FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 26 July 2015


-->
26-07-2015
ಅಧ್ಯಾಪಕ ಧ್ವನಿ ಕನ್ನಡಿಗರಿಗೆ ದಾರಿದೀಪವಾಗಲಿ-ಎಸ್.ವಿ.ಭಟ್.
 ಕಾಸರಗೋಡು. ಜು.25, ಕಾಸರಗೋಡಿನಲ್ಲಿ ಕನ್ನಡಿಗರು ಒಗ್ಗಟ್ಟಿನಿಂದ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಇದೆ. ಶಿಕ್ಷಣ ಕ್ಷೇತ್ರದಿಂದ ಹಿಡಿದು ಎಲ್ಲಾ ಔದ್ಯೋಗಿಕ ವಲಯಗಳಲ್ಲಿಯೂ ನಮ್ಮ ಸ್ವಂತಿಕೆಯನ್ನು ಪ್ರತಿಬಿಂಬಿಸಲು ನಮ್ಮ ಕನ್ನಡ ಸಂಘಟನೆಗಳು ಸಮರ್ಥವಾಗಿದೆ. ಈ ನಿಟ್ಟಿನಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎ೦ದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಇದರ ಅಧ್ಯಕ್ಷರಾದ ಎಸ್.ವಿ.ಭಟ್ ನುಡಿದರು. ಅವರು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಿದ ಅಧ್ಯಾಪಕ ಧ್ವನಿ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಗರದ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಸಂಘಟನೆಯ ಮುಖವಾಣಿ ಅಧ್ಯಾಪಕ ಧ್ವನಿ ಬಿಡಗಡೆ ಸಮಾರಂಭ ಏರ್ಪಡಿಸಲಾಗಿತ್ತು. ಅಧ್ಯಾಪಕ ಧ್ವನಿ ಬಿಡುಗಡೆಯ ಬಳಿಕ ಕಾಸರಗೋಡು ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿ ಭಡ್ತಿಗೊಂಡ ಇ.ವೇಣುಗೋಪಾಲನ್ , ಕೊಟ್ಟಾರಕರ ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿಭಡ್ತಿ ಹೊಂದಿದ ಡಿ.ಮಹಾಲಿಂಗೇಶ್ವರ ರಾಜ್ ಮತ್ತು ಡಾಕ್ಟರೇಟ್ ಗಳಿಸಿದ ಹಿರಿಯ ಶಿಕ್ಷಕರಾದ ಶಶಿರಾಜ ನೀಲಂಗಳ ಅಭಿನಂದನೆ ಸಲ್ಲಿಸಲಾಯಿತು. ಪ್ರೊ/ವಾಸುದೇವ ಚಾಪಾಡಿ ಪ್ರಾಯೋಜಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಕು/ಪ್ರಥಮ್, ಜಿ.ಎಫ್.ಎಚ್.ಎಸ್.ಎಸ್.ಬೇಕಲ್ ಮತ್ತು ಕು/ದಿವ್ಯಶ್ರೀ ಪಿ. ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲು ಇವರಿಗೆ ನೀಡಲಾಯಿತು. ಹರ್ಷವರ್ಧನ ಭಟ್ ಸರ್ಪಂಗಳ ಸ್ಮಾರಕ ಪ್ರಶಸ್ತಿಯನ್ನು ಕು/ಕಾವ್ಯ ಜಿ., ಶ್ರೀ ಶಾರದಾಂಬಾ ಹೈಯರ್ ಸೆಕಂಡರಿ ಶಾಲೆ ಶೇಣಿ ಇವರಿಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಕೆ.ಪಿ.ಎಚ್.ಎಸ್.. ರಾಜ್ಯಾಧ್ಯಕ್ಷರಾದ ರವೀಂದ್ರನಾಥ್ ನಾಯಕ್, ಶಿಕ್ಷಣ ಇಲಾಖೆಯ ಉದ್ಯೋಗಸ್ಥರು ಮತ್ತು ಕನ್ನಡ ಅಧ್ಯಾಪಕರ ಸಂಯುಕ್ತ ಸಂಘಟನೆಯ ಅಧ್ಯಕ್ಷರಾದ ಅರವಿಂದ ಕುಮಾರ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಖಜಾಂಜಿ ಪದ್ಮಾವತಿ ಎ೦. ವಂದಿಸಿದರು. ಬಾಬು ಕೆ ಕಾರ್ಯಕ್ರಮ ನಿರ್ವಹಿಸಿದರು.

Sunday, 19 July 2015

19-07-2015
-->
ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರಶಸ್ತಿ ಜುಲೈ 26 ರಂದು.
