ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ ಕಾಸರಗೋಡು ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ನಿವೃತ್ತ ಶಿಕ್ಷಣ ಉಪನಿರ್ದೇಶಕರಾದ ಶ್ರೀ ದಿನೇಶ್ ವಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
FLASH NEWS
Saturday, 28 June 2025
Sunday, 8 December 2024
ಅಧ್ಯಾಪಕರ ಕಲೋತ್ಸವ - ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು :
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ (ರಿ) ಕಾಸರಗೋಡು
ಅಧ್ಯಾಪಕರ ಕಲೋತ್ಸವ
ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು
🏆🏆 ಜಾನಪದ ಗೀತೆ ಗಾಯನ 🏆🏆
🥇ಪ್ರಥಮ : ಅನುಷ ಎಸ್ - ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಕುಂಬಳೆ
🥈ದ್ವಿತೀಯ : ಶೋಭಿತಾ ಎನ್ - ಶ್ರೀ ಶಾರದಾ ಎ.ಎಲ್.ಪಿ.ಶಾಲೆ ಕನಿಯಾಲ &
ದಿವಾಕರ ಬಲ್ಲಾಳ್ ಎ.ಬಿ - ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು
🥉ತೃತೀಯ : ಎನ್ ಮಹಾಲಿಂಗ ಭಟ್ - ಎ.ಯು.ಪಿ.ಶಾಲೆ ಧರ್ಮತ್ತಡ್ಕ &
ರಮ್ಯಶ್ರೀ ಜಿ.ಯು.ಪಿ.ಶಾಲೆ ನುಳ್ಳಿಪ್ಪಾಡಿ
🏆🏆 ಕವಿತಾ ರಚನೆ 🏆🏆
🥇ಪ್ರಥಮ : ಜ್ಯೋತ್ಸ್ನಾ ಯಂ ಎನ್ ಎಚ್ ಎಸ್ ಎಸ್ ಪೆರಡಾಲ
🥈ದ್ವಿತೀಯ : ಡಾ.ಸೌಮ್ಯ ಪಿ. ಜಿ.ಎಚ್ ಎಸ್ ಎಸ್ ಮೊಗ್ರಾಲ್ ಪುತ್ತೂರು
🥉ತೃತೀಯ : ಅಶ್ವಿನಿ ಪ್ರದೀಪ್ ಎ.ಜೆ.ಬಿ ಶಾಲೆ ಪುತ್ತಿಗೆ
🏆🏆 ಆಶುಭಾಷಣ 🏆🏆
🥇ಪ್ರಥಮ : ಶ್ರೀರಾಮ ಕೆದುಕೋಡಿ ಎಸ್.ಡಿ.ಪಿ.ಎ.ಯು.ಪಿ ಶಾಲೆ ಸಜಂಕಿಲ
🥈ದ್ವಿತೀಯ : ವಿಠಲ ಎ ಜಿ.ಎಲ್.ಪಿ ಶಾಲೆ ಕಲ್ಲಪಳ್ಳಿ
🥉ತೃತೀಯ : ದಿವಾಕರ ಬಲ್ಲಾಳ್ ಎ.ಬಿ - ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು
🏆🏆 ಚಿತ್ರರಚನೆ 🏆🏆
🥇ಪ್ರಥಮ : ಜಯಪ್ರಕಾಶ್ ಶೆಟ್ಟಿ ಬೇಳ ಎಸ್.ಎ.ಟಿ.ಎಚ್ ಶಾಲೆ ಮಂಜೇಶ್ವರ
🥈ದ್ವಿತೀಯ : ಉಮೇಶ ಕೆ. ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಬೆರಿಪದವು
🥉ತೃತೀಯ : ಪ್ರದೀಪ್ ಕುಮಾರ್ ಶೆಟ್ಟಿ ಎ.ಎಲ್.ಪಿ ಶಾಲೆ ಕಿಳಿಂಗಾರು
🏆🏆 ಕಥಾ ರಚನೆ 🏆🏆
🥇ಪ್ರಥಮ : ರಾಜೇಶ್ ಎಸ್. ಜಿ.ಎಚ್.ಶಾಲೆ ಪೆರಡಾಲ
🥈ದ್ವಿತೀಯ : ಡಾ. ಶ್ರೀಶಕುಮಾರ್ ಪಂಜಿತ್ತಡ್ಕ ಜಿ.ವಿ.ಎಚ್.ಎಸ್ ಶಾಲೆ ಕಾರಡ್ಕ &
ಡಾ. ಸೌಮ್ಯ ಪಿ. ಜಿ ಎಚ್ ಎಸ್ ಶಾಲೆ ಮೊಗ್ರಾಲ್ ಪುತ್ತೂರು
🥉ತೃತೀಯ : ರಮ್ಯಶ್ರೀ ಜಿ.ಯು.ಪಿ.ಶಾಲೆ ನುಳ್ಳಿಪ್ಪಾಡಿ &
ಸವಿತಾ ಸಿ ಎಚ್ ಎಸ್.ಎಸ್ ಎ ಎಲ್ ಪಿ ಶಾಲೆ ಪನೆಯಾಲ
ಎಲ್ಲಾ ವಿಜೇತರಿಗೂ ಅಭಿನಂದನೆಗಳು ಹಾಗೂ ಭಾವವಹಿಸಿದ ಎಲ್ಲರಿಗೂ ಧನ್ಯವಾದಗಳು....
