22-03-2015
ಕನ್ನಡ
ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ
ಕನ್ನಡ ಉದ್ಯೋಗಸ್ಥರ ಸಂಯುಕ್ತ
ಸಮಿತಿ
ಭಾಷಾ
ಅಲ್ಪಸಂಖ್ಯಾತ ಪ್ರದೇಶವಾದ
ಕಾಸರಗೋಡಿನ ಹಿತದೃಷ್ಟಿಯಿಂದ
ಸರಕಾರವು ಕೆಲವು ವಿಶೇಷ ಸವಲತ್ತನ್ನು
ನೀಡುತ್ತಿದೆ ಮಾತ್ರವಲ್ಲ,
ಸಂವಿಧಾನ ಬದ್ಧ
ಹಕ್ಕುಗಳನ್ನು ಸಂರಕ್ಷಿಸಲು
ರಾಜ್ಯಮಟ್ಟದಲ್ಲಿ ಮತ್ತು
ಜಿಲ್ಲಾಮಟ್ಟದಲ್ಲಿ ಸಮಿತಿ
ರೂಪೀಕರಿಸಿದೆ.
ಆದರೂ ಕಾಸರಗೋಡಿನ
ಕನ್ನಡಿಗರು ಅವುಗಳಿಂದ
ವಂಚಿತರಾಗತ್ತಿದ್ದಾರೆ.
ಇವುಗಳಿಗೆ
ಪರಿಣಾಮಕಾರಿ ಯೋಜನೆಗಳನ್ನು
ರೂಪಿಸುವುದು ಅನಿವಾರ್ಯವಾಗಿದೆ.
ಅದಕ್ಕಾಗಿ ಶಿಕ್ಷಣ
ಇಲಾಖೆಯ ಕನ್ನಡ ಉದ್ಯೋಗಸ್ಥರು
ಮತ್ತು ಕನ್ನಡ ಶಿಕ್ಷಕರು ಒಗ್ಗಟ್ಟಿನಿಂದ
ಕಾರ್ಯ ನಿರ್ವಹಿಸಬೇಕಾದ
ಅನಿವಾರ್ಯತೆಯಿದೆ.ಸರಕಾರದ
ಆದೇಶಗಳನ್ನು ಕನ್ನಡ ಪ್ರದೇಶಗಳಲ್ಲಿ
ಜ್ಯಾರಿಗೊಳಿಸುವ ಅಥವಾ ಸ್ಪಷ್ಟೀಕರಣ
ಕೇಳುವ ಮೊದಲು ಕನಿಷ್ಠ ಮಂಜೇಶ್ವರ,
ಕುಂಬಳೆ,
ಕಾಸರಗೋಡು
ಉಪಜಿಲ್ಲೆಯ ಜಿಲ್ಲಾ ಶಿಕ್ಷಣ
ಕಛೇರಿ ಮತ್ತು ಕಂದಾಯ ಜಿಲ್ಲೆಯ
ಕನ್ನಡ ಉದ್ಯೋಗಸ್ಥರು ಪರಸ್ಪರ
ವಿಚಾರ ವಿನಿಮಯದ ಮೂಲಕ ಒಮ್ಮತಕ್ಕೆ
ಬರುವುದು ಒಳ್ಳೆಯದು ಎ೦ದು ಜಿಲ್ಲೆಯ
ಶಿಕ್ಷಣಾಧಿಕಾರಿ ಎನ್.
ಸದಾಶಿವ ನಾಯಕ್
ಹೇಳಿದರು. ಅವರು
ಮಹಾಜನ ಸಂಸ್ಕೃತ ಕಾಲೇಜು ಹೈಯರ್
ಸೆಕಂಡರಿ ಶಾಲೆ ನೀರ್ಚಾಲಿನಲ್ಲಿ
ನಡೆದ ಕನ್ನಡ
ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ
ಕನ್ನಡ ಉದ್ಯೋಗಸ್ಥರ ಸಂಯುಕ್ತ
ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸದ್ರಿ
ಸಭೆಯ ಅಧ್ಯಕ್ಷತೆಯನ್ನು ಕೇರಳ
ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ
ಸಂಘದ ಕೇಂದ್ರಾಧ್ಯಕ್ಷರಾದ
ಟಿ.ಡಿ.ಸದಾಶಿವ
ರಾವ್ ವಹಿಸಿದ್ದರು.
ಮಂಜೇಶ್ವರ
ಉಪಜಿಲ್ಲಾ ಶಿಕ್ಷಣಾಧಿಕಾರಿ
ನಂದಿಕೇಶನ್,
ಕುಂಬಳೆ
ಉಪಜಿಲ್ಲಾ ಶಿಕ್ಷಣಾಧಿಕಾರಿ
ಕೈಲಾಸ ಮೂರ್ತಿ,
,ವಿಶಾಲಾಕ್ಷ
ಪುತ್ರಕಳ,
ಶ್ರೀನಿವಾಸ
ರಾವ್ ಬಾಕ್ರಬೈಲು,
ಅಶೋಕ್
ಕೊಡ್ಲಮೊಗರು,
ಕೃಷ್ಣೋಜಿರಾವ್,
ಪ್ರಭಾವತಿ
ಪುಂಡೂರು ಮೊದಲಾದವರು ಮಾತನಾಡಿದರು.
ಪ್ರಧಾನ
ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್
ಕೆ ಸ್ವಾಗತಿಸಿ,
ಕುಂಬಳೆ
ಘಟಕಾಧ್ಯಕ್ಷ ರಾಜಾರಾಮ ಕೆ.ವಿ.
ವಂದಿಸಿದರು.
ಇಪ್ಪತ್ತೆರಡು
ಸದಸ್ಯರನ್ನು ಒಳಗೊಂಡ ಸಂಯಕ್ತ
ಸಮಿತಿಯಲ್ಲಿ ಅರವಿಂದ ಕುಮಾರ್
ಎನ್.ಕೆ.
ಅಧ್ಯಕ್ಷರಾಗಿ,
ಶ್ರೀನಿವಾಸರಾವ್
ಉಪಾಧ್ಯಕ್ಷರಾಗಿ ಮತ್ತು ಮಹಾಲಿಂಗೇಶ್ವರ
ಭಟ್ ಎ೦.ವಿ.
ಸಂಚಾಲಕರಾಗಿ
ಆಯ್ಕೆಯಾದರು.
ಅನಂತರ
ಸಂಘಟನೆಯ ವತಿಯಿಂದ ನಡೆಯಲಿರುವ
ವಿದಾಯಕೂಟದ ಯಶಸ್ಸಿಗೆ ವಿವಿಧ
ಸಮಿತಿಗಳನ್ನು ರೂಪಿಸಲಾಯಿತು
ದಿನಾಂಕ 29-03-2015
ನೇ ರವಿವಾರ
ವಿದಾಯ ಕೂಟ ನಡೆಯಲಿದೆ.
No comments:
Post a Comment