01-10-2014
ಶಿಕ್ಷಣ ಸಚಿವರು ಕರೆದ ಅಂಗೀಕೃತ ಅಧ್ಯಾಪಕ ಸಂಘಟನೆಗಳ ಸಭೆಯಲ್ಲಿ,
ತಿರುವನಂತಪುರ, ಶಿಕ್ಷಣ ಸಚಿವರಾ ಶ್ರೀ ಅಬ್ದು ರಬ್ ರವರು ಕರೆದ ಅಧ್ಯಾಪಕ ಸಂಘಟನೆಗಳ ಸಭೆಯಲ್ಲಿ ಅಧ್ಯಾಪಕರ ಹುದ್ದೆ ನಿರ್ಣಯ ಮತ್ತು ಪುನರ್ವಿನ್ಯಾಸ, ಭಾಷಾ ಅಧ್ಯಾಪಕರ ನೇಮಕಾತಿಯಲ್ಲಿ ಬಂದ ಲೋಪದೋಷ, ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಆರ್.ಎಂ.ಎಸ್.ಎ. ಶಾಲೆಗಳ ಕುರಿತು ಅವಲೋಕನ, ಶಾಲೆಗಳ ಮಧ್ಯಾಹ್ನ ಭೋಜನದ ಕುರಿತಾದನೂತನ ನೀತಿ ಮತ್ತು ಸ್ವಚ್ಛ ಭಾರತದ ಸಂಕಲ್ಪ ಮೊದಲಾದ ವಿಚಾರಗಳನ್ನು ಚರ್ಚಿಸಲಾಯಿತು.ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಭಾಗವಿಸಿದರು. ಶಾಲಾ ಕಲೋತ್ಸವ ಮ್ಯಾನುವಲ್ ನಲ್ಲಿ ಸೇರಿಸಬೇಕಾದ ಕನ್ನಡದ ಸ್ಪರ್ಧೆಗಳ ಕುರಿತು, ಸ್ಟೆಟೆಸ್ಕೋ ವ್ಯವಸ್ಥೆಯನ್ನು ಕನ್ನಡ ಶಾಲೆಗಳಿಗೂ ಏರ್ಪಡಿಸಬೇಕು ಮತ್ತು ಕಾಸರಗೋಡಿನಲ್ಲಿ ಯಾವುದು ಅಲ್ಪಸಂಖ್ಯಾತ ಭಾಷೆಯೆಂದು ತಿಳಿಯದ ಅಧಿಕಾರಿಗಳಿಗೆ ಸ್ಪಷ್ಟೀಕರಣ ನೀಡುವಂತೆ ಮನವಿ ಮೊದಲಾದವುಗಳನ್ನು ನೀಡಿ ಅದರ ಕುರಿತು ಅಧಿಕೃತರೊಡನೆ ಚರ್ಚಿಸಲಾಯಿತು. ಎ.ಜಿ.ಕಛೇರಿಯಲ್ಲಿ ತಡೆಹಿಡಿಯಲಾಗಿದ್ದ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಒತ್ತಾಯಿಸಲಾಗಿದೆ.
No comments:
Post a Comment