FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday, 31 March 2015

29-03-2015
-->
ಶಿಕ್ಷಕರ ವೃತ್ತಿಗೆ ನಿವೃತ್ತಿಯೆಂಬುದಿಲ್ಲ. ಡಾ/ಹರಿಕೃಷ್ಣ ಭರಣ್ಯ.

ವಿದಾಯಕೂಟದ ಉದ್ಘಾಟನೆ ಮಾಡುತ್ತಿರುವುದು.
 ಹರಿಕೃಷ್ಣ ಭರಣ್ಯ ಇವರು ಉದ್ಘಾಟನಾ ಭಾಷಣ ಮಾಡುತ್ತಿರುವುದು.

-->
ಶಿಕ್ಷಕರು ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದರೂ ಮಕ್ಕಳೊಂದಿಗೆ ಬೆರೆತ ಅವರ ಮನಸ್ಸು, ಅನುಭವ ಸಂಪತ್ತು ಅವರನ್ನು ನಿರಂತರವಾಗಿ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಯಾವುದೇ ಸಾಮಾಜಿಕ ಸಮಾರಂಭಗಳಿರಲಿ ಅಲ್ಲಿ ಶಿಕ್ಷಕರು ಸಕ್ರಿಯರಾಗಿರುತ್ತಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಲು ಶಿಕ್ಷಕರಿಗೆ ಸಾಧ್ಯವಾಗುತ್ತದೆ. ಆದುದರಿಂದ ನಿವೃತ್ತಿಹೊಂದಿದ ಶಿಕ್ಷಕರೆಲ್ಲರೂ ಒಂದಲ್ಲ ಒಂದು ಸಮಾಜಸೇವಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಿವೃತ್ತಿಹೊಂದಲಿರುವ ಶಿಕ್ಷಕರೆಲ್ಲರನ್ನೂ ಒಟ್ಟುಗೂಡಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳುವುದು ಔಚಿತ್ಯಪೂರ್ಣವೂ ಆಗಿದೆ. ಎ೦ದು ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಕನ್ನಡದ ಮುಖ್ಯಸ್ಥರೂ ಆಗಿದ್ದ ಡಾ/ಹರಿಕೃಷ್ಣ ಭರಣ್ಯ ನುಡಿದರು. ಅವರು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲಿನಲ್ಲಿ ಏರ್ಪಡಿಸಿದ್ದ ವಿದಾಯ ಕೂಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ನಿವತ್ತಿಹೊಂದವ ಕನ್ನಡ ಶಿಕ್ಷಕರಿಗಾಗಿ ವಿದಾಯಕೂಟವು ನಡೆಯಿತು. ಜಿಲ್ಲಾಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್, ಹಿರಿಯ ಪ್ರಾಂಶುಪಾಲರಾದ ಬೇ.ಸಿ. ಗೋಪಾಲಕೃಷ್ಣ ಭಟ್, ಡಯಟ್ ಪ್ರಾಧ್ಯಾಪಿಕೆ ಜಲಜಾಕ್ಷಿ ನವಜೀವನ ಶಾಲೆಯ ಪ್ರಾಂಶುಪಾಲರಾದ ಎ೦.ನಾರಾಯಣ ಭಟ್ ಸಹಿತ ಐವತ್ತಮೂರು ಮಂದಿ ಇದರಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷ ಟಿ.ಡಿ. ಸದಾಶಿವ ರಾವ್ ವಹಿಸಿದ್ದರು. ಜಯದೇವ ಖಂಡಿಗೆ, ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ಶಂಕರನಾರಾಯಣ ಭಟ್, ಗೋವಿಂದ ಭಟ್ ಸುಮತಿ, ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆಯ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಪ್ರಾಸ್ತಾವನೆಗೈದರು. ಪ್ರಧಾನ ಕಾರ್ದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಕುಂಬಳೆ ಘಟಕಾಧ್ಯಕ್ಷ ರಾಜಾರಾಮ ಕೆ.ವಿ. ವಂದಿಸಿದರು. ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ನಿರೂಪಿಸಿದರು.
ಉದ್ಘಾಟನೆಯ ನಂತರ ನಿವೃತ್ತಿ ಹೊಂದಲಿರುವ ಎಲ್ಲಾ ಶಿಕ್ಷಕರಗೂ ಸಂಘಟನೆಯ ವತಿಯಿಂದ ಸ್ಮರಣಿಕೆ ಪ್ರದಾನ ನಡೆಯಿತು.