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕಲೋತ್ಸವ :
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕಲೋತ್ಸವ ಕಾಸರಗೋಡು ಬೀರಂತಬೈಲು ಅಧ್ಯಾಪಕ ಭವನದಲ್ಲಿ ಜರಗಿತು.
Thursday, 5 December 2024
ಕನ್ನಡ ಎಲ್.ಪಿ ಎಸ್ ಟಿ ಹುದ್ದೆಗಳ ಭರ್ತಿಗೆ ಕನ್ನಡ ಅಧ್ಯಾಪಕರ ಸಂಘ ಆಗ್ರಹ
ಕಾಸರಗೋಡು ಕನ್ನಡ ಶಾಲೆಗಳಲ್ಲಿನ ಎಲ್.ಪಿ.ಎಸ್ ಟಿ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಕೇಂದ್ರ ಸಮಿತಿಯು ಆಗ್ರಹಿಸಿದೆ. ಉಪಜಿಲ್ಲಾ ಮಟ್ಟ ಹಾಗೂ ಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳಲ್ಲಿ ಕನ್ನಡದ ಅವಗಣನೆಯನ್ನು ಖಂಡಿಸಲಾಯಿತು.ಕನ್ನಡ ದೈಹಿಕ ಶಿಕ್ಷಣ ಅಧ್ಯಾಪಕರ ನೇಮಕಾತಿಯನ್ನು ತ್ವರಿತ ಗೊಳಿಸಲು ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರತ್ ಕುಮಾರ್, ಅಧಿಕೃತ ವಕ್ತಾರರಾದ ಸುಕೇಶ, ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.
Sunday, 21 July 2024
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ವತಿಯಿಂದ ಕೆ.ಎಸ್.ಆರ್, ಕೆ.ಇ.ಆರ್ ಇಲಾಖೆ ಪರೀಕ್ಷಾ ತರಗತಿ
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ವತಿಯಿಂದ ಅಧ್ಯಾಪಕರು, ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದುವ 2024 ರ ಇಲಾಖೆ ಪರೀಕ್ಷೆ ಕೆ.ಎಸ್.ಆರ್ ಮತ್ತು ಕೆ.ಇ.ಆರ್ ನ ತರಗತಿಯ ಉಧ್ಘಾಟನೆಯನ್ನು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ನಡೆಸಿತು. ಸತತ ಐದು ವರ್ಷಗಳಿಂದ ಕನ್ನಡ ಮಾಧ್ಯಮ ಅಧ್ಯಾಪಕರಿಗೆ ಇಲಾಖಾ ಪರೀಕ್ಷೆಯ ತರಬೇತಿ ತರಗತಿಗಳನ್ನು ಉಚಿತವಾಗಿ ಕನ್ನಡ ಅಧ್ಯಾಪಕ ಸಂಘಟನೆಯು ನೀಡುತ್ತಾ ಬಂದಿದೆ. 2024 ನೇ ಸಾಲಿನ ಈ ತರಬೇತಿ ತರಗತಿಯನ್ನು ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಮಹಾಲಿಂಗೇಶ್ವರ ರಾಜ್ .ಡಿ.ಯಂ ಉದ್ಘಾಟಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷರಾದ ಜಯರಾಮ ಸಿ.ಎಚ್ ಶುಭಾಶಂಸನೆಗೈದರು.ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ ನವಪ್ರಸಾದ್, ಮಂಜೇಶ್ವರ ಉಪಜಿಲ್ಲಾ ಘಟಕದ ಶ್ರೀರಾಮ ಕೆದುಕೋಡಿ, ಹೋಲಿ ಫ್ಯಾಮಿಲಿ ಶಾಲಾ ಅಧ್ಯಾಪಕ ಸನತ್ ಕುಮಾರ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು. ಕೇಂದ್ರ ಸಮಿತಿ ಸದಸ್ಯರಾದ ನವೀನ್ ಕುಮಾರ್ ಪಿ ವಂದಿಸಿದರು. ಕೇಂದ್ರ ಸಮಿತಿ ಕೋಶಾಧಿಕಾರಿ ಶರತ್ ಕುಮಾರ್ ಯಂ ಕಾರ್ಯಕ್ರಮ ನಿರೂಪಿಸಿದರು.
Saturday, 9 March 2024
2023-24 ನೇ ಸಾಲಿನ ವಿದಾಯಕೂಟ ಸಮಾರಂಭ :
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.
Saturday, 10 February 2024
ಕನ್ನಡ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಮಹಾಸಭೆ
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆಯು ಇಂದು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.