ಕಾಸರಗೋಡು, ಪ್ರೊ/ ವಾಸುದೇವ ಚಾಪಾಡಿ ಪ್ರಾಯೋಜಿತ ವಿದ್ಯಾರ್ಥಿ ಪ್ರಶಸ್ತಿ ಮತ್ತು ದಿ.ಹರ್ಷವರ್ಧನ ಭಟ್ ಸರ್ಪಂಗಳ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ26ರಂದು ಕಾಸರಗೋಡು ನಗರದ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಲಿದೆ. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ವೇಣುಗೋಪಾಲನ್, ಕೊಟ್ಟಾರಕರ ಜಿಲ್ಲಾ ಶಿಕ್ಷಣಾಧಿಕಾರಿ ಮಹಾಲಿಂಗೇಶ್ವರ ರಾಜ್ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷರಾದ ಎಸ್.ವಿ.ಭಟ್, ವಿಶ್ರಾಂತ ಉಪಜಿಲ್ಲಾ ಶಿಕ್ಷಣಾಧಿಕಾರಿ ಪುಂಡರೀಕಾಕ್ಷ ಆಚಾರ್ಯ ಮತ್ತು ಸಂಘಟನೆಯ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ಭಾಗವಹಿಸುವರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯಲಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರಶಸ್ತಿಗಾಗಿರುವ ಅಂತಿಮ ಪಟ್ಟಿ ಪ್ರಟಿಸಲಾಗಿದೆ. ಮಾಹಿತಿಗಾಗಿ ಸಂಘಟನೆಯ ಬ್ಲೋಗನ್ನು ಸಂದರ್ಶಿಸಬಹುದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ಬರೆದ ಎ೦ಭತ್ತಮೂರು ಮಂದಿ ಮಕ್ಕಳು ಈ ಪ್ರಶಸ್ತಿಗೆ ಅರ್ಹತೆ ಗಳಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆಯ ಬಳಿಕ ಈ ಪ್ರಶಸ್ತಿ ಪ್ರದಾನದ ದಿನಾಂಕವನ್ನು ಪ್ರಕಟಿಸಲಾಗುತ್ತದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರಶಸ್ತಿಗೆ ಅರ್ಹರಾದ ಎಲ್ಲರಿಗೂ ಅಭಿನಂದನೆಗಳು.
-->
2014-,15 ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+
ಕ್ರ.ಸಂ
ವಿದ್ಯಾರ್ಥಿಯ ಹೆಸರು
ಶಾಲೆ
1
ಶ್ರಾವ್ಯ ಸರಸ್ವತಿ ಕೆ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
2
ಸೌರಭ ಎ೦.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
3
ಭಾಗ್ಯಶ್ರೀ ಕೆ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
4
ಪವಿತ್ರ ಬಿ.ಆರ್.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
5
ಶುಭಲಕ್ಷ್ಮಿ ಜಿ.ಎಸ್.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
6
ಭಾಗ್ಯಪ್ರಿಯಾ ಬಿ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
7
ಚಿಂತನ ಯಂ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
8
ಶ್ರೀಕೇಶ ಐ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
9
ಗಣೇಶ್ ಪ್ರಸಾದ್ ಬೇಕಲ್.ಟಿ.
ಜಿ.ಎಫ್.ಎಚ್.ಎಸ್.ಬೇಕಲ
10
ಪ್ರಥಮ್ ಎಸ್.
ಜಿ.ಎಫ್.ಎಚ್.ಎಸ್.ಬೇಕಲ
11
ಪ್ರಿಯಾ ಬಿ.
ಜಿ.ಎಫ್.ಎಚ್.ಎಸ್.ಬೇಕಲ
12
ಪುನೀತ್ ರಾಜ್ ಬಿ.
ಜಿ.ಎಫ್.ಎಚ್.ಎಸ್.ಬೇಕಲ
13
ದೀಪಿಕಾ ಬಿ.ಆರ್.
ಜಿ.ಎಫ್.ಎಚ್.ಎಸ್.ಬೇಕಲ
14
ರಶ್ಮಿತಾ ಕೆ.
ಜಿ.ಎಫ್.ಎಚ್.ಎಸ್.ಬೇಕಲ
15
ವಾಣಿಶ್ರೀ ಯು.ಎನ್.
