FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Thursday, 9 October 2014


-->
 09-10-2014
ಮಾಯಿಪ್ಪಾಡಿ ಶಿಕ್ಷಣ ಸಂಸ್ಥೆಯಲ್ಲಿ 1986 ರಿಂದ 1988ರ ವರೆಗಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕ ತರಬೇತಿ ಪಡೆದ ಸಹಪಾಠಿಗಳ ವತಿಯಿಂದ
ಕವಿಕಯ್ಯಾರರಿಗೊಂದು
ಕನ್ನಡ ಕುಸುಮ
ಪ್ರಿಯರೇ,
            ಕಾಸರಗೋಡಿನ ಕವಿ ಕಯ್ಯಾರರು  ಶತಮಾನವನ್ನು ಕಂಡ ಹಿರಿಯ ಚೇತನವೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಜಗದಗಲ ಖ್ಯಾತಿ ಹೊಂದಿದ ಶ್ರೀಯುತರ ಶತಮಾನೋತ್ಸವ ಸಂಭ್ರಮದ ಈ ವರ್ಷ ಅವರಿಗೊಂದು ಕಿರು ಕಾಣಿಕೆಯನ್ನು ಕೊಡುವ ಸದುದ್ದೇಶದಿಂದ ನಮ್ಮ ಸಹಪಾಠಿಗಳ ಬಳಗ ಕಯ್ಯಾರರಿಗೊಂದು ಕನ್ನಡ ಕುಸುಮ ಎ೦ಬ ಶ್ರಾವ್ಯ ಅಡಕಮುದ್ರಿಕೆಯನ್ನು ತಯಾರಿಸಿ ಎಲ್ಲಾ ಕನ್ನಡ ಮಾಧ್ಯ ಶಾಲೆಗಳಿಗೆ ತಲಪಿಸಲು ತೀರ್ಮಾನಿಸಿದೆ. ಇದರಲ್ಲಿ ಕಯ್ಯಾರರ ಕೆಲವುಜನಪ್ರಿಯ ಹಾಡುಗಳು ಮಾತ್ರವಲ್ಲದೆ ಕಂಠಪಾಠವಾಗಿ ಹಾಡಬಹುದಾದ ಕೆಲವು ಕಾವ್ಯಭಾಗಗಳು,ಮಂಜೇಶ್ವರಗೋವಿಂದಪೈ,ಕುವೆಂಪು ಬೀ.ಎ೦.ಶ್ರೀಕಂಠಯ್ಯ,ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ,ವಿ.ಬಿ.ಕುಳಮರ್ವ,ಮಾದಲಾದವರ ಹಾಡುಗಳು, ಸರ್ವಜ್ಞ ವಚನಗಳು ಮತ್ತು ಕನಕದಾಸರ ಕೀರ್ತೆನೆಗಳೇ ಮೊದಲಾದವುಗಳನ್ನು ಅಳವಡಿಸಲಾಗಿದೆ.ಈ ಹಾಡುಗಳಿಗೆ ಕಾಸರಗೋಡಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳು ದ್ವನಿಗೂಡಿಸಿದ್ದಾರೆ. ಖ್ಯಾತ ಸಂಗೀತ ವಿದ್ವಾಂಸರಾದ ಬಳ್ಳಪದವು ಯೋಗೀಶ್ ಶರ್ಮರೇ ಮೊದಲಾದ ಸಂಪನ್ನ ವ್ಯಕ್ತಿಗಳ ಸಲಹೆಯೊಂದಿಗೆ ಧ್ವನಿ ಮುದ್ರಿಸಿ ಇದನ್ನು ಸಿದ್ಧಗೊಳಿಸಿ ನಿಮ್ಮ ಮುಂದಿಡಲು ಸಂತೋಷಪಡುತ್ತಿದ್ದೇವೆ. ಇದರ ಔಪಚಾರಿಕ ಉದ್ಘಾಟನೆಯು ಇದೇ ಬರುವ ತಾರೀಕು 19-10-2014 ನೇ ರವಿವಾರ ಬೆಳಗ್ಗೆ10.00 ಗಂಟೆಗೆ ಕನ್ನಡ ಅಧ್ಯಾಪಕ ಭವನ ಬೀರಂತಬೈಲಿನ ಸಭಾಂಗಣದಲ್ಲಿ ನಡೆಯಲಿದೆ.ಎಲ್ಲಾ ಸಹೃದಯ ಬಂಧುಗಳನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.
ತಾರೀಕುಃ 8-10-2014                                 ಅಧ್ಯಕ್ಷರು ಮತ್ತು ಸದಸ್ಯರು
ಸ್ಥಳಃ ಮಾಯಿಪ್ಪಾಡಿ.                                            ಸಂಘಟನಾ ಸಮಿತಿ.

No comments:

Post a Comment