ಭಾಗವಹಿಸಿದ ಸಭಿಕರು



Monday, 23 March 2015


23-03-2015
ಕನ್ನಡಿಗರ ಸಂವಿಧಾನ ಬದ್ಧ ಹಕ್ಕನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ.
ಕನ್ನಡ ಅಧ್ಯಾಪಕ ಸಂಘ.
ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಪ್ರತಿಯೊಬ್ಬನಿಗೂ ತನ್ನ ಇಚ್ಚೆಯಂತೆ ಭಾಷೆ ಕಲಿಯುವ ಹಕ್ಕು ಇದೆ. ಕೇರಳದಲ್ಲಿ ಹುಟ್ಟಿ ಕೇರಳದಲ್ಲಿ ಬೆಳೆದು ಕೇರಳದಲ್ಲಿ ಶಿಕ್ಷಣಹೊಂದಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಕೇರಳೀಯರು ಬಹಳಷ್ಟು ಮಂದಿ ಇದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ.ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಯುವಂತೆ ಮಾಡಿ ಮಲಯಾಳ ಕಲಿಕೆಗೆ ಹಿಂದೇಟು ಹಾಕುವ ಮಲಯಾಳಿಗಳಿಗೆ ತಮ್ಮ ಉದ್ಯೋಗಕ್ಕೆ ಸಂಬಂಧಿಸಿ ಮಲಯಾಳ ಗೌಣವಾಗಿ ಬಿಡುತ್ತದೆ. ಅವರೆಲ್ಲರೂ ತಮ್ಮ ನೆಲದಲ್ಲಿ ತಮ್ಮ ಭಾಷೆಯನ್ನು ಅನಾಥವನ್ನಾಗಿ ಮಾಡುತ್ತಿದ್ದಾರೆ.ಇದರಿಂದ ಸೊರಗಿರುವ ಮಲಯಾಳವನ್ನು ಪುನರುತ್ಥಾನಗೊಳಿಸಲು ಮತ್ತು ದೇಶಿಯ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಮಲಯಾಳ ಕಡ್ಡಾಯಗೊಳಿಸುವ ಸರಕಾರದ ನಿಲುವು ಸ್ವಾಗತಾರ್ಹ. ಆದರೆ ಕಾಸರಗೋಡಿನ ಕನ್ನಡಿಗರು ಎಲ್ಲಿಂದಲೋ ಬಂದವರಲ್ಲ, ನಮ್ಮ ಹುಟ್ಟೂರು ಇದೇ ಆಗಿದೆ. ಇಲ್ಲಿ ನಮ್ಮ ಇಚ್ಛೆಯಂತೆ ಕನ್ನಡ ಭಾಷೆಯಲ್ಲಿ ಕಲಿಯುವ ಮತ್ತು ವ್ಯವಹರಿಸುವ ಹಕ್ಕು ಸಂವಿಧಾನಬದ್ಧವಾಗಿ ಇದೆ. ಇದು ಯಾರ ಕೊಡುಗೆಯೋ ಔದಾರ್ಯವೋ ಅಲ್ಲ. ಇದನ್ನು ಎಲ್ಲಾ ರಾಜಕೀಯ ನಾಯಕರು, ವಿವಿಧ ಸ್ತರದ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕು. ಕಾಸರಗೋಡು ಕನ್ನಡಿಗರಿಗೆ ಸಂವಿಧಾನ ಬಧ್ಧವಾಗಿ ಇರುವ ಸವಲತ್ತನ್ನು ಮೊಟಕುಗೊಳಿಸಲು ಯಾವತ್ತೂ ಸಾಧ್ಯವಿಲ್ಲ. ಇಂತಹ ಹುಚ್ಚು ಸಾಹಸಕ್ಕೆ ಸರಕಾರವೂ ಕೈಹಾಕದಿರಲಿ. ಇಲ್ಲಿರುವ ಕನ್ನಡಿಗರನ್ನು ರಾಜಕೀಯ ಅಸ್ತ್ರವಾಗಿ ಉಪಯೋಗಿಸುವ ರಾಜಕಾರಣಿಗಳು ದಯವಿಟ್ಟು ಸರಕಾರವು ಹೇಳಿಕೆ ನೀಡುವಾಗ ಕಾಸರಗೋಡಿನ ಬಗ್ಗೆ ಸಂವಿಧಾನ ಬದ್ಧ ಹಕ್ಕುಗಳ ಉಲ್ಲೇಖವನ್ನು ಮಾಡಲು ಸರಕಾರವನ್ನು ನೆನಪಿಸಬೇಕು ಮತ್ತು ಕನ್ನಡ ಜನಸಾಮಾನ್ಯರ ಗೊಂದಲವನ್ನು ನಿವಾರಿಸಬೇಕು.ಇತ್ತೀಚೆಗೆ ಕಾಸರಗೋಡಿನ ಸ್ಥಿತಿಗತಿಯ ಬಗ್ಗೆ ಸಮನ್ವಯ ಸಮಿತಿಯು ಕೇಂದ್ರ ಸರಕಾರವನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ವಿವರಣೆ ಕೇಳಿದ್ದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಕಾಸರಗೋಡಿನ ಎಲ್ಲಾ ಜಿಲ್ಲಾ ಉನ್ನತ ಉದ್ಯೋಗಸ್ಥರಿಗೂ ತಮ್ಮ ಕಛೇರಿಗಳಲ್ಲಿ ಕನ್ನಡ ವ್ಯವಹರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಮತ್ತು ಮಾಡಿದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಬೇಕು ಎ೦ದು ಲಿಖಿತವಾಗಿ ನೀಡಿದ್ದಾರೆ. ಇದನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನದ ಬಗ್ಗೆ ಎಲ್ಲ ವರ್ಗದ ಜನರೂ ತಿಳಿದಿರಬೇಕು. ಕಾಸರಗೋಡಿನ ಮಟ್ಟಿಗೆ ಕನ್ನಡ ಮತ್ತು ಮಲಯಾಳ ದೇಶೀಯ ಭಾಷೆ ಅವುಗಳನ್ನು ಕಲಿಯುವ ಮತ್ತು ಕಲಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಕೈಗೊಳ್ಳಲಿ ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಅಭಿಪ್ರಾಯಪಟ್ಟಿದೆ. ಸಂಘಟನೆಯ ಸದಸ್ಯೆಯಾಗಿದ್ದು ಅಲ್ಪಕಾಲ ಅಸೌಖ್ಯದಿಂದ ನಿಧನರಾದ ಜಿ.ಎಚ್.ಎಸ್.ಎಸ್. ಉಪ್ಪಳ ಶಾಲೆಯ ಶಿಕ್ಷಕಿ ಭಾರತಿಯವರ ಅಗಲುವಿಕೆಗೆಕೆ ಸಂಘಟನೆ ಸಂತಾಪ ವ್ಯಕ್ತಪಡಿಸಿದೆ.

