ಮಕ್ಕಳ
ಸಾಹಿತ್ಯ ಸಂಗಮ ಉಡುಪಿ,
ಕಾಸರಗೋಡು
ಸಹಿತ ದಕ್ಷಿಣ ಕನ್ನಡ ಜಿಲ್ಲೆ
(ರಿ).
ಮಕ್ಕಳ
ಧ್ವನಿ 2015.ಸಂಘಟಕ
ಸಮಿತಿ.
ಮಕ್ಕಳ
ಧ್ವನಿಗೆ ಸರ್ವಾಧ್ಯಕ್ಷ ಮತ್ತು
ಕವಿಗೋಷ್ಠಿ,ಕಥಾಗೋಷ್ಠಿ
ಅಧ್ಯಕ್ಷರ ಆಯ್ಕೆ
|
ಉಡುಪಿ,
ಕಾಸರಗೋಡು
ಸಹಿತ ದಕ್ಷಿಣ ಕನ್ನಡ ಜಿಲ್ಲಾ
ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ
ಜರಗುವ
ಮಕ್ಕಳ ಧ್ವನಿ
ಕಾರ್ಯಕ್ರಮವು ಇದೇ ಬರುವ ಆಗಸ್ಟ್
ತಿಂಗಳಲ್ಲಿ ಮಹಾಜನ ಸಂಸ್ಕೃತ
ಕಾಲೇಜು
ಉನ್ನತ
ಪ್ರೌಢ ಶಾಲೆ ನೀರ್ಚಾಲಿನಲ್ಲಿ
ನಡೆಯಲಿರುವುದು.
ಮೂರು ಜಿಲ್ಲೆಗಳ
ವಿವಿಧ ಶಾಲೆಗಳಿಂದ ಮಕ್ಕಳು
ಇದರಲ್ಲಿ
ಭಾಗವಹಿಸುತ್ತಾರೆ.
ಈ ಕಾರ್ಯಕ್ರಮದ
ಅಂಗವಾಗಿ ನಡೆಯುವ ಕವಿಗೋಷ್ಟಿ,
ಕಥಾಗೋಷ್ಠಿಗಳ
ಅಧ್ಯಕ್ಷರು
ಮತ್ತು ಸರ್ವಾಧ್ಯಕ್ಷರ ಸ್ಥಾನಕ್ಕೆ
ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ
ಮಾಡಬೇಕಾಗಿದೆ.ಇದಕ್ಕಾಗಿ
ಇದೇ ಬರುವ
12-07-2015
ನೇ
ರವಿವಾರ ಪೂರ್ವಾಹ್ನ
10.30
ಗಂಟೆಗೆ
ಸರಿಯಾಗಿ ಮಹಾಜನ ಸಂಸ್ಕೃತ
ಕಾಲೇಜು ಉನ್ನತ ಪ್ರೌಢ ಶಾಲೆ
ನೀರ್ಚಾಲಿನಲ್ಲಿ ಆಯ್ಕೆಯ
ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ.
ಪ್ರೌಢ ಶಾಲೆ
ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ
ಕಲಿಯುತ್ತಿರುವ ಮಕ್ಕಳು ಇದರಲ್ಲಿ
ಭಾಗವಹಿಸಬಹುದು.ಭಾಗವಹಿಸಲಿಚ್ಛಿಸುವ
ಮಕ್ಕಳು ತಮ್ಮ ಅರ್ಜಿಯನ್ನು
ಸ್ವವಿವರಗಳೊಂದಿಗೆ ಜುಲೈ 5ನೇ
ತಾರೀಕಿನ
ಒಳಗಾಗಿ ಕಳುಹಿಸಿಕೊಡಬೇಕು.ಆಯ್ಕೆಯ
ದಿನದಂದು ಅವರು ತಮ್ಮ ಇತ್ತೀಚೆಗಿನ
ಭಾವಚಿತ್ರ,
ಅರ್ಹತೆಯ
ದಾಖಲೆಗಳು ಮತ್ತು ಶಾಲೆಯ ದೃಢೀಕರಣ
ಪತ್ರವನ್ನು ತರಬೇಕು.ಅರ್ಜಿ
ಸಲ್ಲಿಸುವ ವಿಳಾಸಃ ಸಂಚಾಲಕರು,
ಮಕ್ಕಳ
ಧ್ವನಿ 2015.
ಮಹಾಜನ
ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ
ಶಾಲೆ
ನೀರ್ಚಾಲು,
ಅಂಚೆ
ನೀರ್ಚಾಲು.
ಕಾಸರಗೋಡು,
671321. ಹೆಚ್ಚಿನ
ವಿವರಗಳಿಗೆ ಸಂಚಾರಿ ದೂರವಾಣಿ
ಸಂಖ್ಯೆಗಳುಃ 9946046561,
9447490287.ಅಥವಾ
ಕೇಂದ್ರ ಸಮಿತಿಯನ್ನು ಸಂಪರ್ಕಿಸಬಹುದು.
21-06-2015
ನೀರ್ಚಾಲು
ಇತೀ,
ಅಧ್ಯಕ್ಷರು/
ಸಂಚಾಲಕರು
ಮಕ್ಕಳ ಧ್ವನಿ
ಕಾರ್ಯಕ್ರಮ 2015.
No comments:
Post a Comment