FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday 9 March 2024

2023-24 ನೇ ಸಾಲಿನ ವಿದಾಯಕೂಟ ಸಮಾರಂಭ :

       ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. 

      ಕಾರ್ಯಕ್ರಮವನ್ನು ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ‌ ಕನ್ನಡ ವಿಭಾಗದ ಮುಖ್ಯಸ್ಥರಾದ  ಡಾ. ಸುಬ್ರಹ್ಮಣ್ಯ ಕಾರ್ಮಾರ್ ಉದ್ಘಾಟಿಸಿ " ಕಾಸರಗೋಡಿನ ಕನ್ನಡದ ಸೊಗಡನ್ನು ಉಳಿಸಿ ಬೆಳೆಸುವವರು ಅಧ್ಯಾಪಕರು, ಭಾಷೆಯ ಅಸ್ಥಿತ್ವವು ಕನ್ನಡ ಅಧ್ಯಾಪಕರ ಕೈಯಲ್ಲಿದೆ.ನಮ್ಮ ಅಸ್ತಿತ್ವಕ್ಕೆ ಸವಾಲುಗಳು ಎದುರಾದಾಗ ನಾವು ಕ್ರಿಯಾಶೀಲ ರಾಗಿರುತ್ತೇವೆ.ನಾವು ಕಲಿಸುವ ಶಾಲೆಯಲ್ಲಿಯೇ  ನಮ್ಮ ಮಕ್ಕಳನ್ನು ಸೇರಿಸಿದಾಗ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ " ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಳೇರಿ,ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ  ಶಶಿಧರ ಯಂ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ಸುಕೇಶ್ ಎ ಪ್ರಾಸ್ತಾವಿಕ ಮಾತನಾಡಿದರು.

         2023-24 ನೇ ಸಾಲಿನಲ್ಲಿ ನಿವೃತ್ತಿ ಹೊಂದುವ ಕನ್ನಡ ಮಾಧ್ಯಮದ ಶಿಕ್ಷಕ ಶಿಕ್ಷಕಿಯರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ 2024ನೇ ಸಾಲಿನ ಭಾರತ ಸರಕಾರದ ನಾಲ್ಕನೇ ಅತ್ಯುನ್ನತ ನಾಗರೀಕ ಗೌರವ ಪುರಸ್ಕಾರ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಹುಭಾಷಾ ಸಂಗಮ ಭೂಮಿ ಕಾಸರಗೋಡಿನ ಅಪ್ಪಟ ಕನ್ನಡಿಗ, ಕೃಷಿಮಿತ್ರ ಭತ್ತದ ತಳಿಯ ಸಂರಕ್ಷಕ ಸತ್ಯನಾರಾಯಣ ಬೆಳೇರಿಯವರನ್ನು ಸಂಘಟನೆಯ ಪರವಾಗಿ ಅಭಿನಂದಿಸಲಾಯಿತು.

       ಕಾರ್ಯಕ್ರಮದಲ್ಲಿ ಅಧ್ಯಾಪಕ ಸಂಘದ ವಿವಿಧ ಹುದ್ದೆಗಳನ್ನಲಂಕರಿಸಿದ್ದ ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರು,ಮಾಜಿ‌ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.

ಸೇವೆಯಿಂದ ನಿವೃತ್ತಿ ಹೊಂದುವವರ ಪರಿಚಯವನ್ನು ಜಯಶ್ರೀ, ಜಯಪ್ರಶಾಂತ್, ಶ್ರೀರಾಮ, ಜೀವನ್ , ಜಯರಾಮ, ದಿವಾಕರ್ ಬಳ್ಳಾಲ್, ಉಮೇಶ್, ಗಣೇಶ್ ಪ್ರಸಾದ್, ಶಂಕರನಾರಾಯಣ ಭಟ್, ಸವಿತ, ಮಾಲತಿ ವೈ, ಮೋಹನ ನಾರಾಯಣ, ಅಶ್ವಿನಿ ಪ್ರದೀಪ್, ಶಶಿಕಲ, ವನಜ, ಸುರೇಖ ಕೆ, ಶ್ರೀವಿದ್ಯಾ, ಜ್ಯೋತ್ಸ್ನಾ,  ಈಶ್ವರ, ಜ್ಯೋತಿ, ಬಾಬು ಕೆ, ಸುರೇಖ, ಅನೀಶ್, ಶ್ರೀಲತಾ, ಸೌಮ್ಯ ಮಯ್ಯ, ರೋಹಿತಾಕ್ಷಿ, ಸಂಧ್ಯಾ, ಜಯಲಕ್ಷ್ಮಿ ಮೊದಲಾದವರು ಮಾಡಿದರು.

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಶರತ್ ಕುಮಾರ್ ಯಂ ವಂದಿಸಿದರು.ಸಂಘಟನಾ ಕಾರ್ಯದರ್ಶಿ ಜಬ್ಬಾರ್, ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ,  ಪದ್ಮಾವತಿ ಎಂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.























No comments:

Post a Comment