ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ವತಿಯಿಂದ ಸಂಘಟನೆಯ ಸದಸ್ಯರಿಗೆ 'ನವಚೇತನ' ಎಂಬ ನೂತನ ದ್ವಿದಿನ ಸಹವಾಸ ಶಿಬಿರವು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟಿತ್ತೋಡಿ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸರಾವ್ ಪಿ. ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಕೇಶ್ ಎ, ಶ್ರೀಮತಿ ಪ್ರಭಾವತಿ ಪುಂಡೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿಯವರಿಗೆ ಸಂಘಟನೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಸಂಘಟನೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಎಂ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಶಿಬಿರದ ಚಟುವಟಿಕೆಗಳು ಆರಂಭವಾಯಿತು. ಆರಂಭದ ಚಟುವಟಿಕೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಗುರುಮೂರ್ತಿಯರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಪ್ರಭಾವತಿ ಪುಂಡೂರು, ಧನ್ಯವಾದವನ್ನು ಮಂಜೇಶ್ವರ ಉಪಜಿಲ್ಲಾ ಘಟಕದ ಕೋಶಾಧಿಕಾರಿ ಶ್ರೀ ಶ್ರೀರಾಮ ಕೆದುಕೋಡಿ ನೀಡಿದರು. ಬಳಿಕ ರಾಷ್ಟ್ರೀಯ ತರಬೇತುದಾರ ಶ್ರೀ ಯತೀಶ್ ಬಳ್ಳಾಲ್ ಎನ್. ಪಿ ಇವರಿಂದ 'ಬದುಕು-ಬೆಳಕು' ಎಂಬ ವಿಚಾರದಲ್ಲಿ ತರಗತಿಯು ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಹಾಗೂ ಧನ್ಯವಾದವನ್ನು ಕಾಸರಗೋಡು ಉಪಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀ ಬಾಬು ಕೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಆಗಮಿಸಿದ, ಇತ್ತೀಚೆಗೆ ಹುದ್ದೆಯಲ್ಲಿ ಭಡ್ತಿಯನ್ನು ಪಡೆದ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಶ್ರೀ ನಂದಿಕೇಶನ್ ಎನ್ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ದಿನೇಶ್ ವಿ ರವರಿಗೆ ಸಂಘಟನೆಯ ವತಿಯಿಂದ ಗೌರವಾರ್ಪಣೆ ನೀಡಲಾಯಿತು.
ಸಂಜೆ ನಡೆದ 'ಆಟದ ಮೋಜು' ಚಟುವಟಿಕೆಯನ್ನು ನಿವೃತ್ತ ಶಿಕ್ಷಕರಾದ ಶ್ರೀ ಚೇವಾರು ವಿನೋದರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕುಮಾರ್ ಸ್ವಾಗತಿಸಿ, ಕೇಂದ್ರ ಸಮಿತಿಯ ಸದಸ್ಯರಾದ ಶ್ರೀ ನವೀನ್ ಕುಮಾರ್ ವಂದಿಸಿದರು. ಸಂಜೆ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸದಸ್ಯರಾದ ಶ್ರೀ ಉಮೇಶ್ ಕೆ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಘಟಕದ ಲೆಕ್ಕಪರಿಶೋಧಕರಾದ ಶ್ರೀಮತಿ ಶಕೀಲ ವಿ ವಂದಿಸಿದರು. ಬಳಿಕ ಶಿಬಿರಾಗ್ನಿ ನಡೆಯಿತು.
ಮರುದಿನದ ಕಾರ್ಯಕ್ರಮವು ಬೆಳಿಗ್ಗೆ 'ಪರಿಸರ ನಡಿಗೆ' ಹಾಗೂ 'ಪಕ್ಷಿ ವೀಕ್ಷಣೆ'ಯೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸದಸ್ಯರಾದ ಶ್ರೀ ರಾಜು ಕ್ರಾಸ್ತಾ ಕಿದೂರುರವರು ನಡೆಸಿಕೊಟ್ಟರು. ಬಳಿಕ ನಡೆದ 'ಯೋಗಾಮೃತ' ಕಾರ್ಯಕ್ರಮದಲ್ಲಿ ಯೋಗ ಗುರುಗಳಾದ ಶ್ರೀ ಪುಂಡರಿಕಾಕ್ಷರ ಯೋಗಾಚಾರ್ಯ ಬೆಳ್ಳೂರುರವರು ಯೋಗ ತರಗತಿಯನ್ನು ನಡೆಸಿಕೊಟ್ಟರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಶ್ರೀಮತಿ ಪ್ರಭಾವತಿ ಪುಂಡೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.