Sunday, 22 March 2015

22-03-2015
ಕನ್ನಡ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಕನ್ನಡ ಉದ್ಯೋಗಸ್ಥರ ಸಂಯುಕ್ತ ಸಮಿತಿ 
 
ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಹಿತದೃಷ್ಟಿಯಿಂದ ಸರಕಾರವು ಕೆಲವು ವಿಶೇಷ ಸವಲತ್ತನ್ನು ನೀಡುತ್ತಿದೆ ಮಾತ್ರವಲ್ಲ, ಸಂವಿಧಾನ ಬದ್ಧ ಹಕ್ಕುಗಳನ್ನು ಸಂರಕ್ಷಿಸಲು ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟದಲ್ಲಿ ಸಮಿತಿ ರೂಪೀಕರಿಸಿದೆ. ಆದರೂ ಕಾಸರಗೋಡಿನ ಕನ್ನಡಿಗರು ಅವುಗಳಿಂದ ವಂಚಿತರಾಗತ್ತಿದ್ದಾರೆ. ಇವುಗಳಿಗೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಶಿಕ್ಷಣ ಇಲಾಖೆಯ ಕನ್ನಡ ಉದ್ಯೋಗಸ್ಥರು ಮತ್ತು ಕನ್ನಡ ಶಿಕ್ಷಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ.ಸರಕಾರದ ಆದೇಶಗಳನ್ನು ಕನ್ನಡ ಪ್ರದೇಶಗಳಲ್ಲಿ ಜ್ಯಾರಿಗೊಳಿಸುವ ಅಥವಾ ಸ್ಪಷ್ಟೀಕರಣ ಕೇಳುವ ಮೊದಲು ಕನಿಷ್ಠ ಮಂಜೇಶ್ವರ, ಕುಂಬಳೆ, ಕಾಸರಗೋಡು ಉಪಜಿಲ್ಲೆಯ ಜಿಲ್ಲಾ ಶಿಕ್ಷಣ ಕಛೇರಿ ಮತ್ತು ಕಂದಾಯ ಜಿಲ್ಲೆಯ ಕನ್ನಡ ಉದ್ಯೋಗಸ್ಥರು ಪರಸ್ಪರ ವಿಚಾರ ವಿನಿಮಯದ ಮೂಲಕ ಒಮ್ಮತಕ್ಕೆ ಬರುವುದು ಒಳ್ಳೆಯದು ಎ೦ದು ಜಿಲ್ಲೆಯ ಶಿಕ್ಷಣಾಧಿಕಾರಿ ಎನ್. ಸದಾಶಿವ ನಾಯಕ್ ಹೇಳಿದರು. ಅವರು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲಿನಲ್ಲಿ ನಡೆದ ಕನ್ನಡ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಕನ್ನಡ ಉದ್ಯೋಗಸ್ಥರ ಸಂಯುಕ್ತ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸದ್ರಿ ಸಭೆಯ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ,ವಿಶಾಲಾಕ್ಷ ಪುತ್ರಕಳ, ಶ್ರೀನಿವಾಸ ರಾವ್ ಬಾಕ್ರಬೈಲು, ಅಶೋಕ್ ಕೊಡ್ಲಮೊಗರು, ಕೃಷ್ಣೋಜಿರಾವ್, ಪ್ರಭಾವತಿ ಪುಂಡೂರು ಮೊದಲಾದವರು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಕುಂಬಳೆ ಘಟಕಾಧ್ಯಕ್ಷ ರಾಜಾರಾಮ ಕೆ.ವಿ. ವಂದಿಸಿದರು. ಇಪ್ಪತ್ತೆರಡು ಸದಸ್ಯರನ್ನು ಒಳಗೊಂಡ ಸಂಯಕ್ತ ಸಮಿತಿಯಲ್ಲಿ ಅರವಿಂದ ಕುಮಾರ್ ಎನ್.ಕೆ. ಅಧ್ಯಕ್ಷರಾಗಿ, ಶ್ರೀನಿವಾಸರಾವ್ ಉಪಾಧ್ಯಕ್ಷರಾಗಿ ಮತ್ತು ಮಹಾಲಿಂಗೇಶ್ವರ ಭಟ್ ಎ೦.ವಿ. ಸಂಚಾಲಕರಾಗಿ ಆಯ್ಕೆಯಾದರು.
ಅನಂತರ ಸಂಘಟನೆಯ ವತಿಯಿಂದ ನಡೆಯಲಿರುವ ವಿದಾಯಕೂಟದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರೂಪಿಸಲಾಯಿತು ದಿನಾಂಕ 29-03-2015 ನೇ ರವಿವಾರ ವಿದಾಯ ಕೂಟ ನಡೆಯಲಿದೆ.


