FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 16 August 2015


16-08-2015
ಕಯ್ಯಾರರ ದಾರಿದೀಪ ನಮ್ಮ ಕತ್ತಲೆಯನ್ನು ಹೋಗಲಾಡಿಸಲಿ.
 
ಶತಮಾನ ಕಂಡ ಶತಾಯುಷಿ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈ ಇವರು ಅಪ್ರತಿಮ ಹೋರಾಟಗಾರು, ಅನ್ಯಾಯವನ್ನು ಎದುರಿಸುವಲ್ಲಿ ಅವರ ದಿಟ್ಟತನ ಎಲ್ಲರಿಗೂ ಮಾದರಿಯಾದುದು.ಬಹು ಭಾಷಾ ಪಂಡಿತರೂ ಆದರ್ಶ ಶಿಕ್ಷಕರೂ ಆದ ಇವರ ಸಾಧನೆ ಅಪಾರ. ಕಾಸರಗೋಡು ಕನ್ನಡಿಗರ ಮುಖ್ಯ ಧ್ವನಿಯೆಂದೇ ಗುರುತಿಸಲ್ಪಟ್ಟ ಇವರ ಮಾರ್ಗದರ್ಶನ ಯುವಜನಾಂಗಕ್ಕೆ ದಾರಿದೀಪವಾಗಿದೆ, ಎ೦ದು ಎಸ್.ವಿ.ಭಟ್ ಅಧ್ಯಕ್ಷರು .ಸಾ..ಕಾಸರಗೋಡು ಘಟಕ ಇವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಜರಗಿದ ಕಯ್ಯಾರಿಗೆ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಪುಂಡರೀಕಾಕ್ಷ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ಸತೀಷ ಕೆ, ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಮೊದಲಾದವರು ಅಧ್ಯಾಪಕ ಸಂಘದ ನುಡಿನಮನ ಸಲ್ಲಿಸಿ ಶ್ರೀಯುತರನ್ನು ಸ್ಮರಿಸಿದರು. ಕಾಸರಗೋಡು ಘಟಕದ ಅಧ್ಯಕ್ಷರಾದ ರಾಜೇಶ್ವರ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪುಷ್ಪಾವತಿ ವಂದಿಸಿದರು.ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.

Thursday, 13 August 2015

-->
-->
ಕಯ್ಯಾರರಿಗೆ ಕನ್ನಡ ಅಧ್ಯಾಪಕರಿಂದ ನುಡಿನಮನ
ಪ್ರಿಯರೇ,
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈಯವರಿಗೆ ನುಡಿನಮನ ಕಾರ್ಯಕ್ರಮವು ಇದೇ ಬರುವ ದಿನಾಂಕ 16-06-2015 ನೇ ರವಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ದಲ್ಲಿ ಜರಗಲಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಸಭೆಯಲ್ಲಿ ಹಾಜರಿದ್ದು ಶ್ರೀಯುತರ ಸ್ಮರಣಾಂಜಲಿಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಬಳಿಕ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮಾವೇಶವು ಜರಗಲಿದೆ.

14-08-2015
ಅಗೋಸ್ತು 26 ರಂದು ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.
ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊರರಾಜ್ಯ ಕೇರಳ ಹಾಗೂ ಗೋವಾ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಅಗೋಸ್ತು 26 ರಂದು ಕಾಸರಗೋಡಿನ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ ಎ೦ಭತ್ತಮೂರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಡಾ/ ಹನುಮಂತಯ್ಯ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಸ್ಥಳೀಯ ಶಾಸಕರು, ಪಿ.ಎಸ್.ಮೊಹಮ್ಮದ್ ಸಗೀರ್ ಜಿಲ್ಲಾಧಿಕಾರಿ, ಡಾ/ಶ್ರೀನಿವಾಸ್ ಎ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ. .ವೇಣುಗೋಪಾಲನ್, ಜಿಲ್ಲಾ ಶಿಕ್ಷಣಾಧಿಕಾರಿಗಳು. ಕಾಸರಗೋಡು,ಮುರಳೀಧರ ಬಳ್ಳುಕುರಾಯ ಅಧ್ಯಕ್ಷರು ಕರ್ನಾಟಕ ಸಮಿತಿ ಕಾಸರಗೋಡು, ಟಿ.ಡಿ.ಸದಾಶಿವ ರಾವ್ . ಅಧ್ಯಕ್ಷರು ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕಾಸರಗೋಡು.ಎಸ್.ವಿ.ಭಟ್, ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕ, ಜಯರಾಂ ಎಡನೀರು ಅಧ್ಯಕ್ಷರು. ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಕೇರಳ ಸರಕಾರ,ನ್ಯಾಯವಾದಿ ಎ.ಸುಬ್ಬಯ್ಯ ರೈ.ಅಧ್ಯಕ್ಷರು ತುಳು ಅಕಾಡಮಿ ಕೇರಳ ಸರಕಾರ ಮತ್ತು ಕನ್ನಡದ ಪ್ರಸಿದ್ಧ ಸಾಹಿತಿಗಳು, ಶಿಕ್ಷಣ ತಜ್ಞರು ಭಾಗವಹಿಸುವರು.