ಬಳಿಕ 'ನಮ್ಮೊಳಗಿನ ಮನಸ್ಸು-ಕನಸು' ಎಂಬ ತರಗತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಾದ ಡಾ. ರಶ್ಮಿರವರು ನಡೆಸಿಕೊಟ್ಟರು. ಕೇಂದ್ರ ಸಮಿತಿಯ ಸದಸ್ಯರಾದ ರಾಜು ಕ್ರಾಸ್ತಾ ಕಿದೂರುರವರು ಸ್ವಾಗತಿಸಿ, ಕೇಂದ್ರ ಸಮಿತಿಯ ಜೊತೆ ಕೋಶಾಧಿಕಾರಿ ಶ್ರೀ ಶರತ್ ಕುಮಾರ್ ವಂದಿಸಿದರು. ಬಳಿಕ ಸಂಘಟನೆಯ ಕುರಿತಾದ ತರಗತಿಯ ನಡೆಯಿತು. 'ಕನ್ನಡ ಅಧ್ಯಾಪಕ ಸಂಘಟನೆ ಮತ್ತು ನಾವು' ಎಂಬ ವಿಚಾರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಉತ್ತಮ ಚರ್ಚೆ ಮೂಡಿಬಂದು ಸಂಘಟನೆಯನ್ನು ಬೆಳೆಸಲು ಸೂಕ್ತ ಮಾಡಲು ಸಲಹೆ ಸೂಚನೆಗಳನ್ನು ಹಲವರು ನೀಡಿದರು. ಜೊತೆಗೆ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ತರಗತಿಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ರಾವ್ ಪಿ.ಬಿ ರವರು ನಡೆಸಿಕೊಟ್ಟರು. ಕುಂಬಳೆ ಉಪಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀ ನವಪ್ರಸಾದ್ ಸ್ವಾಗತಿಸಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
ಮಧ್ಯಾಹ್ನ ನಂತರ ರಂಗ ನಿರ್ದೇಶಕರಾದ ಶ್ರೀ ಕೃಷ್ಣಪ್ಪ ಬಂಬಿಲ, ನೀನಾಸಂ ಪದವಿದರೆ ಶ್ರೀಮತಿ ಭವಾನಿ ಕಾಂಚನ, ಜನಪದ ಹಾಡುಗಾರ್ತಿ ಕುಮಾರಿ ನೀಲಾವತಿ ಮೊಗ್ರಾ ಹಾಗೂ ಕವಿತಾ ಸುಳ್ಯ ರವರಿಂದ 'ರಂಗಚಿನ್ನಾರಿ - ಅಭಿನಯ - ಗೀತ ಗಾಯನ' ಕಾರ್ಯಕ್ರಮವು ನಡೆಯಿತು. ಕೇಂದ್ರ ಸಮಿತಿಯ ಸದಸ್ಯರಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಘಟಕದ ಜೊತೆ ಕಾರ್ಯದರ್ಶಿ ಶ್ರೀ ದಿವಾಕರ ಬಲ್ಲಾಳ್ ವಂದಿಸಿದರು.
ಸಂಜೆ 'ನವಚೇತನ' ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಎಂ, ಉಪಾಧ್ಯಕ್ಷರಾದ ಶ್ರೀ ಸುಕೇಶ್ ಎ, ಶ್ರೀಮತಿ ಪ್ರಭಾವತಿ ಪುಂಡೂರು, ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಶಿಬಿರದ ಕುರಿತಾದ ಮೆಚ್ಚುಗೆಯ ಮಾತುಗಳು ಬಂದವು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಸ್ವಾಗತಿಸಿ, ಜೊತೆ ಕೋಶಾಧಿಕಾರಿ ಶ್ರೀ ಶರತ್ ಕುಮಾರ್ ವಂದಿಸಿದರು.
No comments:
Post a Comment