FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 19 July 2015


18-07-2015.
ಪಠ್ಯಪುಸ್ತಕ ವಿತರಣೆ ಪೂರ್ಣತೆಯ ಹಿನ್ನಲೆ-ಕ್ಲಸ್ಟರ್ ಬಹಿಷ್ಕಾರ ಇನ್ನಲ್ಲ.ಕನ್ನಡ ಅಧ್ಯಾಪಕ ಸಂಘ.
ಕಾಸರಗೋಡು, ಶಾಲೆಗಳಿಗೆ ವಿತರಿಸಬೇಕಾಗಿದ್ದ ಎಲ್ಲಾ ಪಠ್ಯ ಪುಸ್ತಕಗಳ ಮುದ್ರಣ ಕಾರ್ಯ ಕೊನೆಗೊಂಡಿದ್ದು, ವಿತರಣೆಯ ಕಾರ್ಯ ಅಂತಿಮ ಹಂತದಲ್ಲಿದೆ, ಯಾವುದೇ ಪುಸ್ತಕಗಳು ಸಿಗುವಲ್ಲಿ ವ್ಯತಯ ಉಂಟಾಗದಂತೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆಯೆಂದು ಕಾಸರಗೋಡು ಉಪ ಶಿಕ್ಷಣ ನಿರ್ದೇಶಕರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯ ಅಧ್ಯಾಪಕ ಸಂಘವು ಕರೆ ನೀಡಿದ್ದ ಕ್ಲಸ್ಟರ್ ಬಹಿಷ್ಕಾರವನ್ನು ಹಿಂದೆಗೆದಿದೆ.ಈ ವರ್ಷ ತಯಾರಾಗಬೇಕಾದ 2,4,6 ಮತ್ತು 8 ತರಗತಿಗಳ ಪುಸ್ತಕಗಳಿಗೆ ಪೂರಕವಾಗಿ ಕನ್ನಡ ಕಲಿಕಾ ಡಿ.ವಿ.ಡಿ. ಮತ್ತು ಶಿಕ್ಷಕ ಪಠ್ಯಗಳ ತಯಾರಿಯೂ ಪೂರ್ಣೆಯ ಹಂತದಲ್ಲಿದ್ದು ಇವುಗಳ ಪೂರೈಕೆಯ ಕಾರ್ಯವನ್ನೂ ತ್ವರಿತಗೊಳಿಸಲಾಗುವುದೆಂದು ಇಲಾಖೆಯ ಅಧಿಕೃತರು ತಿಳಿಸಿದ್ದಾರೆ.

No comments:

Post a Comment