ಕುಂಬಳೆ ಉಪಜಿಲ್ಲಾ ಮಹಾಸಭೆ.
 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು,  ಇದರ ಕುಂಬಳೆ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು. ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ ಮುಖ್ಯೋಪಾಧ್ಯಾಯರು ಎ.ಎಲ್.ಪಿ.ಶಾಲೆ ಪಣಿಯೆ. ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ. ಅಧ್ಯಾಪಕರು ಎ.ಎಲ್.ಪಿ.ಶಾಲೆ ಕಿಳಿಂಗಾರು. ಕೋಶಾಧಿಕಾರಿ ಶ್ರೀ ಅಧ್ಯಾಪಕರು ವಿ.ಎ.ಎಲ್.ಪಿ.ಶಾಲೆ ಉಕ್ಕಿನಡ್ಕ. ಆಯ್ಕೆಯಾದರು. 
 ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ
 ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ.

ಕಿರಣ ಶಂಕರ ಕೆ.ಎಸ್

Monday, 3 August 2015

ಮಂಜೇಶ್ವರ ಉಪಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರವೀಂದ್ರನಾಥ ಬಲ್ಲಾಳ್ ಇವರಿಗೆ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು ಮತ್ತು ಖಜಾಂಜಿಯಾಗಿ ಆಯ್ಕೆಯಾದ ಜಯಪ್ರಶಾಂತ್ ಇವರಿಗೆ ಅಭಿನಂದನೆಗಳು.
ರವೀಂದ್ರನಾಥ ಬಲ್ಲಾಳ್ ಅಧ್ಯಕ್ಷರು, 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಘಟಕ
ಅಶೋಕ್ ಕುಮಾರ್ ಕಾರ್ಯದರ್ಶಿ 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಘಟಕ
01-08-2015
ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ.
 
ಮಂಜೇಶ್ವರ : ಒಂದು ಹಣತೆ ತಾನು ಎಷ್ಟು ಬೆಳಗಬಲ್ಲೆನೋ ಅಷ್ಟು ಕರ್ತವ್ಯ ತನ್ನಿಂದಾಗಲಿ ಎಂದೆಣಿಸಿ ಬೆಳಗಿ ,ಅಸಂಖ್ಯಾತ ಹಣತೆಗಳು ಒಟ್ಟಾದಾಗ ಇಡೀ  ಪರಿಸರವನ್ನು ಬೆಳಗುವಂತೆ ಮಾಡುತ್ತವೆ. ಅಂತೆಯೇ ಕಾಸರಗೋಡು ಕನ್ನಡಿಗರು ಇಲ್ಲಿನ ಭಾಷಾ ಸಂಬಂಧಿ ಸಮಸ್ಯೆಗಳಿಗೆ ಧೃತಿಗೆಡದೆ ಕನ್ನಡ ಭಾಷೆ, ಸಂಸ್ಕೃತಿಯನ್ನ ಉಳಿಸಲು ಅಳಿಲ  ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಅಧ್ಯಾಪಕರು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ವಿ.ವಿ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಖ್ಯಾತ ಹಾಸ್ಯ ಲೇಖಕಿಯಾದ ಶ್ರೀಮತಿ ಪ್ರೊ. ಭುವನೇಶ್ವರಿ ಹೆಗಡೆ ನುಡಿದರು. ಇವರು ಸರಕಾರಿ ಪ್ರೌಢ ಶಾಲೆ ಉದ್ಯಾವರದಲ್ಲಿ ಜರಗಿದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ(ರಿ.) ಕಾಸರಗೋಡು ಇದರ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆಯನ್ನು ಉದ್ಘಾಟಿಸಿ ನುಡಿದರು
       ಮಂಜೇಶ್ವರ ಘಟಕದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ ಬಿ. ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಭೆಯಲ್ಲಿ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಶ್ರೀ. .ವೇಣುಗೋಪಾಲ್ , ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಎನ್. ಮುಖ್ಯ ಅತಿಥಿಗಳಾಗಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅದ್ಯಾಪಕ ಸಂಘದ ಅಧ್ಯಕ್ಷ ಶ್ರೀ. ಟಿ.ಡಿ. ಸದಾಶಿವ ರಾವ್, ಉಪಾಧ್ಯಕ್ಷ ಶ್ರೀ ಮಹಾಲಿಂಗೇಶ್ವರ ಭಟ್ , ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಯಂ. ,ಮಂಜೇಶ್ವರ ಉಪಜಿಲ್ಲಾ ಕೋಶಾಧಿಕಾರಿ ಶ್ರೀ. ಭಾಸ್ಕರ ಎಸ್. , ಉದ್ಯಾವರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇವತಿ ಉಪಸ್ಥಿತರಿದ್ದರು
      ಉಪಜಿಲ್ಲಾ ಕಾರ್ಯದರ್ಶಿ ಶ್ರೀ. ಅಶೋಕ್ ಕೆ. ಸ್ವಾಗತಿ,ಶ್ರೀ ಉಮೇಶ್ ಕೆ. ವಂದಿಸಿದ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಉಪಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ. ಜಯಪ್ರಶಾಂತ್ ನಡೆಸಿದರು. ಬಳಿಕ ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು