ಕವಿ
ಕಯ್ಯಾರಗೊಂದಿಗೆ ಮಕ್ಕಳ ಸಾಹಿತ್ಯ
ಸಂಗಮ.
ಉಡುಪಿ,
ಕಾಸರಗೋಡು
ಸಹಿತ ದಕ್ಷಿಣ ಕನ್ನಡ ಜಿಲ್ಲಾ
ಮಕ್ಕಳ ಸಾಹಿತ್ಯ ಸಂಗಮದ ಕೇಂದ್ರ
ಸಮಿತಿಯ ವತಿಯಿಂದ ಶತಪೂರ್ತಿ
ವರ್ಷಾಚರಣೆದಲ್ಲಿರುವ ಹಿರಿಯ
ಕವಿ ನಾಡೋಜ ಡಾ/
ಕಯ್ಯಾರರಿಗೆ
ಅಭಿನಂದನೆಗೈಯಲಾಯಿತು."ನಾನು
ನೂರು ವರ್ಷ ಬದುಕಿ ಕನ್ನಡದ ಸೇವೆ
ಮಾಡುತ್ತೇನೆ'.
ಎ೦ದು
ಮಂಗಳೂರಿನಲ್ಲಿ ಹಲವು ವರ್ಷಗಳ
ಹಿಂದೆ ನಡೆದ ಮಕ್ಕಳ ಧ್ವನಿಯಲ್ಲಿ
ನುಡಿದುದನ್ನು ನೀವು ಇಂದು
ನಿಜಗೊಳಿಸಿದ್ದೀರಿ.
""ಈ
ಸಲದ ಮಕ್ಕಳ ಧ್ವನಿ ಕಾರ್ಯಕ್ರಮವು
ಕಾಸರಗೋಡಿನಲ್ಲಿನಡೆಯುತ್ತಿರುವುದು
ನಿಮ್ಮ ಊರಲ್ಲಿ ಎ೦ಬುದು ನಮಗೆ
ಹೆಮ್ಮೆಯ ವಿಷಯ ನಿಮ್ಮ ಆಶೀರ್ವಾದ
ಸದಾ ನಮಗಿರಲಿ''
ಎ೦ದು
ಸಾವಿತ್ರಿ ಎಸ್.ರಾವ್
ನುಡಿದರು.ಅವರು
ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ
ಕಯ್ಯಾರರಿಗೆ ಸನ್ಮಾನ ಮಾಡಿ
ಮಾತನಾಡಿದರು.
ಕಯ್ಯಾರರ
ಪ್ರಸಿದ್ಧ ಕವನ "ಐಕ್ಯವೊಂದೇ
ಮಂತ್ರ'
ವನ್ನು
ಹಾಡಿದರು.
ಸಾಹಿತ್ಯ
ಪರಿಷತ್ತು ಕಾಸರಗೋಡು ಘಟಕಾಧ್ಯಕ್ಷರಾದ
ಎಸ್.ವಿ.ಭಟ್
ಮತ್ತು ಸಂಗಮದ ಪ್ರತಿನಿಧಿಗಳಾಗಿ
ಕೇಂದ್ರಾಧ್ಯಕ್ಷರಾದ ಸುಬ್ರಹ್ಮಣ್ಯ
ಭಟ್,
ಕಾಸರಗೋಡು
ಘಟಕಾಧ್ಯಕ್ಷೆ ವಾಣಿ ಪಿ.ಎಸ್,
ವಿ.ಬಿ.ಕುಳಮರ್ವ,
ಲಲಿತಾಲಕ್ಷ್ಮಿ
ಕುಳಮರ್ವ.
ಕಾಸರಗೋಡು
ಘಟಕದ ಕಾರ್ಯದರ್ಶಿ ಬಾಲ ಮಧುರಕಾನನ,
ಕೇಂದ್ರ
ಸಮಿತಿ ಸದಸ್ಯರಾದ ವಿಶಾಲಾಕ್ಷಿ,
ಅಶ್ವಿನಿ
ಮತ್ತು ಆಶಾ ದಿಲೀಪ್,
ಜ್ಯೋತ್ಸ್ನಾ
ಕಡಂದೇಲು,ಶೈಲಜಾ
ಬಿ ಮತ್ತು ವೀರೇಶ್ವರ ಭಟ್
ಉಪಸ್ಥಿತರಿದ್ದರು.
No comments:
Post a Comment