ನುಮತ್ತು ಅವರ ಕವಿತೆಗಳನ್ನು ನೆನಪಿಸುವ ಮೂಲಕ "ಕಯ್ಯಾರರಿಗೆ ಅಕ್ಷರಾಂಜಲಿ' ಅರ್ಪಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ನಿರ್ಧರಿಸಿದೆ. ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇದು ನೆರವಾಗಬಹುದೆಂಬ ನಂಬಿಕೆ ನಮಗಿದೆ. ಇದರೊಂದಿಗೆ ಕಾಸರಗೋಡಿನ ಪ್ರತಿಷ್ಠಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ತ್ಯಿಕ ಸೇವೆಗಳಿಂದ ಜನಮನ ಗೆದ್ದು ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತಗೊಂಡು ಇದೀಗ ರಾಷ್ಟ್ರ ಪ್ರಶಸ್ತಿ ಪುರಸ್ಕೃತಾದ ಶ್ರೀ ಶಂಕರ್ ಸಾರಡ್ಕ ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲು ಸಂತೋಷಪಡುತ್ತೇವೆ. ದಿನಾಂಕ 14-11-2015 ನೇ ಶನಿವಾರ ಅಪರಾಹ್ನ 2-30 ಕ್ಕೆ ನವಜೀವನ ಹೈಯರ್ ಸೆಕಂಡರಿ ಶಾಲೆಯಲ್ಲಿ ಸದ್ರಿ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡಾಭಿಮಾನಿಗಳಾದ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸುತ್ತಿದ್ದೇವೆ.

ಸ್ಥಳಃ ಪೆರಡಾಲ ಅಧ್ಯಕ್ಷರು/ಸಂಚಾಲಕರು,
ದಿನಾಂಕಃ 15-10-2015 ಕಾರ್ಯಕ್ರಮ ಸಮಿತಿ. "ಕಯ್ಯಾರರಿಗೆ ಅಕ್ಷರಾಂಜಲಿ'
ನವಜೀವನ ಹೈಯರ್ ಸೆಕಂಡರಿ ಶಾಲೆ, ಪೆರಡಾಲ.
ಕಾರ್ಯಕ್ರಮಗಳು
"ಕಯ್ಯಾರರಿಗೆ ಅಕ್ಷರಾಂಜಲಿ' ಮತ್ತು ಶ್ರೀ ಶಂಕರ್ ಸಾರಡ್ಕ ಇವರಿಗೆ ಅಭಿನಂದನೆ
ಪ್ರಾರ್ಥನೆಃ ಶಾಲಾ ಮಕ್ಕಳಿಂದ
ಸ್ವಾಗತಃ ಶ್ರೀ ಕೆ ಶ್ಯಾಮ ಭಟ್, ಸಂಚಾಲಕರು ಸಂಘಟಕ ಸಮಿತಿ.
ಪ್ರಸ್ತಾವನೆಃ ಶ್ರೀ ಅಬ್ದುಲ್ ರಹಿಮಾನ್ ಎನ್, ಸಂಘಟನಾ ಕಾರ್ಯದರ್ಶಿ ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಅಧ್ಯಕ್ಷರುಃ ಶ್ರೀ ಎಸ್.ವಿ.ಭಟ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ.
ಉದ್ಘಾಟಕರುಃ ಶ್ರೀ ಸೂರ್ಯ ಎನ್.ಶಾಸ್ತ್ರಿ. ಪ್ರಬಂಧಕರು, ನವಜೀವನ ಹೈಯರ್ ಸೆಕಂಡರಿ ಶಾಲೆ ಪೆರಡಾಲ.
ಅಕ್ಷರಾಂಜಲಿಃ ಶ್ರೀ ಡಾ/ಕಮಲಾಕ್ಷ ಕೆ ಪ್ರಾಂಶುಪಾಲರು, ನಲಂದ ಕಲಾ-ವಿಜ್ಞಾನ ಕಾಲೇಜು ಪೆರ್ಲ.
ಶ್ರೀ ಬೇ.ಸಿ.ಗೋಪಾಲಕೃಷ್ಣ ಭಟ್. ವಿಶ್ರಾಂತ ಪ್ರಾಂಶುಪಾಲರು,
ಮುಖ್ಯ ಅತಿಥಿಗಳುಃ ಶ್ರೀ ವೇಣುಗೋಪಾಲನ್ ಇ, ಜಿಲ್ಲಾ ಶಿಕ್ಷಣಾಧಿಕಾರಿಗಳು.ಕಾಸರಗೋಡು.
ಶ್ರೀ ಮಹಾಲಿಂಗೇಶ್ವರ ರಾಜ್, ಜಿಲ್ಲಾ ಶಿಕ್ಷಣಾಧಿಕಾರಿಗಳು.ಕಾಞ್ಞಂಗಾಡು.
ಶ್ರೀ ಕೈಲಾಸ ಮೂರ್ತಿ, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು, ಕುಂಬಳೆ ಉಪಜಿಲ್ಲೆ.
ಶ್ರೀ ನಂದಿಕೇಶನ್, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು, ಮಂಜೇಶ್ವರ ಉಪಜಿಲ್ಲೆ.
ಶ್ರೀ ರವೀಂದ್ರನಾಥ್, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು, ಕಾಸರಗೋಡು ಉಪಜಿಲ್ಲೆ.
ಗೌರವ ಉಪಸ್ಥಿತಿಃ ಶ್ರೀ ಡಾ. ಪ್ರಸನ್ನ ರೈ ಪ್ರಾಚಾರ್ಯರು, ಸಂತ ಫಿಲೊಮಿನಾ ಕಾಲೇಜು ಪುತ್ತೂರು.
ಶ್ರೀ ಮಹಾಲಿಂಗೇಶ್ವರ ಭಟ್ ಎ೦.ವಿ. ಅಧ್ಯಕ್ಷರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ಚಿದಾನಂದ ಭಟ್ ಅಧ್ಯಕ್ಷರು ಕಾರ್ಯಕ್ರಮ ಸಮಿತಿ
ಶ್ರೀ ಕೆ.ವಿ.ಸತ್ಯನಾರಾಯಣ ರಾವ್ , ಉಪಾಧ್ಯಕ್ಷರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ಸತ್ಯನಾರಾಯಣ ಭಟ್ ಕೆ, ಉಪಾಧ್ಯಕ್ಷರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ವಿಶಾಲಾಕ್ಷ. ಪುತ್ರಕಳ ಅಧಿಕೃತ ವಕ್ತಾರರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿ, ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀಮತಿ ಜ್ಯೋತಿ ಕೆ,ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲಾ ಘಟಕ.
ಶ್ರೀ ರವೀಂದ್ರನಾಥ್ ಬಲ್ಲಾಳ್ ,ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕ.
ಶ್ರೀ ಸುಭಾಷ್ ,ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು ಉಪಜಿಲ್ಲಾ ಘಟಕ.
ಶ್ರೀಮತಿ ಪುಷ್ಪಾವತಿ, ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಬೇಕಲ-ಹೊಸದುರ್ಗ ಉಪಜಿಲ್ಲಾ ಘಟಕ.
ಬಹುಮಾನ ವಿತರಣೆಃ
ಧನ್ಯವಾದಃಶ್ರೀ ಪ್ರದೀಪ್ ಕುಮಾರ್ ಕೆ, ಕಾರ್ಯದರ್ಶಿ, ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲಾ ಘಟಕ.
ಜನಗಣಮನ