FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Wednesday, 7 September 2022

ಇಲಾಖಾ ಪರೀಕ್ಷೆಗೆ ತರಬೇತಿ

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ಶ್ರೀ ಶಾರದಾ ಬೋವೀಸ್ ಎ. ಯು. ಪಿ ಶಾಲೆ ಐಲದಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಲು ಬೇಕಾದ ಇಲಾಖಾ ಪರೀಕ್ಷೆ (Department Test) ಗೆ ತರಬೇತಿ ಕಾರ್ಯಕ್ರಮ ನಡೆಯಿತು.

         ಕಾರ್ಯಕ್ರಮವನ್ನು ಸಂಘಟನೆಯ ಮಾಜಿ ಅಧ್ಯಕ್ಷರಾದ ಶ್ರೀ ಮಹಾಲಿಂಗೇಶ್ವರ ಭಟ್ ಎಂ. ವಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ಕೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ. ಬಿ, ಅಧಿಕೃತ ವಕ್ತಾರರಾದ ಶ್ರೀ ರವೀಂದ್ರನಾಥ ಕೆ. ಆರ್, ಐಲ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಉಪಸ್ಥಿತರಿದ್ದರು. ಮಂಜೇಶ್ವರ ಉಪಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀರಾಮ ಕೆದುಕೋಡಿ ಸ್ವಾಗತಿಸಿ, ಕೋಶಾಧಿಕಾರಿ ಜೀವನ್ ಕುಮಾರ್ ವಂದಿಸಿದರು. 

          ಬಳಿಕ ಕೇಂದ್ರ ಸಮಿತಿಯ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶ್ರೀ ಶ್ರೀನಿವಾಸ ರಾವ್ ಪಿ. ಬಿ. ರವರು ತರಗತಿ ನಡೆಸಿಕೊಟ್ಟರು.

No comments:

Post a Comment