FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 21 September 2015


21-09-2015.
ಕನ್ನಡ ಅಧ್ಯಾಪಕ ಸಂಘದ ವತಿಯಿಂದ ಪದಾಧಿಕಾರಿಗಳಿಗೆ ಬಲವರ್ಧನೆಯ ಶಿಬಿರ ಅನಿವಾರ್ಯ- ಇ ವೇಣುಗೋಪಾಲನ್. ಜಿಲ್ಲಾ ಶಿಕ್ಷಣಾಧಿಕಾರಿ.  
ಕಾಸರಗೋಡು, ಕನ್ನಡ ಅಧ್ಯಾಪಕ ಸಂಘದ ಸದಸ್ಯರೆಲ್ಲರೂ ಸಂಘಟನೆಯ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಿಸಿ ಪ್ರಚಲಿತ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಶೈಕ್ಷಣಿಕ ವಿಚಾರಗಳಾಗಲಿ, ಆಡಳಿತಾತ್ಮಕ ವಿಚಾರಗಳಾಗಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಪ್ರತ್ಯೇಕ ಪರಿಗಣನೆ ಇದ್ದೇ ಇದೆ. ಆದರೆ ಅವುಗಳ ಕೊಡು ಕೊಳ್ಳುವಿಕೆಯಲ್ಲಿ ಅರಿವಿನ ಕೊರತೆಯು ತೊಡಕಾಗಿದೆ. ಇದಕ್ಕಾಗಿ ಅಧ್ಯಾಪಕರ ಸಂಘವು ಸಂಘಟನೆಯ ಸದಸ್ಯರಿಗೆ ಶಿಬಿರಗಳನ್ನು ಕಡ್ಡಾಯಗೊಳಿಸಿ ಬಲವರ್ಧನೆ ಮಾಡಬೇಕು. ಕೇರಳದ ರಾಜಕೀಯ ಬೆಂಬಲಿತ ಸಂಘಟನೆಗಳಲ್ಲಿ ಇದು ನಡೆಯುತ್ತಿದ್ದು ಇದನ್ನು ನಾವೂ ಅನುಕರಸಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎ೦ದು ಕಾಸರಗೋಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿ ಇ ವೇಣುಗೋಪಾಲನ್ ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಉಪಾಧ್ಯಕ್ಷರುಗಳಾದ ಕೆ.ವಿ.ಸತ್ಯನಾರಾಯಣ ರಾವ್, ಡಾ.ರತ್ನಾಕರ ಮಲ್ಲಮೂಲೆ, ಖಜಾಂಜಿ ಪದ್ಮಾವತಿ ಎ೦ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಸುಕೇಶ್ ಎ ವಂದಿಸಿದರು ಪುರುಷೋತ್ತಮ ಕುಲಾಲ್ ನಿರೂಪಿಸಿದರು.
ನಂತರ ವರದಿ ವಾಚನ, ಲೆಕ್ಕಪತ್ರ ಮಂಡನೆ, ಸದಸ್ಯರಿಂದ ಚರ್ಚೆ, ಕ್ರೋಡೀಕರಣ ನಡೆಯಿತು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮಹಾಲಿಂಗೇಶ್ವರ ಭಟ್ ಎ೦.ವಿ.ಮುಖ್ಯ ಶಿಕ್ಷಕರು, ಝಡ್. .ಎಲ್.ಪಿ.ಎಸ್. ಕುಂಜಾರು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಮುಖ್ಯ ಶಿಕ್ಷಕರು,ಜಿ.ಎಲ್.ಎಸ್ ಮಾಣಿಮೂಲೆ, ಖಜಾಂಜಿ ಸುಕೇಶ ಎ ಜಿ.ಯು.ಪಿ.ಎಸ್. ಮೂಡಂಬೈಲು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಜಿ.ಎಚ್.ಎಸ್.ಎಸ್. ಅಂಗಡಿಮೊಗರು, ಉಪಾಧ್ಯಕ್ಷರುಗಳಾಗಿ ಕೆ.ವಿ.ಸತ್ಯನಾರಾಯಣ ರಾವ್ ಮುಖ್ಯ ಶಿಕ್ಷಕರು, ಜಿ.ಎಚ್.ಎಸ್.ಸೂರಂಬೈಲು ಮತ್ತು ಕೆ.ಸತ್ಯನಾರಾಯಣ ಭಟ್ ಮುಖ್ಯ ಶಿಕ್ಷಕರು ಎ.ಯು.ಪಿ.ಎಸ್. ಆನೆಕಲ್ಲು, ಜತೆ ಕಾರ್ಯದರ್ಶಿಗಳಾಗಿ ಪ್ರಭಾವತಿ ಕೆದಿಲ್ಲಾಯ ಎನ್.ಎಚ್.ಎಸ್.ಪೆರಡಾಲ ಮತ್ತು ಉಮೇಶ ಕೆ ಮುಖ್ಯ ಶಿಕ್ಷಕರು ವಿ..ಎಲ್.ಪಿ.ಎಸ್ ಬೆರಿಪದವು, ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ ಎಸ್.ಜಿ.ಕೆ.ಎಚ್.ಎಸ್.ಕೂಡ್ಲು, ಲೆಕ್ಕಪರಿಶೋಧಕರಾಗಿ ಡಿ.ಮಹಾಲಿಂಗೇಶ್ವರ ರಾಜ್ ಜಿಲ್ಲಾ ಶಿಕ್ಷಣಾಧಿಕಾರಿ ಕಾಞ್ಞಂಗಾಡು ಮತ್ತು ಬಿ.ಸೂರ್ಯನಾರಾಯಣ ಮುಖ್ಯ ಶಿಕ್ಷಕರು ಎ.ಎಲ್.ಪಿ.ಎಸ್. ಬೆಳಿಂಜೆ ಆಯ್ಕೆಯಾದರು.

Tuesday 15 September 2015


ಅಧ್ಯಕ್ಷರುಃ ಸುಭಾಷ್ ಚಂದ್ರ ಎಂ.ಕೆ.
ಕಾರ್ಯದರ್ಶಿಃ ನವೀನ್ ಕುಮಾರ್
ಖಜಾಂಜಿಃ ಬಾಬು,ಕೆ.