ಜಿ.ಎಫ್.ಎಚ್.ಎಸ್.ಬೇಕಲ
16
ದಿವ್ಯಶ್ರೀ ಪಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
17
ಸೌಮ್ಯ ಎನ್.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
18
ಶರಣ್ಯ ಡಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
19
ಚೇತನ್ ಕೃಷ್ಣ ಸಿ.ವಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
20
ಜಗದೀಶ ಡಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
21
ವೃಂದಾ ಪಾದೂರ್.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
22
ವರ್ಷಾ ಬಿ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
23
ಶರಣ್ಯಲಕ್ಷ್ಮಿ ಕೆ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
24
ಅಮರ್ ಕೆ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
25
ರಾಹುಲ್ ಕೆ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
 
-->
26
ಅಖಿಲಾ ಎ೦.
ಎಸ್.ಎಸ್.ಎಚ್.ಎಸ್ ಶೇಣಿ.
27
ಪದ್ಮಶ್ರೀ ಪಿ.ಎಸ್.
ಎಸ್.ಎಸ್.ಎಚ್.ಎಸ್ ಶೇಣಿ.
28
ಕಾವ್ಯ ಜಿ.
ಎಸ್.ಎಸ್.ಎಚ್.ಎಸ್ ಶೇಣಿ.
29 ಹರ್ಷಿತಾ ಜಿ.
ಎಸ್.ಎಸ್.ಎಚ್.ಎಸ್ ಶೇಣಿ.
30 ನಿರೀಕ್ಷಿತಾ ವೈ. ಎಸ್.ಎಸ್.ಎಚ್.ಎಸ್ ಶೇಣಿ.
31 ಮೈತ್ರಿ ಎ. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು.
32 ಅರ್ಪಿತಾ ಕೆ. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು.
33 ನಂದಿನಿ ಯು. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು.
34 ಆಶಾ ಸಿ.ಎಚ್. ಎನ್.ಎಚ್.ಎಸ್.ಎಸ್. ಪೆರಡಾಲ.
35 ನಿಶಾ ಸಿ.ಎಚ್. ಎನ್.ಎಚ್.ಎಸ್.ಎಸ್. ಪೆರಡಾಲ.
36 ಕೃಷ್ಣಕುಮಾರ್ ಪಿ. ಎನ್.ಎನ್.ಎಚ್.ಎಸ್.ಪೆರ್ಲ.
37 ಅಮೃತೇಶ್ವರಿ ಸಿ.ಎಚ್. ಎನ್.ಎನ್.ಎಚ್.ಎಸ್.ಪೆರ್ಲ.
38 ಉಮಾಶ್ರೀ ಎ೦. ಜಿ.ಎಚ್.ಎಸ್.ಎಸ್.ಬಂದಡ್ಕ.
39 ಧನುಷ್ ಜಿ. ಜಿ.ಎಚ್.ಎಸ್.ಎಸ್. ಕುಂಬಳೆ.
40 ಚೇತನ ಜಿ.ಎಚ್.ಎಸ್.ಎಸ್.ಕುಂಡಂಕುಳಿ.
41
ಕಾವ್ಯಶ್ರೀ ಎ೦.
ಜಿ.ವಿ.ಎಚ್.ಎಸ್.ಎಸ್.ಕಾರಡ್ಕ.
42 ಸ್ವಾತಿ ಕೆ.
ಎಸ್.ಎಸ್.ಎಚ್.ಎಸ್.ಎಸ್.ಕಾಟುಕುಕ್ಕೆ.
43 ಹರ್ಷಾ ಎ೦. ಎಚ್.ಎಸ್..ಬಿ.ಎಸ್.ಎಚ್.ಎಸ್.ಎಡನೀರು.
-->
2014-15 ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಶಾಲೆಯಲ್ಲಿ ಉನ್ನತ ಅಂಕ ಗಳಿಸಿದವರು.-
ಕ್ರ.ಸಂ
ವಿದ್ಯಾರ್ಥಿಯ ಹೆಸರು
ಶಾಲೆ
1 ವಿನೀತ್ ಕೆ. ಜಿ.ಎಚ್.ಎಸ್.ಎಸ್.ಶಿರಿಯ.
2 ಮಿಥುನ್ ರಾಜ್ ಎಸ್. ಜಿ.ಎಚ್.ಎಸ್.ಎಸ್.ಶಿರಿಯ.
3 ನಿಷ್ಮಿತಾ ಪಿ.. ಜಿ.ಎಚ್.ಎಸ್.ಎಸ್.ಉದುಮ.
4 ವಿದ್ಯರಾಜ್ ಎ. ಜಿ.ಎಚ್.ಎಸ್.ಎಸ್.ಉದುಮ.
5 ಶ್ರವಣ್ ಕುಮಾರ್ ಸಾಲಿಯಾನ್. ಜಿ.ಎಚ್.ಎಸ್.ಎಸ್.ಉಪ್ಪಳ.
