FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday, 18 August 2014


          ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಉಪಜಿಲ್ಲಾ ಮಹಾ ಸಭೆಗಳು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಂಜೇಶ್ವರ ಮತ್ತು ಕುಂಬಳೆ ಉಪಜಿಲ್ಲಾ ಘಟಕಗಳ ಮಹಾ ಸಭೆಗಳು ಇದೇ ಬರುವ ಅಗೋಸ್ತು 24 ರವಿವಾರ ದಂದು ನಡೆಯಲಿದೆ. ಜಿ.ಎಚ್.ಎಸ್.ಎಸ್.ಪೈವಳಿಕೆ ನಗರದಲ್ಲಿ ನಡೆಯುವ ಮಂಜೇಶ್ವರ ಘಟಕದ ಮಹಾಸಭೆಯಲ್ಲಿ ಅಡ್ವ. ಥೋಮಸ್ ಡಿ'ಸೋಜಾ ಕನ್ನಡದ ಧುರೀಣರು ಮುಖ್ಯ ಅತಿಥಿಯಾಗಿರುವರು. ಉಪಜಿಲ್ಲಾ ಶಿಕ್ಷಣಾಧಿಕಾರಿ ಎನ್ .ನಂದಿಕೇಶನ್, ಸಂಘಟನೆಯ ಗೌರವಾಧ್ಯಕ್ಷರಾದ ಎನ್.ಕೆ.ಮೋಹನ್ ದಾಸ್, ಉಪಾಧ್ಯಕ್ಷರಾದ ಸತ್ಯನಾರಾಯಣ ರಾವ್ ಕೆ.ವಿ, ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ ಮತ್ತು ಘಟಕದ ಅಧ್ಯಕ್ಷ ಶ್ರೀನಿವಾಸ ರಾವ್ ಉಪಸ್ಥಿತರಿರುವರು. ಜಿ.ವಿ.ಎಚ್.ಎಸ್.ಎಸ್.ಮುಳ್ಳೇರಿಯಾದಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಮಹಾಸಭೆಯಲ್ಲಿ ಪಿ.ರಾಜಗೋಪಾಲ ಪುಣಿಂಚತ್ತಾಯ,ನಿವೃತ್ತ ಸಂಸ್ಕೃತ ಅಧ್ಯಾಪಕರು ಮುಖ್ಯ ಅತಿಥಿಗಳಾಗಿರುವರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್ , ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ,ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಮತ್ತು ಘಟಕದ ಅಧ್ಯಕ್ಷ ರಾಜಾರಾಮ ಕೆ.ವಿ. ಉಪಸ್ಥಿತರಿರುವರು.
ಕಾಸರಗೋಡಿನಲ್ಲಿ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು, ಕನ್ನಡವನ್ನು ಬೆಳೆಸಲು ನಾವು ಜಾಗೃತರಾಗಬೇಕಾಗಿದೆ.ಇದಕ್ಕಾಗಿ ಉಪಜಿಲ್ಲಾ ಘಟಕಗಳು ಇನ್ನಷ್ಟು ಕ್ರಿಯಾತ್ಮಕವಾಗಬೇಕಾಗಿದೆ. ಆದುದರಿಂದ ನಡೆಯಲಿರುವ ಉಪಜಿಲ್ಲಾ ಮಹಾಸಭೆಗಳಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಂಡು ಅಮೂಲ್ಯವಾದ ಸಲಹೆ ಸೂಚನೆಗಳನ್ನಿತ್ತು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತಿದ್ದೇವೆ.

                                                             ಅಧ್ಯಕ್ಷರು ಮತ್ತು ಸದಸ್ಯರು
                                                                   ಕೇಂದ್ರ ಸಮಿತಿ
                                                 ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ


No comments:

Post a Comment