 

Friday, 20 March 2015

        ಯು.ಎಸ್.ಎಸ್ ಮಾದರಿ ಪ್ರಶ್ನೆಪತ್ರಿಕೆ ಮತ್ತು  
        ಮೌಲ್ಯಮಾಪನ ಸೂಚಕಗಳನ್ನು ಕೆಳಗಿನ ಲಿಂಕ್‌ನಿಂದ ಇಳಿಸಿರಿ
 
ಯು.ಎಸ್.ಎಸ್ ಪರೀಕ್ಷೆ - ಭಾಗ 1
ಯು.ಎಸ್.ಎಸ್ ಪರೀಕ್ಷೆ - ಭಾಗ 2


         ಮೌಲ್ಯಮಾಪನ ಸೂಚಕಗಳು
     
ಸೂಚಕ  - ಭಾಗ 1      
ಸೂಚಕ  - ಭಾಗ 2

Sunday, 8 March 2015


08-03-2015
ಹೊರರಾಜ್ಯ ಕನ್ನಡ ವಿದ್ಯಾರ್ಥಿ ಪ್ರಶಸ್ತಿ 
ದಿನಾಂಕ ೦೮.೦೩.೨೦೧೫ ಭಾನುವಾರ ಪೂರ್ವ ನಿಗದಿಯಾದಂತೆ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಹೊರರಾಜ್ಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆಸ್ವತಃ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಧಿಕಾರದ ಅಧ್ಯಕ್ಷರಾದ ಡಾ/ಎಲ್.ಹನುಮಂತಯ್ಯ ಇವರಿಗೆ ನಮ್ಮ ಸಂಘಟನೆಯ ಪರವಾಗಿ ಧನ್ಯವಾದಗಳು. ಕಾರ್ಯಕ್ರಮವನ್ನು ಅಚ್ಚುಗಟ್ಟಾಗಿ ನಿರ್ವಹಿಸಿದ ಕಾರ್ಯದರ್ಶಿ ಡಾ/ಮುರಳಿಧರ ಮತ್ತು ಇದರ ಯಶಸ್ಸಿಗೆ ಶ್ರಮಿಸಿದ ಕಛೇರಿಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಈ ಮೂಲಕ ಕೃತಜ್ಞತೆ ಅರ್ಪಿಸುತ್ತಿದ್ದೇವೆ.

ವಿಷಯಃ ಹೊರರಾಜ್ಯ ಕನ್ನಡ ವಿದ್ಯಾರ್ಥಿ ಪ್ರಶಸ್ತಿ- ಕೃತಜ್ಞತಾ ಪತ್ರ.
ದಿನಾಂಕ ೦೮.೦೩.೨೦೧೫ ಭಾನುವಾರ ಪೂರ್ವ ನಿಗದಿಯಾದಂತೆ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಹೊರರಾಜ್ಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ಸಿಗೆ ಸಹಕರಿಸಿದ ಮುಖ್ಯಶಿಕ್ಷಕರಿಗೆ ನಮ್ಮ ಸಂಘಟನೆಯ ಪರವಾಗಿ ಧನ್ಯವಾದಗಳು. ಇದಕ್ಕೆ ಸಹಕರಿಸಿದ ಶಿಕ್ಷಕ ವೃಂದಕ್ಕೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಈ ಮೂಲಕ ಕೃತಜ್ಞತೆ ಅರ್ಪಿಸುತ್ತಿದ್ದೇವೆ.