FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Wednesday, 8 July 2015


08-07-2015
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ "ಕನ್ನಡ ಮಾಧ್ಯಮ ಪ್ರಶಸ್ತಿ'-ಕಾರ್ಯಕ್ರಮಕ್ಕೆ ಸಿದ್ಧತೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಳೆದ ಮೂರು ವರ್ಷಗಳಿಂದ ಹೊರರಾಜ್ಯದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಶಾಲೆಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ತಮಗೆ ತಿಳಿದ ವಿಷಯ. ಕಳೆದ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ 2015ನೇ ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎ+ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳ ಮತ್ತು ಶಾಲೆಗಳಿಂದ ಅತ್ಯನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ಮಾಹಿತಿಗಳನ್ನು ನೀಡಲು ಕೋರಿದೆ. ಈ ಎರಡೂ ಸ್ಥಾನಗಳಲ್ಲಿ ಒಂದು ವೇಳೆ ಒಂದೇತರ ಅಂಕ ಪಡೆದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿದ್ದರೆ ಅವರನ್ನೂ ಪರಿಗಣಿಸಿ ಪಟ್ಟಿಯಲ್ಲಿ ಸೇರಿಸಬೇಕು.
ವಿದ್ಯಾರ್ಥಿಗಳ ಮಾಹಿತಿಯನ್ನು ನೀಡುವಾಗ ಎಸ್.ಎಸ್.ಎಲ್.ಸಿ.ಬೋರ್ಡಿನಿಂದ ಪಡೆದ ಪಟ್ಟಿಯನ್ನು ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ಹಾಗೂ ವಿದ್ಯಾರ್ಥಿಯ ಅಂಕ ಪಟ್ಟಿಯೊಂದಿಗೆ (ಹೆಸರು, ಶಾಲೆಯ ಹೆಸರು, ಮನೆಯ ವಿಳಾಸ,ಪೋಷಕರ ದೂರವಾಣಿ/ಸಂಚಾರಿ ದೂರವಾಣಿ ಸಂಖ್ಯೆ ಈ ಮಾಹಿತಿಗಳುಅತ್ಯಂತ ಅವಶ್ಯವಾಗಿದೆ.)ಕನ್ನಡ ಅಧ್ಯಾಪಕ ಸಂಘದ ಮುಖಾಂತರ ಕಳುಹಿಸಿಕೊಡಲು ಕೋರಿದೆ. ಕಳುಹಿಸಬೇಕಾದ ವಿಳಾಸ, ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕನ್ನಡ ಅಧ್ಯಾಪಕ ಭವನ, ಬೀರಂತಬೈಲು ಕಾಸರಗೋಡು, 671121.ಹೆಚ್ಚಿನ ಮಾಹಿತಿಗಾಗಿ ತಮ್ಮತಮ್ಮ ಶಾಲೆಯನ್ನು ಸಂಪರ್ಕಿಸಬಹುದಾಗಿದೆ.
                                                                                            ಸುಬ್ರಹ್ಮಣ್ಯ ಭಟ್ ಕೆ.
                                                                                           ಪ್ರಧಾನ ಕಾರ್ಯದರ್ಶಿ
                                                                                 ಕೇ.ಪ್ರಾ..ಮಾ..ಸಂಘ.ಕಾಸರಗೋಡು.

No comments:

Post a Comment