FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday, 31 March 2015

29-03-2015
-->
ಶಿಕ್ಷಕರ ವೃತ್ತಿಗೆ ನಿವೃತ್ತಿಯೆಂಬುದಿಲ್ಲ. ಡಾ/ಹರಿಕೃಷ್ಣ ಭರಣ್ಯ.

ವಿದಾಯಕೂಟದ ಉದ್ಘಾಟನೆ ಮಾಡುತ್ತಿರುವುದು.
 ಹರಿಕೃಷ್ಣ ಭರಣ್ಯ ಇವರು ಉದ್ಘಾಟನಾ ಭಾಷಣ ಮಾಡುತ್ತಿರುವುದು.

-->
ಶಿಕ್ಷಕರು ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದರೂ ಮಕ್ಕಳೊಂದಿಗೆ ಬೆರೆತ ಅವರ ಮನಸ್ಸು, ಅನುಭವ ಸಂಪತ್ತು ಅವರನ್ನು ನಿರಂತರವಾಗಿ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಯಾವುದೇ ಸಾಮಾಜಿಕ ಸಮಾರಂಭಗಳಿರಲಿ ಅಲ್ಲಿ ಶಿಕ್ಷಕರು ಸಕ್ರಿಯರಾಗಿರುತ್ತಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಲು ಶಿಕ್ಷಕರಿಗೆ ಸಾಧ್ಯವಾಗುತ್ತದೆ. ಆದುದರಿಂದ ನಿವೃತ್ತಿಹೊಂದಿದ ಶಿಕ್ಷಕರೆಲ್ಲರೂ ಒಂದಲ್ಲ ಒಂದು ಸಮಾಜಸೇವಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಿವೃತ್ತಿಹೊಂದಲಿರುವ ಶಿಕ್ಷಕರೆಲ್ಲರನ್ನೂ ಒಟ್ಟುಗೂಡಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳುವುದು ಔಚಿತ್ಯಪೂರ್ಣವೂ ಆಗಿದೆ. ಎ೦ದು ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಕನ್ನಡದ ಮುಖ್ಯಸ್ಥರೂ ಆಗಿದ್ದ ಡಾ/ಹರಿಕೃಷ್ಣ ಭರಣ್ಯ ನುಡಿದರು. ಅವರು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲಿನಲ್ಲಿ ಏರ್ಪಡಿಸಿದ್ದ ವಿದಾಯ ಕೂಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ನಿವತ್ತಿಹೊಂದವ ಕನ್ನಡ ಶಿಕ್ಷಕರಿಗಾಗಿ ವಿದಾಯಕೂಟವು ನಡೆಯಿತು. ಜಿಲ್ಲಾಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್, ಹಿರಿಯ ಪ್ರಾಂಶುಪಾಲರಾದ ಬೇ.ಸಿ. ಗೋಪಾಲಕೃಷ್ಣ ಭಟ್, ಡಯಟ್ ಪ್ರಾಧ್ಯಾಪಿಕೆ ಜಲಜಾಕ್ಷಿ ನವಜೀವನ ಶಾಲೆಯ ಪ್ರಾಂಶುಪಾಲರಾದ ಎ೦.ನಾರಾಯಣ ಭಟ್ ಸಹಿತ ಐವತ್ತಮೂರು ಮಂದಿ ಇದರಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷ ಟಿ.ಡಿ. ಸದಾಶಿವ ರಾವ್ ವಹಿಸಿದ್ದರು. ಜಯದೇವ ಖಂಡಿಗೆ, ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ಶಂಕರನಾರಾಯಣ ಭಟ್, ಗೋವಿಂದ ಭಟ್ ಸುಮತಿ, ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆಯ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಪ್ರಾಸ್ತಾವನೆಗೈದರು. ಪ್ರಧಾನ ಕಾರ್ದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಕುಂಬಳೆ ಘಟಕಾಧ್ಯಕ್ಷ ರಾಜಾರಾಮ ಕೆ.ವಿ. ವಂದಿಸಿದರು. ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ನಿರೂಪಿಸಿದರು.
ಉದ್ಘಾಟನೆಯ ನಂತರ ನಿವೃತ್ತಿ ಹೊಂದಲಿರುವ ಎಲ್ಲಾ ಶಿಕ್ಷಕರಗೂ ಸಂಘಟನೆಯ ವತಿಯಿಂದ ಸ್ಮರಣಿಕೆ ಪ್ರದಾನ ನಡೆಯಿತು.


ಭಾಗವಹಿಸಿದ ಸಭಿಕರು



No comments:

Post a Comment