ಅಂಗಡಿಮೊಗರು ಸರಕಾರಿ ಪ್ರೌಢ ಶಾಲೆಗೆ ಕನ್ನಡೇತರ ಅಧ್ಯಾಪಕರ ನೇಮಕಾತಿಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ತೀವ್ರವಾಗಿ ಖಂಡಿಸುತ್ತದೆ.
ತಾ. 29-08-2022 ರಂದು ಅಂಗಡಿಮೊಗರು ಸರಕಾರಿ ಪ್ರೌಢ ಶಾಲೆಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಯೋಗ ಭೇಟಿ ನೀಡಿತು. ಮುಖ್ಯೋಪಾಧ್ಯಾಯ, ಶಿಕ್ಷಕವೃಂದದ ಜೊತೆಗೆ ಚರ್ಚಿಸಲಾಯಿತು. ಕನ್ನಡದ ಕಟ್ಟಾಳುಗಳಾಗಿ ನಿಂತಿದ್ದ ಸುಮಾರು 30ಕ್ಕೂ ಮಿಕ್ಕಿ ಹೆತ್ತವರ ಜೊತೆಗೆ ಮಾತನಾಡಿ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಾಯಿತು.
No comments:
Post a Comment