FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday, 10 February 2024

ಕನ್ನಡ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಮಹಾಸಭೆ

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆಯು ಇಂದು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. 

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ.ಬಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಎಂ ಮಂಡಿಸಿದರು. ಬಳಿಕ ಸಂಘಟನಾತ್ಮಕ ಚರ್ಚೆ ನಡೆಯಿತು‌‌.  ಬೇಕಲ-ಹೊಸದುರ್ಗ ಉಪಜಿಲ್ಲಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ರಜನಿ ಕುಮಾರಿ ಪಿ, ಕಾಸರಗೋಡು ಉಪಜಿಲ್ಲಾ ಅಧ್ಯಕ್ಷರಾದ ಶ್ರೀ ವಿನೋದ್ ರಾಜ್ ಪಿ.ಕೆ, ಕಾರ್ಯದರ್ಶಿ ಶ್ರೀ ಬಾಬು ಕೆ, ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಶ್ರೀ ಜೀವನ್ ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದರು. 

       ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಕೇಶ್ ಎ, ಶ್ರೀಮತಿ ಪ್ರಭಾವತಿ ಕೆದಿಲಾಯ, ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

       ಇದೇ ಸಂಧರ್ಭದಲ್ಲಿ ಸಂಘಟನೆಯ ಸ್ಥಾಪಕ ಸದಸ್ಯರು, ಹಲವಾರು ವರ್ಷಗಳಿಂದ ಸಂಘಟನೆಯ ವಿವಿಧ ಹುದ್ದೆಯನ್ನಲಂಕರಿಸಿ ಸಂಘಟನೆಯನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವಲ್ಲಿ ಕಾರ್ಯವೆಸಗುತ್ತಿರುವ ಈ ವರ್ಷ ನಿವೃತ್ತರಾಗಲಿರುವ ಶ್ರೀಮತಿ ಪದ್ಮಾವತಿ ಎಂ ರವರು ಕನ್ನಡ ಅಧ್ಯಾಪಕ ಭವನಕ್ಕೆ ಎರಡು ಗೋಡೆ ಗಡಿಯಾರವನ್ನು ಕೊಡುಗೆಯಾಗಿ ನೀಡಿದರು.

       ಬಳಿಕ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಾಕ್ರಬೈಲು ಎ.ಯು.ಪಿ. ಶಾಲೆ ಪಾತೂರಿನ ಮುಖ್ಯ ಶಿಕ್ಷಕರಾದ ಶ್ರೀ ಶ್ರೀನಿವಾಸ ರಾವ್ ಪಿ.ಬಿ ಪುನರಾಯ್ಕೆಯಾದರೆ ಪ್ರಧಾನ ಕಾರ್ಯದರ್ಶಿಯಾಗಿ ಎ.ಎಲ್.ಪಿ.ಶಾಲೆ ಕಿಳಿಂಗಾರಿನ ಶಿಕ್ಷಕ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಎ.ಎಸ್.ಬಿ.ಎಸ್.ಕುಂಟಿಕಾನದ ಶಿಕ್ಷಕ ಶ್ರೀ ಶರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

       ಉಪಾಧ್ಯಕ್ಷರಾಗಿ ನವಜೀವನ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಕೆದಿಲಾಯ, ವಿದ್ಯಾರಣ್ಯ ಎ.ಎಲ್.ಪಿ. ಶಾಲೆ ಬೆರಿಪದವಿನ ಮುಖ್ಯ ಶಿಕ್ಷಕ ಶ್ರೀ ಉಮೇಶ್ ಕೆ, ಕಾರ್ಯದರ್ಶಿಗಳಾಗಿ ಜಿ.ಎಲ್.ಪಿ.ಶಾಲೆ ಕುಳೂರಿನ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಜಿ.ಎಚ್.ಎಸ್.ಎಸ್.ಬಂದಡ್ಕದ ಶಿಕ್ಷಕ ಶ್ರೀ ಬಾಬು ಕೆ, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಶಿಕ್ಷಕ ಶ್ರೀ ಜಬ್ಬಾರ್ ಬಿ, ಅಧಿಕೃತ ವಕ್ತಾರರಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಮುಖ್ಯ ಶಿಕ್ಷಕ ಶ್ರೀ ಸುಕೇಶ್, ಲೆಕ್ಕ ಪರಿಶೋಧಕರಾಗಿ ಜಿ.ಎಲ್.ಪಿ.ಶಾಲೆ ಪನೆಯಾಲದ ಶಿಕ್ಷಕ ಶ್ರೀ ಪುರುಷೋತ್ತಮ ಕುಲಾಲ್ ಹಾಗೂ ಜಿ.ಎಚ್.ಎಸ್.ಎಸ್. ಕಾಸರಗೋಡಿನ ಶಿಕ್ಷಕ ಶ್ರೀ ಅಬ್ದುಲ್ ರಹಿಮಾನ್ ಅವಿರೋಧವಾಗಿ ಆಯ್ಕೆಯಾದರು.

     ಕಾರ್ಯಕ್ರಮದಲ್ಲಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಶ್ರೀ ಜಬ್ಬಾರ್ ಬಿ ಕಾರ್ಯಕ್ರಮ ನಿರೂಸಿದರು.















No comments:

Post a Comment