14-06-2015
ಮಕ್ಕಳ ಧ್ವನಿ ಸಂಘಟಕ ಸಮಿತಿ ಸಭೆ
14-06-2015
ಮಕ್ಕಳ
ಧ್ವನಿ-ಸಿದ್ಧತೆಯ
ಸಭೆ.
ನೀರ್ಚಾಲು,
ಮಕ್ಕಳ
ಸಾಹಿತ್ಯ ಸಂಗಮವು ಮಕ್ಕಳಿಗಾಗಿ
ಅನೇಕ ಚಟುವಟಿಕೆಗಳನ್ನು ಮಾಡುತ್ತಾ
ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು
ಮೂಡಿಸುವ ಕೆಲಸವನ್ನು ಮಾಡುತ್ತಿರುವುದು
ಶ್ಲಾಘನೀಯ,
ಎಳವೆಯಲ್ಲಿಯೇ
ಸಾಹಿತ್ಯಾಭಿರುಚಿ ಉಂಟಾದರೆ ಅದು
ಉತ್ತಮ ಹವ್ಯಾಸವಾಗಿ ಮುಂದುವರಿಯುತ್ತದೆ.
ಇದರಿಂದ
ಮಕ್ಕಳ ಓದುವ ಸಾಮಾರ್ಥ್ಯವು
ವೃದ್ದಿಸುವುದಲ್ಲದೆ ತಾರ್ಕಿಕ
ಚಿಂತನೆಯನ್ನು ಬೆಳಗುತ್ತದೆ.
ಇದಲ್ಲದೆ
ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕಾದರೆ
ಸಾಹಿತ್ಯಾಸಕ್ತಿ ಅನಿವಾರ್ಯವಾಗಿದೆ.
ಈ ನಿಟ್ಟಿನಲ್ಲಿ
ಮಕ್ಕಳ ಸಾಹಿತ್ಯ ಸಂಗಮವು ಮಕ್ಕಳ
ಧ್ವನಿಯಂತಹ ಔಚಿತ್ಯಪೂರ್ಣ
ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು
ಸಂತೋಷದ ವಿಚಾರ.
ಈ ಸಲದ ಮಕ್ಕಳ
ಧ್ವನಿಯ ಆತಿಥ್ಯವು ಕಾಸರಗೋಡು
ಜಿಲ್ಲೆಗೆ ಸಿಕ್ಕಿರುವುದು ನಮ್ಮ
ಸಾಹಿತ್ಯಾಭಿರುಚಿಗೆ ಸಂದ ಗೌರವ;
ಇದನ್ನು
ಯಶಸ್ವಿಗೊಳಿಸಲು ಎಲ್ಲರೂ
ಕೈಜೋಡಿಸಬೇಕು.
ನಮ್ಮ ಮುಂದಿನ
ಸಾಹಿತ್ಯ ಸಾರಥಿಗಳನ್ನು ಸಿದ್ಧಗೊಳಿಸುವ
ಕಿರು ಪ್ರಯತ್ನದಲ್ಲಿ ಭಾಗಿಯಾಗಬೇಕು,
ಎ೦ದು ಸಾಹಿತ್ಯ
ಪರಿಷತ್ತು ಕಾಸರಗೋಡು ಗಡಿನಾಡ
ಘಟಕಾಧ್ಯಕ್ಷರಾದ ಎಸ್.ವಿ.ಭಟ್
ನುಡಿದರು.
ಅವರು ನೀರ್ಚಾಲು
ಮಹಾಜನ ಸಂಸ್ಕೃತ ಕಾಲೇಜು ಉನ್ನತ
ಪ್ರೌಢ ಶಾಲೆಯಲ್ಲಿ ನಡೆಯಲಿರುವ
ಮಕ್ಕಳ ಧ್ವನಿ ಕಾರ್ಯಕ್ರಮದ ಸಂಘಟಕ
ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಕ್ಕಳ
ಧ್ವನಿ ಸಿದ್ದತೆಯ ಸಂಘಟಕ ಸಭೆಯ
ಅಧ್ಯಕ್ಷತೆಯನ್ನು ಮಹಾಜನ
ವಿದ್ಯಾಸಂಸ್ಥೆಗಳ ಪ್ರಬಂಧಕರಾದ
ಜಯದೇವ ಖಂಡಿಗೆ ವಹಿಸಿದ್ದರು.
