09-07-2015.
ಪಠ್ಯಪುಸ್ತಕ
ಮತ್ತು ಶಿಕ್ಷಕ ಪಠ್ಯ ಸಾಕಷ್ಟು
ಸಂಖ್ಯೆಯಲ್ಲಿ ಸಿಗುವ ವರೆಗೆ
ಕ್ಲಸ್ಟರ್ ಬಹಿಷ್ಕಾರ ಅನಿವಾರ್ಯ-
ಕನ್ನಡ
ಅಧ್ಯಾಪಕ ಸಂಘ.
ಕಾಸರಗೋಡು,
ಕೇರಳ
ರಾಜ್ಯದ ಶಾಲೆಗಳಿಗೆ ಪುಸ್ತಕ
ವಿತರಣೆಯ ನಿಯಮದಂತೆ ಒಂದನೆಯ
ಹಂತದ ಪಾಠ ಪುಸ್ತಕಗಳನ್ನು
ವಿತರಿಸಲಾಗುತ್ತಿದೆ.ಕನ್ನಡ
ಮಾಧ್ಯಮದಲ್ಲಿ ಮಕ್ಕಳಿಗೆ
ವಿತರಿಸಬೇಕಾದ ಪಠ್ಯಪುಸ್ತಕಗಳನ್ನು
ಸಾಕಷ್ಟು ವಿತರಿಸದೆ
ಸತಾಯಿಸಲಾಗುತ್ತಿದೆ.ಕಲೆ,ದೈಹಿಕ
ಶಿಕ್ಷಣ,ವೃತ್ತಿಪರಿಚಯವೇ
ಮೊದಲಾದ ಅನುಬಂಧ ಪುಸ್ತಕಗಳನ್ನು
ಕಳೆದ ವರ್ಷವೇ ವಿತರಿಸಬೇಕಾಗಿತ್ತು.ಅದು
ಇದುವರೆಗೂ ನೆನೆಗುದಿಗೆ ಬಿದ್ದಿದೆ.
ಈ ಶೈಕ್ಷಣಿಕ
ವರ್ಷದಲ್ಲಿ ತಯಾರಾಗಬೇಕಾದ ಈ
ಪುಸ್ತಕಗಳ ಭಾಷಾಂತರ ಕಾರ್ಯ ಇನ್ನೂ
ನಡೆದಿಲ್ಲ.ಕಳೆದ
ವರ್ಷ ಬದಲಾದ ಪಠ್ಯಪುಸ್ತಕಗಳಿಗೆ
ಪೂರಕವಾದ ಶಿಕ್ಷಕ ಪಠ್ಯಗಳು
ಸಾಕಷ್ಟು ಸಂಖ್ಯೆಲ್ಲಿ ಲಭ್ಯವಾಗಿಲ್ಲ
ಮೇಲಾಗಿ ಕೆಲವು ಇನ್ನೂ ಬಂದಿಲ್ಲ.ಈ
ಶೈಕ್ಷಣಿಕ ವರ್ಷ ಸಿದ್ಧವಾಗಬೇಕಾಗಿದ್ದ
ಶಿಕ್ಷಕ ಪಠ್ಯಗಳ ಕುರಿತು ಮಾಹಿತಿ
ಲಭ್ಯವಿಲ್ಲ.
ಕಳೆದ
ವರ್ಷ ಅಂದಿನ ನಿಯೋಜಿತ
ಎಸ್.ಸಿ.ಆರ್.ಟಿ.ಅಧಿಕೃತರ
ಉತ್ಸಾಹದಿಂದ ಮತ್ತು ಕನ್ನಡ
ಶಿಕ್ಷಕರ ಶ್ರಮದ ಫಲವಾಗಿ 1,3,5ಮತ್ತು7
ತರಗತಿಗಳಿಗೆ
ಕನ್ನಡ ಕಲಿಕಾ ಡಿ.ವಿ.ಡಿ.
ತಯಾರಿಸಲಾಗಿತ್ತು.ಅದು
ಎಪ್ರಿಲ್ ತಿಂಗಳಲ್ಲೇ ಶಿಕ್ಷಣ
ಸಚಿವರಿಂದ ಬಿಡುಗಡೆಯಾಗಿತ್ತು.
ಆದರೆ ಈ
ವರ್ಷ ತಯಾರಾದ 2,4,6
ಮತ್ತು
8 ತರಗತಿಗಳ
ಪುಸ್ತಕಗಳಿಗೆ ಪೂರಕವಾಗಿ ಕನ್ನಡ
ಕಲಿಕಾ ಡಿ.ವಿ.ಡಿ.
ತಯಾರಿಸಲು
ಇಂದಿನ ಎಸ್.ಸಿ.ಆರ್.ಟಿ.ಅಧಿಕೃತರು
ನಿರಾಸಕ್ತಿ ವಹಿಸುವುದು ದುರದೃಷ್ಟಕರ.
ಭಾಷಾ
ಅಲ್ಪಸಂಖ್ಯಾತರ ಹಕ್ಕುಗಳನ್ನು
ಸಂರಕ್ಷಿಸುವ ಹೊಣೆಗಾರಿಕೆಯಿರುವ
ಸರಕಾರವು ತನ್ನ ಜವಾಬ್ದಾರಿಯಿಂದ
ನುಣುಚಿಕೊಳ್ಳುತ್ತಿರುವ ಸ್ಥಿತಿ
ಪ್ರಜಾಪ್ರಭುತ್ವಕ್ಕೇ ಅಪಮಾನ.
ನಮ್ಮ
ಬೇಡಿಕೆ ಈಡೇರುವ ವರೆಗೆ ಶಿಕ್ಷಣ
ಇಲಾಖೆಯು ನಡೆಸುವ ಎಲ್ಲಾ ಕ್ಲಸ್ಟರ್
ತರಬೇತಿಗಳನ್ನು ಬಹಿಷ್ಕರಿಸಲು
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ
ಅಧ್ಯಾಪಕರ ಸಂಘ ಕರೆ ನೀಡಿದೆ.
No comments:
Post a Comment