6 ಮೇಘಶ್ರೀ ಎಸ್. ಜಿ.ಎಚ್.ಎಸ್.ಎಸ್.ಉಪ್ಪಳ.
7 ಅಕ್ಷಿತ ಐ. ಎಸ್.ವಿ.ವಿ.ಎಚ್.ಎಸ್.ಕೊಡ್ಲಮೊಗರು.
8 ಮುಸ್ತಾಕ್. ಎಸ್.ವಿ.ವಿ.ಎಚ್.ಎಸ್.ಕೊಡ್ಲಮೊಗರು.
9 ಸುರಕ್ಷಾ ಯು.ಎಲ್. ಜಿ.ವಿ.ಎಚ್.ಎಸ್.ಎಸ್ ಮುಳ್ಳೇರಿಯಾ
10 ಚೇತನ್. ಜಿ.ವಿ.ಎಚ್.ಎಸ್.ಎಸ್ ಮುಳ್ಳೇರಿಯಾ
11 ಅನ್ಸ್ವರ ಬೀಫಾತಿಮಾ.ಕೆ.ಎ೦. ಜಿ.ಎಚ್.ಎಸ್.ಎಸ್. ಬೆಳ್ಳೂರು.
12 ಫಾತಿಮತ್ ನಿಶಾನ ಎಚ್. ಜಿ.ಎಚ್.ಎಸ್.ಎಸ್.ಆದೂರು.
13 ಅಬೂಬಕರ್ ಸಿದ್ದಿಕ್ ಎ.ಕೆ.
ಜಿ.ಎಚ್.ಎಸ್.ಎಸ್.ಪೈವಳಿಕೆ.
14 ಸವಿತಾ ಎ೦.ಎಸ್. ಜಿ.ವಿ.ಎಚ್.ಎಸ್.ಎಸ್. ದೇಲಂಪಾಡಿ.
15 ಕಾವ್ಯಶ್ರೀ ಜಿ.ಎಚ್.ಎಸ್.ಪೆರಡಾಲ.
16 ಅನುಷ ಆರ್. ಜಿ.ವಿ.ಎಚ್.ಎಸ್.ಎಸ್. ಬಾಲಕಿಯರಿಗಾಗಿ.ಕಾಸರಗೋಡು
17 ಅನ್ವಿತ ಎಚ್.. ದುರ್ಗಾ ಎಚ್.ಎಸ್.ಎಸ್.ಕಾಞ್ಞಂಗಾಡು.
18 ಫಾತಿಮ ಉಮೈಬಾ ಕೆ.ಎ೦. ಜಿ.ಎಚ್.ಎಸ್.ಉದ್ಯಾವರ.
19 ಚೈತ್ರ ಎಸ್. ಜಿ.ಎಚ್.ಎಸ್.ಸೂರಂಬೈಲು.
20 ಶ್ರುತಿ ಕೆ. ಜಿ.ಎಚ್.ಎಸ್.ಅಂಗಡಿಮೊಗರು.
21 ಝಾಹಿರಾ ಬಾನು ಬಿ..ಆರ್.ಎಚ್.ಎಸ್.ಎಸ್.ಬೋವಿಕಾನ.
22 ರಮೀಝಾ ಬಾನು ಎ೦. ಜಿ.ಎಚ್.ಎಸ್ಎಸ್..ಪಳ್ಳಿಕರೆ.
23 ಶಿವಪ್ರಸಾದ ವಿ.ಸಿ. ಜಿ.ಎಚ್.ಎಸ್.ಎಸ್.ಹೊಸದುರ್ಗ.
24 ಅಸ್ಯಮತ್ ಸುಹೈಲ ಜಿ.ಎಚ್.ಎಸ್.ಕಡಂಬಾರ್.
25 ವಂದಿತಾ ಎಸ್..ಟಿ.ಎಚ್.ಎಸ್.ಮಂಜೇಶ್ವರ.
26 ಸ್ವಾತಿ ಜಿ.ಎಚ್.ಎಸ್.ಎಸ್.ಕುಂಜತ್ತೂರು.
27 ಪುನೀತ್ ಕೆ. ಜಿ.ಎಚ್.ಎಸ್.ಎಸ್. ಅಡೂರು.
28 ಮಧುಶ್ರೀ ಜಿ.ಎಚ್.ಎಸ್.ಎಸ್.ಮೊಗ್ರಾಲ್ ಪುತ್ತೂರು.
29 ತನುಶ್ರೀ ಬಿ.ಕೆ. ಜಿ.ಎಚ್.ಎಸ್.ಎಸ್.ಪಾಂಡಿ.
