FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 26 July 2015


-->
26-07-2015
ಅಧ್ಯಾಪಕ ಧ್ವನಿ ಕನ್ನಡಿಗರಿಗೆ ದಾರಿದೀಪವಾಗಲಿ-ಎಸ್.ವಿ.ಭಟ್.
 ಕಾಸರಗೋಡು. ಜು.25, ಕಾಸರಗೋಡಿನಲ್ಲಿ ಕನ್ನಡಿಗರು ಒಗ್ಗಟ್ಟಿನಿಂದ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಇದೆ. ಶಿಕ್ಷಣ ಕ್ಷೇತ್ರದಿಂದ ಹಿಡಿದು ಎಲ್ಲಾ ಔದ್ಯೋಗಿಕ ವಲಯಗಳಲ್ಲಿಯೂ ನಮ್ಮ ಸ್ವಂತಿಕೆಯನ್ನು ಪ್ರತಿಬಿಂಬಿಸಲು ನಮ್ಮ ಕನ್ನಡ ಸಂಘಟನೆಗಳು ಸಮರ್ಥವಾಗಿದೆ. ಈ ನಿಟ್ಟಿನಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎ೦ದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಇದರ ಅಧ್ಯಕ್ಷರಾದ ಎಸ್.ವಿ.ಭಟ್ ನುಡಿದರು. ಅವರು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಿದ ಅಧ್ಯಾಪಕ ಧ್ವನಿ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಗರದ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಸಂಘಟನೆಯ ಮುಖವಾಣಿ ಅಧ್ಯಾಪಕ ಧ್ವನಿ ಬಿಡಗಡೆ ಸಮಾರಂಭ ಏರ್ಪಡಿಸಲಾಗಿತ್ತು. ಅಧ್ಯಾಪಕ ಧ್ವನಿ ಬಿಡುಗಡೆಯ ಬಳಿಕ ಕಾಸರಗೋಡು ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿ ಭಡ್ತಿಗೊಂಡ ಇ.ವೇಣುಗೋಪಾಲನ್ , ಕೊಟ್ಟಾರಕರ ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿಭಡ್ತಿ ಹೊಂದಿದ ಡಿ.ಮಹಾಲಿಂಗೇಶ್ವರ ರಾಜ್ ಮತ್ತು ಡಾಕ್ಟರೇಟ್ ಗಳಿಸಿದ ಹಿರಿಯ ಶಿಕ್ಷಕರಾದ ಶಶಿರಾಜ ನೀಲಂಗಳ ಅಭಿನಂದನೆ ಸಲ್ಲಿಸಲಾಯಿತು. ಪ್ರೊ/ವಾಸುದೇವ ಚಾಪಾಡಿ ಪ್ರಾಯೋಜಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಕು/ಪ್ರಥಮ್, ಜಿ.ಎಫ್.ಎಚ್.ಎಸ್.ಎಸ್.ಬೇಕಲ್ ಮತ್ತು ಕು/ದಿವ್ಯಶ್ರೀ ಪಿ. ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲು ಇವರಿಗೆ ನೀಡಲಾಯಿತು. ಹರ್ಷವರ್ಧನ ಭಟ್ ಸರ್ಪಂಗಳ ಸ್ಮಾರಕ ಪ್ರಶಸ್ತಿಯನ್ನು ಕು/ಕಾವ್ಯ ಜಿ., ಶ್ರೀ ಶಾರದಾಂಬಾ ಹೈಯರ್ ಸೆಕಂಡರಿ ಶಾಲೆ ಶೇಣಿ ಇವರಿಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಕೆ.ಪಿ.ಎಚ್.ಎಸ್.. ರಾಜ್ಯಾಧ್ಯಕ್ಷರಾದ ರವೀಂದ್ರನಾಥ್ ನಾಯಕ್, ಶಿಕ್ಷಣ ಇಲಾಖೆಯ ಉದ್ಯೋಗಸ್ಥರು ಮತ್ತು ಕನ್ನಡ ಅಧ್ಯಾಪಕರ ಸಂಯುಕ್ತ ಸಂಘಟನೆಯ ಅಧ್ಯಕ್ಷರಾದ ಅರವಿಂದ ಕುಮಾರ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಖಜಾಂಜಿ ಪದ್ಮಾವತಿ ಎ೦. ವಂದಿಸಿದರು. ಬಾಬು ಕೆ ಕಾರ್ಯಕ್ರಮ ನಿರ್ವಹಿಸಿದರು.

No comments:

Post a Comment