FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday 21 June 2015

21-06-2015
ಕನ್ನಡ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ ನೀತಿಯನ್ನು ಪ್ರತಿಭಟಿಸಿ ಧರಣಿ ಮುಷ್ಕರಕ್ಕೆಕರೆ

ಶಾಲೆ ಆರಂಭವಾಗಿ ಇಪ್ಪತ್ತು ದಿನಗಳಾಗಿಯೂ ಪಠ್ಯ ಪುಸ್ತಕಗಳ ವಿತರಣೆಯ ಕಾರ್ಯ ಇನ್ನೂ ನಡೆಯದ ಸ್ಥಿತಿ ಸುಶಿಕ್ಷಿತ ಕೇರಳಿಗರೆಂದು ಹೆಮ್ಮೆ ಪಡುವ ನಮಗೆ ಅಪಮಾನವಾಗಿದೆ. ಸಾಕ್ಷರ, ಬ್ಲೆಂಡ್ ಮೊದಲಾನ ನೂತನ ತಂತ್ರಗಳನ್ನು ಶಿಕ್ಷಣ ರಂಗಕ್ಕೆ ಪರಿಚಯಿಸಿದ ಕಾಸರಗೋಡು ಶಿಕ್ಷಣ ವಲಯ; ಅಕ್ಷರಶಃ ದಂಗಾಗಿ ಹೋಗಿದೆ. ಪಾಠ ಪುಸ್ತಕಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಈ ಕೂಡಲೇ ನಿಲ್ಲಿಸಬೇಕು. ತಕ್ಷಣ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿ ಮಕ್ಕಳ ನ್ಯಾಯಯುತ ಹಕ್ಕನ್ನು ಕಾಪಾಡುವ ಪ್ರಾಮಾಣಿಕರ ಪ್ರಯತ್ನವನ್ನು ಮಾಡಬೇಕು ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ನುಡಿದರು. ಅವರು ಕಾಸರಗೋಡು ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಕೇಂದ್ರ ಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡುತ್ತಿದ್ದರು., ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ, ಮಹಾಲಿಂಗೇಶ್ವರ ರಾಜ್ ಡಿ.,ಮಂಜೇಶ್ವರ ಘಟಕಾಧ್ಯಕ್ಷರಾದ ಶ್ರೀನಿವಾಸ ರಾವ್, ಕುಂಬಳೆ ಘಟಕಾಕ್ಷರಾದ ರಾಜಾರಾಮ ಕೆ.ವಿ.,ಬೇಕಲ ಹೊಸದುರ್ಗ ಘಟಕಾಧ್ಯಕ್ಷರಾದ ಪುಷ್ಪಾವತಿ ಕೆ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಸುಕೇಶ ಎ, ಅಶೋಕ್ ಕೊಡ್ಲಮೊಗರು, ರತ್ನಪ್ರಭಾ ಕೆ, ಪ್ರದೀಪ್ ಕುಮಾರ್ ಶೆಟ್ಟಿ, ರಜನಿ ಕುಮಾರಿ, ಉಮೇಶ ಕೆ, ಬಾಬು ಕೆ, ಅಬ್ದುಲ್ ರಹಿಮಾನ್ ಎನ್ ಚರ್ಚೆಯಲ್ಲಿ ಭಾಗವಹಿಸಿದರು. ಜೂನ್ 27 ರಂದು ಕಾಸರಗೋಡು ಶಿಕ್ಷಣ ಉಪನಿರ್ದೇಶಕರ ಕಛೇರಿಯ ಮುಂಭಾಗ ಧರಣಿ ಮುಷ್ಕರ ಹೂಡಲು ಕರೆ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಎದುರಾಗುವ ಸಮಸ್ಯೆಗಳಿಗೆ ಶಿಕ್ಷಕರನ್ನು ಹೊಣೆಯಾಗಿಸುವ ಹುನ್ನಾರಕ್ಕೆ ಅವಕಾಶ ನೀಡಲಾರೆವು ಎ೦ದು ಸಭೆಯಲ್ಲಿ ಘೋಷಿಸಲಾಯಿತು.
ಬಳಿಕ ಅಧ್ಯಾಪಕ ಭವನ ನಿರ್ವಹಣೆ , ಅಧ್ಯಾಪಕ ಧ್ವನಿ, ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭ ಮೊದಲಾದ ವಿಚಾರಗಳ ಚರ್ಚೆ ನಡೆಯಿತು. ಒಂದನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸೇರ್ಪಡೆಯಾದ ಮಕ್ಕಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸುಮಾರು ಹತ್ತು ಸಾವಿರ ರೂಪಾಯಿಗಳಷ್ಟು ಹಣವನ್ನು ಬೇಂಕಿನಲ್ಲಿ ಜಮಾಮಾಡಿ ಹತ್ತನೇ ತರಗತಿ ಪೂರೈಸಿದ ಬಳಿಕ ಆ ಹಣ ಮಕ್ಕಳಿಗೆ ಸಿಗುವಂತೆ ಮಾಡುವ ಯೋಜನೆಯನ್ನು ಕಾರ್ಯಗತ ಮಾಡಲಿದೆ ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟುಮಾಡಲು ಸಹಾಯಕ ಎ೦ದು ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ನುಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರಂತರ ಸಂಪರ್ಕದಿಂದ ಈ ಕೊಡುಗೆ ಕಾಸರಗೋಡಿನ ಕನ್ನಡಿಗರಿಗೆ ಒಲಿದು ಬಂದಿದೆ.ಎ೦ದು ಅವರು ಅಭಿಪ್ರಾಯಪಟ್ಟರು.
ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು.

No comments:

Post a Comment