30 ನಿಯರಿತಾ ಶೆಟ್ಟಿ. ಜಿ.ಎಚ್.ಎಸ್.ಮೂಡಂಬೈಲು.
31 ಮೋರ್ಸಿನ್ ಅಹಮ್ಮದ್ ಎ೦. ಜಿ.ಎಚ್.ಎಸ್.ಎಸ್.ಚಂದ್ರಗಿರಿ.
32 ಹರ್ಷಿಣಿ ಜಿ. ಜಿ.ಎಚ್.ಎಸ್.ಎಸ್.ಪಡ್ರೆ.

-->
33 ಜಯೇಶ್ ಎಸ್.ಡಿ.ಪಿ.ಎಚ್.ಎಸ್.ಎಸ್.ಧರ್ಮತ್ತಡ್ಕ.
34 ಅನುಪಮಾ ಎಸ್. ಜಿ.ಎಚ್.ಎಸ್.ಎಸ್.ಪೈವಳಿಕೆನಗರ.
35 ಗಾಯತ್ರಿ ಬಿ. ಜಿ.ಎಚ್.ಎಸ್.ಎಸ್.ಬೇಕೂರು.
36 ಲಾವಣ್ಯ ಜಿ.ಎಚ್.ಎಸ್.ಎಸ್.ಕಾಸರಗೋಡು.
37 ವಿಕಾಸ್ ಪಿ. ಜಿ.ಎಚ್.ಎಸ್.ಎಸ್.ಮಂಗಲ್ಪಾಡಿ.
38 ಮೊಹಮ್ಮದ್ ನೌಷಾದ್ ಎ೦. ಎಸ್.ವಿ.ವಿ.ಎಚ್.ಎಸ್.ಎಸ್.ಮೀಯಪದವು.
39 ಇಮ್ರಾನ್. ಜಿ.ಎಚ್.ಎಸ್.ಎಸ್.ಬಂಗ್ರಮಂಜೇಶ್ವರ.
40 ಪವನ್ ರಾಜ್ ಕೆ. ಕೆ.ವಿ.ಎಸ್.ಎ೦.ಪ್ರೌಢ ಶಾಲೆ ಕುರುಡಪದವು.













18-07-2015.
ಪಠ್ಯಪುಸ್ತಕ ವಿತರಣೆ ಪೂರ್ಣತೆಯ ಹಿನ್ನಲೆ-ಕ್ಲಸ್ಟರ್ ಬಹಿಷ್ಕಾರ ಇನ್ನಲ್ಲ.ಕನ್ನಡ ಅಧ್ಯಾಪಕ ಸಂಘ.
ಕಾಸರಗೋಡು, ಶಾಲೆಗಳಿಗೆ ವಿತರಿಸಬೇಕಾಗಿದ್ದ ಎಲ್ಲಾ ಪಠ್ಯ ಪುಸ್ತಕಗಳ ಮುದ್ರಣ ಕಾರ್ಯ ಕೊನೆಗೊಂಡಿದ್ದು, ವಿತರಣೆಯ ಕಾರ್ಯ ಅಂತಿಮ ಹಂತದಲ್ಲಿದೆ, ಯಾವುದೇ ಪುಸ್ತಕಗಳು ಸಿಗುವಲ್ಲಿ ವ್ಯತಯ ಉಂಟಾಗದಂತೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆಯೆಂದು ಕಾಸರಗೋಡು ಉಪ ಶಿಕ್ಷಣ ನಿರ್ದೇಶಕರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯ ಅಧ್ಯಾಪಕ ಸಂಘವು ಕರೆ ನೀಡಿದ್ದ ಕ್ಲಸ್ಟರ್ ಬಹಿಷ್ಕಾರವನ್ನು ಹಿಂದೆಗೆದಿದೆ.ಈ ವರ್ಷ ತಯಾರಾಗಬೇಕಾದ 2,4,6 ಮತ್ತು 8 ತರಗತಿಗಳ ಪುಸ್ತಕಗಳಿಗೆ ಪೂರಕವಾಗಿ ಕನ್ನಡ ಕಲಿಕಾ ಡಿ.ವಿ.ಡಿ. ಮತ್ತು ಶಿಕ್ಷಕ ಪಠ್ಯಗಳ ತಯಾರಿಯೂ ಪೂರ್ಣೆಯ ಹಂತದಲ್ಲಿದ್ದು ಇವುಗಳ ಪೂರೈಕೆಯ ಕಾರ್ಯವನ್ನೂ ತ್ವರಿತಗೊಳಿಸಲಾಗುವುದೆಂದು ಇಲಾಖೆಯ ಅಧಿಕೃತರು ತಿಳಿಸಿದ್ದಾರೆ.