ಬದಿಯಡ್ಕ
ಪಂಚಾಯತ್ ಉಪಾಧ್ಯಕ್ಷರಾದ
ಕೆ.ಎನ್.ಕೃಷ್ಣ
ಭಟ್, ಜಾನಪದ
ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ
ಕೇಶವ ಪ್ರಸಾದ್ ನಾಣಿಹಿತ್ತಿಲು,
ಕೇರಳ ಪ್ರಾಂತ್ಯ
ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ
ಉಪಾಧ್ಯಕ್ಷರಾದ ಮಹಾಲಿಂಗೇಶ್ವರ
ಭಟ್ ಎ೦.ವಿ,
ಕುಂಬಳೆ
ಉಪಜಿಲ್ಲಾ ಶಿಕ್ಷಣಾಧಿಕಾರಿ
ಕೈಲಾಸ ಮೂರ್ತಿ,
ಪ್ರೊ/ಅನಂತ
ಪದ್ಮನಾಭ ರಾವ್,
ಡಾ/ಹರಿಕೃಷ್ಣ
ಭರಣ್ಯ, ಮಕ್ಕಳ
ಸಾಹಿತ್ಯ ಸಂಗಮ ಕಾಸರಗೋಡು ಘಟಕದ
ಅಧ್ಯಕ್ಷೆ ವಾಣಿ ಪಿ.ಎಸ್
ಮತ್ತು ಆತಿಥೇಯ ಶಾಲೆಯ ಮುಖ್ಯ
ಶಿಕ್ಷಕರಾದ ಸಿ.ಎಚ್
ವೆಂಕಟರಾಜ ಉಪಸ್ಥಿತರಿದ್ದರು.
ಕೇಂದ್ರ ಘಟಕದ
ಪೂರ್ವಾಧ್ಯಕ್ಷರಾದ ವಿ.ಬಿ.
ಕುಳಮರ್ವ
ಪ್ರಾಸ್ತಾವಿಕ ನುಡಿದರು.ಕೇಂದ್ರಾಧ್ಯಕ್ಷ
ಸುಬ್ರಹ್ಮಣ್ಯ ಭಟ್ ಕೆ,
ಸಾವಿತ್ರಿ
ಎಸ್ ರಾವ್ ಮಕ್ಕಳ ಧ್ವನಿಯ ಆಶಯ
ಚಿತ್ರಣ ಮೂಡಿಸಿದರು.ಕಾಸರಗೋಡು
ಘಟಕದ ಕಾರ್ಯದರ್ಶಿ ಬಾಲ ಮಧುರಕಾನನ
ಸ್ವಾಗತಿಸಿ,
ಗೋವಿಂದ ಶರ್ಮ
ಕೆ. ವಂದಿಸಿದರು.
ಶೈಲಜಾ ಬಿ
ಪ್ರಾರ್ಥನೆ ಮತ್ತು ಮಂಗಳ
ಹಾಡಿದರು.ಕಾಸರಗೋಡಿನ
ವಿವಿಧ ಕನ್ನಡ ಸಂಘ ಸಂಸ್ಥೆಗಳ
ಪದಾಧಿಕಾರಿಗಳು,
ವಿದ್ಯಾರ್ಥಿಗಳ
ಶ್ರೇಯೋಭಿಲಾಷಿಗಳು ಸೇರಿದಂತೆ
ಬಹು ಸಂಖ್ಯೆಯಲ್ಲಿ ಸದಸ್ಯರು
ಭಾಗವಹಿಸಿದ್ದರು.
ಕಾರ್ಯಕ್ರಮದ
ರೂಪುರೇಷೆಯ ಚಿಂತನೆಯ ಬಳಿಕ ಸ್ವಾಗತ
ಸಮಿತಿ ರೂಪಿಸಲಾಯಿತು.
ಎಸ್.ವಿ.ಭಟ್
ಗೌರವಾಧ್ಯಕ್ಷರಾಗಿ,
ಜಯದೇವ ಖಂಡಿಗೆ
ಅಧ್ಯಕ್ಷರಾಗಿ,
ಪ್ರಧಾನ
ಸಂಚಾಲಕರಾಗಿ ಗೋವಿಂದ ಶರ್ಮ
ಆಯ್ಕೆಯಾದರು.
ಕಾರ್ಯಕ್ರಮದ
ಯಶಸ್ವೀ ನಿರ್ವಹಣೆಗಾಗಿ ಉಪಸಮಿತಿ
ಮತ್ತು ಸಲಹಾ ಸಮಿತಿಗಳನ್ನು
ರಚಿಸಲಾಯಿತು.
No comments:
Post a Comment