27-062015
ಕನ್ನಡ ಪಠ್ಯ ಪುಸ್ತಕ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಪ್ರತಿಭಟಿಸಿ ಧರಣಿ ಮುಷ್ಕರ
ಕಾಸರಗೋಡು ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತನ್ನು ನೀಡುವ ಜವಾಬ್ದಾರಿ ಸರಕಾರಕ್ಕಿದೆ. ಪ್ರಜಾಪ್ರಭುತ್ವ ಸರಕಾರ ಅಸ್ಥಿತ್ವವಿರುವ ಪ್ರದೇಶದಲ್ಲಿ ಜನರು ಬೀದಿಗಿಳಿಯುವುದು ಸರಕಾರಕ್ಕೆ ಅವಮಾನ. ನಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಇನ್ನಾದರೂ ಈ ಸತ್ಯವನ್ನು ಮನಗಂಡು ವ್ಯವಹರಿಸಿದರೆ ಜನರು ತಮ್ಮ ಪಾಡಿಗೆ ನಿಶ್ಚಿಂತೆಯಿಂದ ಕೆಲಸ ಮಾಡಬಹುದು. ಕಾಸರಗೋಡಿನಲ್ಲಿ ನಡೆಯುವ ಕನ್ನಡ ಕಟ್ಟುವ ಕಾಯಕದಲ್ಲಿ ನಾವೆಲ್ಲಾ ಪಕ್ಷ ಬೇಧವಿಲ್ಲದೆ ಕನ್ನಡಿಗರೆಲ್ಲಾ ಒಂದಾಗಬೇಕು ಎಂದು ಎಸ್.ಎಸ್.ವಿ.ಎಚ್.ಎಸ್.ಎಸ್. ಶಾಲೆಯ ಪ್ರಬಂಧಕರಾದ ಡಾ/ಜಯಪ್ರಕಾಶ್ ತೊಟ್ಟೆತ್ತೋಡಿ ನುಡಿದರು.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಧರಣಿ ಮುಷ್ಕರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು.ಎಸ್.ವಿ.ಭಟ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ,ಬಿ.ಪುರುಷೋತ್ತಮ ಮಾಸ್ತರ್ ಅಧ್ಯಕ್ಷರು ಸಮನ್ವಯ ಸಮಿತಿ , ಮುರಳೀಧರ ಬಳ್ಳುಕುರಾಯ ಅಧ್ಯಕ್ಷರು ಕರ್ನಾಟಕ ಸಮಿತಿ, ಡಾ/ರತ್ನಾಕರ ಮಲ್ಲಮೂಲೆಉಪನ್ಯಸಕರು ಕಾಸರಗೋಡು ಕಾಲೇಜು , ಸಂಘಟನೆಯ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ,ಮಂಜೇಶ್ವರ ಘಟಕಾಧ್ಯಕ್ಷರಾದ ಶ್ರೀನಿವಾಸ ಬಾಕ್ರಬೈಲು, ಕುಂಬಳೆ ಘಟಕಾಧ್ಯಕ್ಷರಾದ ರಾಜಾರಾಮ ಕೆ.ವಿ., ಕೇಂದ್ರದ ಉಪಾಧ್ಯಕ್ಷರಾದ ಕೆ.ವಿ.ಸತ್ಯನಾರಾಯಣ ರಾವ್ ಮತ್ತು ಜೊತೆ ಕಾರ್ಯದರ್ಶಿ ಪ್ರಭಾವತಿ ಕೆದಿಲ್ಲಾಯ ಪುಂಡೂರು ಮಾತನಾಡಿದರು.ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಪ್ರಾಸ್ತಾವಿಕ ನುಡಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಸುಕೇಶ್ ಎ ವಂದಿಸಿದರು. ದರಣಿ ಮುಷ್ಕರದ ಬಳಿಕ ಡಿ.ಡಿ.ಇ.ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
No comments:
Post a Comment