Thursday, 9 July 2015


09-07-2015.
ಪಠ್ಯಪುಸ್ತಕ ಮತ್ತು ಶಿಕ್ಷಕ ಪಠ್ಯ ಸಾಕಷ್ಟು ಸಂಖ್ಯೆಯಲ್ಲಿ ಸಿಗುವ ವರೆಗೆ ಕ್ಲಸ್ಟರ್ ಬಹಿಷ್ಕಾರ ಅನಿವಾರ್ಯ- ಕನ್ನಡ ಅಧ್ಯಾಪಕ ಸಂಘ.
                ಕಾಸರಗೋಡು, ಕೇರಳ ರಾಜ್ಯದ ಶಾಲೆಗಳಿಗೆ ಪುಸ್ತಕ ವಿತರಣೆಯ ನಿಯಮದಂತೆ ಒಂದನೆಯ ಹಂತದ ಪಾಠ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ವಿತರಿಸಬೇಕಾದ ಪಠ್ಯಪುಸ್ತಕಗಳನ್ನು ಸಾಕಷ್ಟು ವಿತರಿಸದೆ ಸತಾಯಿಸಲಾಗುತ್ತಿದೆ.ಕಲೆ,ದೈಹಿಕ ಶಿಕ್ಷಣ,ವೃತ್ತಿಪರಿಚಯವೇ ಮೊದಲಾದ ಅನುಬಂಧ ಪುಸ್ತಕಗಳನ್ನು ಕಳೆದ ವರ್ಷವೇ ವಿತರಿಸಬೇಕಾಗಿತ್ತು.ಅದು ಇದುವರೆಗೂ ನೆನೆಗುದಿಗೆ ಬಿದ್ದಿದೆ. ಈ ಶೈಕ್ಷಣಿಕ ವರ್ಷದಲ್ಲಿ ತಯಾರಾಗಬೇಕಾದ ಈ ಪುಸ್ತಕಗಳ ಭಾಷಾಂತರ ಕಾರ್ಯ ಇನ್ನೂ ನಡೆದಿಲ್ಲ.ಕಳೆದ ವರ್ಷ ಬದಲಾದ ಪಠ್ಯಪುಸ್ತಕಗಳಿಗೆ ಪೂರಕವಾದ ಶಿಕ್ಷಕ ಪಠ್ಯಗಳು ಸಾಕಷ್ಟು ಸಂಖ್ಯೆಲ್ಲಿ ಲಭ್ಯವಾಗಿಲ್ಲ ಮೇಲಾಗಿ ಕೆಲವು ಇನ್ನೂ ಬಂದಿಲ್ಲ.ಈ ಶೈಕ್ಷಣಿಕ ವರ್ಷ ಸಿದ್ಧವಾಗಬೇಕಾಗಿದ್ದ ಶಿಕ್ಷಕ ಪಠ್ಯಗಳ ಕುರಿತು ಮಾಹಿತಿ ಲಭ್ಯವಿಲ್ಲ. ಕಳೆದ ವರ್ಷ ಅಂದಿನ ನಿಯೋಜಿತ ಎಸ್.ಸಿ.ಆರ್.ಟಿ.ಅಧಿಕೃತರ ಉತ್ಸಾಹದಿಂದ ಮತ್ತು ಕನ್ನಡ ಶಿಕ್ಷಕರ ಶ್ರಮದ ಫಲವಾಗಿ 1,3,5ಮತ್ತು7 ತರಗತಿಗಳಿಗೆ ಕನ್ನಡ ಕಲಿಕಾ ಡಿ.ವಿ.ಡಿ. ತಯಾರಿಸಲಾಗಿತ್ತು.ಅದು ಎಪ್ರಿಲ್ ತಿಂಗಳಲ್ಲೇ ಶಿಕ್ಷಣ ಸಚಿವರಿಂದ ಬಿಡುಗಡೆಯಾಗಿತ್ತು. ಆದರೆ ಈ ವರ್ಷ ತಯಾರಾದ 2,4,6 ಮತ್ತು 8 ತರಗತಿಗಳ ಪುಸ್ತಕಗಳಿಗೆ ಪೂರಕವಾಗಿ ಕನ್ನಡ ಕಲಿಕಾ ಡಿ.ವಿ.ಡಿ. ತಯಾರಿಸಲು ಇಂದಿನ ಎಸ್.ಸಿ.ಆರ್.ಟಿ.ಅಧಿಕೃತರು ನಿರಾಸಕ್ತಿ ವಹಿಸುವುದು ದುರದೃಷ್ಟಕರ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯಿರುವ ಸರಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸ್ಥಿತಿ ಪ್ರಜಾಪ್ರಭುತ್ವಕ್ಕೇ ಅಪಮಾನ. ನಮ್ಮ ಬೇಡಿಕೆ ಈಡೇರುವ ವರೆಗೆ ಶಿಕ್ಷಣ ಇಲಾಖೆಯು ನಡೆಸುವ ಎಲ್ಲಾ ಕ್ಲಸ್ಟರ್ ತರಬೇತಿಗಳನ್ನು ಬಹಿಷ್ಕರಿಸಲು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕರೆ ನೀಡಿದೆ.

