01-08-2015
ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ.
ಮಂಜೇಶ್ವರ
: ಒಂದು
ಹಣತೆ ತಾನು ಎಷ್ಟು ಬೆಳಗಬಲ್ಲೆನೋ
ಅಷ್ಟು ಕರ್ತವ್ಯ ತನ್ನಿಂದಾಗಲಿ
ಎಂದೆಣಿಸಿ ಬೆಳಗಿ ,ಅಸಂಖ್ಯಾತ
ಹಣತೆಗಳು ಒಟ್ಟಾದಾಗ ಇಡೀ ಪರಿಸರವನ್ನು
ಬೆಳಗುವಂತೆ ಮಾಡುತ್ತವೆ.
ಅಂತೆಯೇ ಕಾಸರಗೋಡು
ಕನ್ನಡಿಗರು ಇಲ್ಲಿನ ಭಾಷಾ ಸಂಬಂಧಿ
ಸಮಸ್ಯೆಗಳಿಗೆ ಧೃತಿಗೆಡದೆ ಕನ್ನಡ
ಭಾಷೆ, ಸಂಸ್ಕೃತಿಯನ್ನ
ಉಳಿಸಲು ಅಳಿಲ ಸೇವೆ ಮಾಡಬೇಕು.
ಈ ನಿಟ್ಟಿನಲ್ಲಿ
ಇಲ್ಲಿನ ಅಧ್ಯಾಪಕರು ಸಮಸ್ಯೆಗಳನ್ನು
ಮೆಟ್ಟಿ ನಿಲ್ಲುವ ಯತ್ನ ಮಾಡುತ್ತಿರುವುದು
ಶ್ಲಾಘನೀಯ ಎಂದು ಮಂಗಳೂರು ವಿ.ವಿ.
ಕಾಲೇಜಿನ ಅರ್ಥಶಾಸ್ತ್ರ
ವಿಭಾಗದ ಮುಖ್ಯಸ್ಥರೂ,
ಖ್ಯಾತ ಹಾಸ್ಯ ಲೇಖಕಿಯಾದ
ಶ್ರೀಮತಿ ಪ್ರೊ.
ಭುವನೇಶ್ವರಿ ಹೆಗಡೆ
ನುಡಿದರು. ಇವರು
ಸರಕಾರಿ ಪ್ರೌಢ ಶಾಲೆ ಉದ್ಯಾವರದಲ್ಲಿ
ಜರಗಿದ ಕೇರಳ ಪ್ರಾಂತ್ಯ ಕನ್ನಡ
ಮಾಧ್ಯಮ ಅಧ್ಯಾಪಕ ಸಂಘ(ರಿ.)
ಕಾಸರಗೋಡು ಇದರ ಮಂಜೇಶ್ವರ
ಉಪಜಿಲ್ಲಾ ಘಟಕದ ಮಹಾಸಭೆಯನ್ನು
ಉದ್ಘಾಟಿಸಿ ನುಡಿದರು.
ಮಂಜೇಶ್ವರ
ಘಟಕದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ
ರಾವ್ ಪಿ ಬಿ. ಇವರ
ಅಧ್ಯಕ್ಷತೆಯಲ್ಲಿ ಜರಗಿದ ಈ
ಸಭೆಯಲ್ಲಿ ಕಾಸರಗೋಡು ಜಿಲ್ಲಾ
ವಿದ್ಯಾಧಿಕಾರಿ ಶ್ರೀ.
ಇ.ವೇಣುಗೋಪಾಲ್
, ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ
ನಂದಿಕೇಶನ್ ಎನ್.
ಮುಖ್ಯ ಅತಿಥಿಗಳಾಗಿದ್ದರು.
ಕೇರಳ ಪ್ರಾಂತ್ಯ ಕನ್ನಡ
ಮಾಧ್ಯಮ ಅದ್ಯಾಪಕ ಸಂಘದ ಅಧ್ಯಕ್ಷ
ಶ್ರೀ. ಟಿ.ಡಿ.
ಸದಾಶಿವ ರಾವ್,
ಉಪಾಧ್ಯಕ್ಷ ಶ್ರೀ
ಮಹಾಲಿಂಗೇಶ್ವರ ಭಟ್ ,
ಕೋಶಾಧಿಕಾರಿ ಶ್ರೀಮತಿ
ಪದ್ಮಾವತಿ ಯಂ. ,ಮಂಜೇಶ್ವರ
ಉಪಜಿಲ್ಲಾ ಕೋಶಾಧಿಕಾರಿ ಶ್ರೀ.
ಭಾಸ್ಕರ ಎಸ್.
, ಉದ್ಯಾವರ ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ರೇವತಿ ಉಪಸ್ಥಿತರಿದ್ದರು.
ಉಪಜಿಲ್ಲಾ
ಕಾರ್ಯದರ್ಶಿ ಶ್ರೀ.
ಅಶೋಕ್ ಕೆ.
ಸ್ವಾಗತಿ,ಶ್ರೀ
ಉಮೇಶ್ ಕೆ. ವಂದಿಸಿದ
ಸಭಾ ಕಾರ್ಯಕ್ರಮದ ನಿರೂಪಣೆಯನ್ನು
ಉಪಜಿಲ್ಲಾ ಜೊತೆ ಕಾರ್ಯದರ್ಶಿ
ಶ್ರೀ. ಜಯಪ್ರಶಾಂತ್
ನಡೆಸಿದರು. ಬಳಿಕ
ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳ
ಆಯ್ಕೆ ನಡೆಯಿತು.
No comments:
Post a Comment