FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday, 24 December 2022

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಹಾಸಭೆ ; ನೂತನ ಸಮಿತಿ ರೂಪೀಕರಣ:

          ಕೇರಳ ರಾಜ್ಯದ ಅತ್ಯಂತ ದೊಡ್ಡ ಕನ್ನಡ ಸಂಘಟನೆಯಾದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು ಇದರ ಮಹಾಸಭೆಯು ಕಾಸರಗೋಡು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. 

        ಕಾರ್ಯಕ್ರಮದ ಉದ್ಘಾಟನೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ. ಡಿ. ಸದಾಶಿವ ರಾವ್ ನೆರವೇರಿದರು. ಅಧ್ಯಕ್ಷತೆಯನ್ನು ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ ವಹಿಸಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಉಪಸ್ಥಿತರಿದ್ದರು.

        ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವರದಿ ವಾಚನ ಮಾಡಿದರು. ಕೋಶಾಧಿಕಾರಿ ಪದ್ಮಾವತಿ ಎಂ ಲೆಕ್ಕ ಪತ್ರ ಮಂಡಿಸಿದರು.

         ಬಳಿಕ ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಶಿಕ್ಷಕರಾದ ಬಾಬು ಕೆ, ರಾಜು ಕ್ರಾಸ್ತಾ ಕಿದೂರು, ವಿನೋದ್ ರಾಜ್ ಪಿ.ಕೆ, ಅಶೋಕ್ ಕುಮಾರ್ ಕೊಡ್ಲಮೊಗರು ರವರು ಧ್ವನಿಯಾದರು.

        ಇದೇ ಸಂದರ್ಭದಲ್ಲಿ ನೂತನ ಸಮಿತಿ ರೂಪೀಕರಣ ನಡೆಯಿತು. ಅಧ್ಯಕ್ಷರಾಗಿ ಬಾಕ್ರಬೈಲು ಎ. ಯು. ಪಿ ಶಾಲೆ ಪಾತೂರಿನ ಮುಖ್ಯ ಶಿಕ್ಷಕರಾದ ಶ್ರೀನಿವಾಸ ರಾವ್ ಪಿ. ಬಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಎಲ್. ಪಿ ಶಾಲೆ ಕುಳೂರಿನ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ, ಕೋಶಾಧಿಕಾರಿಯಾಗಿ ಜಿ. ಎಲ್. ಪಿ ಶಾಲೆ ಬಡಾಜೆಯ ಮುಖ್ಯ ಶಿಕ್ಷಕಿ ಪದ್ಮಾವತಿ ಎಂ ಮರು ಆಯ್ಕೆಯಾದರು.   

          ಉಪಾಧ್ಯಕ್ಷರಾಗಿ ಜಿ. ಡಬ್ಲ್ಯೂ.ಎಲ್.ಪಿ ಶಾಲೆ ಮಂಜೇಶ್ವರದ ಮುಖ್ಯ ಶಿಕ್ಷಕ ಸುಕೇಶ್ ಎ ಹಾಗೂ ಎನ್. ಎಚ್. ಎಸ್. ಎಸ್ ಪೆರಡಾಲದ ಶಿಕ್ಷಕಿ ಪ್ರಭಾವತಿ ಕೆದಿಲಾಯ, ಸಂಘಟನಾ ಕಾರ್ಯದರ್ಶಿಯಾಗಿ ಎ. ಎಲ್. ಪಿ ಶಾಲೆ ಕಿಳಿಂಗಾರಿನ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಕಾರ್ಯದರ್ಶಿಗಳಾಗಿ ಜಿ. ವಿ. ಎಚ್. ಎಸ್. ಎಸ್. ಕಾರಡ್ಕದ ಶಿಕ್ಷಕ ಶ್ರೀಶ ಕುಮಾರ್ ಪಂಜಿತ್ತಡ್ಕ ಹಾಗೂ ಎ. ಯು. ಪಿ ಶಾಲೆ ಬೋವಿಕಾನದ ಶಿಕ್ಷಕ ಪ್ರದೀಪ್ ಕೆ. ವಿ, ಜತೆ ಕೋಶಾಧಿಕಾರಿಯಾಗಿ ಎ. ಎಸ್. ಬಿ. ಎಸ್. ಕುಂಟಿಕಾನದ ಶಿಕ್ಷಕ ಶರತ್ ಕುಮಾರ್ ಆಯ್ಕೆಯಾದರು. 

          ಕೇಂದ್ರ ಸಮಿತಿಯ ಉಪಾಧ್ಯಕ್ಷ ಸುಕೇಶ್ ಎ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.








No comments:

Post a Comment