Wednesday, 8 July 2015


08-07-2015
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ "ಕನ್ನಡ ಮಾಧ್ಯಮ ಪ್ರಶಸ್ತಿ'-ಕಾರ್ಯಕ್ರಮಕ್ಕೆ ಸಿದ್ಧತೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಳೆದ ಮೂರು ವರ್ಷಗಳಿಂದ ಹೊರರಾಜ್ಯದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಶಾಲೆಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ತಮಗೆ ತಿಳಿದ ವಿಷಯ. ಕಳೆದ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ 2015ನೇ ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎ+ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳ ಮತ್ತು ಶಾಲೆಗಳಿಂದ ಅತ್ಯನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ಮಾಹಿತಿಗಳನ್ನು ನೀಡಲು ಕೋರಿದೆ. ಈ ಎರಡೂ ಸ್ಥಾನಗಳಲ್ಲಿ ಒಂದು ವೇಳೆ ಒಂದೇತರ ಅಂಕ ಪಡೆದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿದ್ದರೆ ಅವರನ್ನೂ ಪರಿಗಣಿಸಿ ಪಟ್ಟಿಯಲ್ಲಿ ಸೇರಿಸಬೇಕು.
ವಿದ್ಯಾರ್ಥಿಗಳ ಮಾಹಿತಿಯನ್ನು ನೀಡುವಾಗ ಎಸ್.ಎಸ್.ಎಲ್.ಸಿ.ಬೋರ್ಡಿನಿಂದ ಪಡೆದ ಪಟ್ಟಿಯನ್ನು ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ಹಾಗೂ ವಿದ್ಯಾರ್ಥಿಯ ಅಂಕ ಪಟ್ಟಿಯೊಂದಿಗೆ (ಹೆಸರು, ಶಾಲೆಯ ಹೆಸರು, ಮನೆಯ ವಿಳಾಸ,ಪೋಷಕರ ದೂರವಾಣಿ/ಸಂಚಾರಿ ದೂರವಾಣಿ ಸಂಖ್ಯೆ ಈ ಮಾಹಿತಿಗಳುಅತ್ಯಂತ ಅವಶ್ಯವಾಗಿದೆ.)ಕನ್ನಡ ಅಧ್ಯಾಪಕ ಸಂಘದ ಮುಖಾಂತರ ಕಳುಹಿಸಿಕೊಡಲು ಕೋರಿದೆ. ಕಳುಹಿಸಬೇಕಾದ ವಿಳಾಸ, ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕನ್ನಡ ಅಧ್ಯಾಪಕ ಭವನ, ಬೀರಂತಬೈಲು ಕಾಸರಗೋಡು, 671121.ಹೆಚ್ಚಿನ ಮಾಹಿತಿಗಾಗಿ ತಮ್ಮತಮ್ಮ ಶಾಲೆಯನ್ನು ಸಂಪರ್ಕಿಸಬಹುದಾಗಿದೆ.
                                                                                            ಸುಬ್ರಹ್ಮಣ್ಯ ಭಟ್ ಕೆ.
                                                                                           ಪ್ರಧಾನ ಕಾರ್ಯದರ್ಶಿ
                                                                                 ಕೇ.ಪ್ರಾ..ಮಾ..ಸಂಘ.ಕಾಸರಗೋಡು.

Friday, 3 July 2015


3-07-2015
ಹೊಸದುರ್ಗ ಶಾಲೆಯ ಕನ್ನಡ ಶಿಕ್ಷಕ ಹುದ್ದೆಯನ್ನು ರದ್ದುಗೊಳಿಸಿದ ಜಿಲ್ಲಾ ಶಿಕ್ಷಣಾಧಿಕಾರಿಯ ವಿರುದ್ಧ ಶಿಸ್ತಿನ ಕ್ರಮಕ್ಕೆ ಆಗ್ರಹ.
ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದಂತಹ ಶಿಕ್ಷಕ ಹುದ್ದೆ ನಿರ್ಣಯದ ಪ್ರಕಾರ ಯು.ಪಿ.ವಿಭಾಗದ ಶಿಕ್ಷಕ ಹುದ್ದೆಯನ್ನು ವಿನಾಕಾರಣ ರದ್ದುಗೊಳಿಸಿದ ಹೊಸ ದುರ್ಗ ಜಿಲ್ಲಾ ಶಿಕ್ಷಣಾಧಿಕಾರಿಗಳ ಬೇಜವಾಬ್ದಾರಿ ನಿಲುವನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ತರಾಟೆಗೆ ತೆಗೆದುಕೊಂಡಿದೆ. ಹೊಸದುರ್ಗ ತಾಲೂಕಿನ ಏಕೈಕ ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ ನೆಲೆನಿಂತಿರುವ ಕನ್ನಡ ವಿಭಾಗವನ್ನು ತೆರವುಗೊಳಿಸುವ ದುಸ್ಸಾಹಸಕ್ಕೆ ಅವಕಾಶ ನೀಡಲಾರೆವು ಎ೦ದು ಸ್ಪಷ್ಟ ಸಂದೇಶವನ್ನು ಜಿಲ್ಲಾ ಅಧಿಕೃತರಿಗೆ ಮನವರಿಕೆ ಮಾಡಲಾಯಿತು. ವಿಶೇಷ ಆದೇಶ 4953/ 2000 ದಿನಾಂಕ 2/12/2000 ತಿರುವನಂತಪುರ ಇದರ ಅನ್ವಯ ಹದಿಮೂರು ವರ್ಷಗಳ ಕಾಲ ಇದ್ದ ಹುದ್ದೆಯು ಏಕಾಕಏಕಿ ಇಲ್ಲದಾಗಿಸುವ ಅಧಿಕೃತರ ನಿಲುವು ದ್ವೇಶಪೂರಿತವೂ ಅನಾರೋಗ್ಯಕರವೂ ಆಗಿದೆಯೆಂದು ಸಂಘಟನೆ ಆಕ್ಷೇಪಿಸಿದೆ. ತೆರವುಗೊಳಿಸಿದ ಶಿಕ್ಷಕ ಹುದ್ದೆಯನ್ನು ಪುನಃಸ್ಥಾಪಿಸಿ ಸರಕಾರಿ ಆದೇಶವನ್ನು ಪಾಲಿಸುವ ಸಾಮಾನ್ಯ ಮರ್ಯಾದೆಯನ್ನು ಜಿಲ್ಲಾ ಶಿಕ್ಷಣಾಧಿಕಾರಿಯವರು ನೆರವೇರಿಸಬೇಕು, ಕನ್ನಡ ಕಲಿಯುವ ಮಕ್ಕಳ ಹಕ್ಕಿಗೆ ಚ್ಯುತಿತರುವ ಹುನ್ನಾರದಿಂದ ಹಿಂದೆ ಸರಿಯಬೇಕು,ಇಲ್ಲವಾದರೆ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುವ ಅಧಿಕಾರಿಗಳ ಚಾಳಿಗೆ ದುಬಾರಿ ಬೆಲೆ ತೆರಬೇಕಾದೀತು ಎ೦ದು ಸಂಘಟನೆ ಕಟುವಾಗಿ ಎಚ್ಚರಿಸಿದೆ. ಕಾಸರಗೋಡಿನ ಸಮಸ್ತ ಕನ್ನಡ ಸಂಘಟನೆಗಳು ಈ ಹೋರಾಟದಲ್ಲಿ ಭಾಗವಹಿಸಿ ಕನ್ನಡ ದಮನ ನೀತಿಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಲಾಗಿದೆ.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್, ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ., ಪ್ರಧಾನಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ಬೇಕಲ ಹೊಸದುರ್ಗ ಘಟಕಾಧ್ಯಕ್ಷರಾದ ಪುಷ್ಪಾವತಿ ಎ೦., ರಜನಿಕುಮಾರಿ, ಅಮಿತಾ ಎಚ್ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ ಕೆ, ನಿಯೋಗದಲ್ಲಿ ಪಾಲ್ಗೊಂಡರು. ಜಿಲ್ಲಾ ಶಿಕ್ಷಣಾಧಿಕಾರಿ ಕಛೇರಿಯ ಅಧಿಕೃತರು ಮತ್ತು ಜಿ.ಎಚ್.ಎಸ್.ಎಸ್. ಹೊಸದುರ್ಗ ಹೈಸ್ಕೂಲಿನ ಮುಖ್ಯಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲಾಯಿತು.