ದಿನಾಂಕಃ 21-08-2014.
ಉದುಮದಲ್ಲಿ
ಹೊಸದಾಗಿ ಆರಂಭಗೊಳ್ಳಲಿರುವ
ಸರಕಾರಿ ಕಾಲೇಜಿನಲ್ಲಿ ಕನ್ನಡ
ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಗೆ
ಅವಕಾಶ ಕಲ್ಪಿಸಬೇಕು -
ಕನ್ನಡ
ಅಧ್ಯಾಪಕ ಸಂಘ.
ಭಾಷಾ ಅಲ್ಪಸಂಖ್ಯಾತ ಶಾಲೆಗಳ ಆದಾಯಕರವಲ್ಲದ ವಿಷಯದಲ್ಲಿ ಕೇರಳ ಸರಕಾರವು ಸಂಘಟನೆಯ ಪ್ರಯತ್ನದ ಫಲವಾಗಿ
ಹೊಸದಾಗಿ ಆದೇಶವೊಂದನ್ನು ಹೊರಡಿಸಿ
ಅಧ್ಯಾಕಪ ಹುದ್ದೆಯನ್ನು ಉಳಿಸುವ
ಪ್ರಯತ್ನ ಮಾಡಿದೆ.
ಇದಕ್ಕಾಗಿ
ಸಂಘಟನೆ ಸರಕಾರವನ್ನು ಅಭಿನಂದನೆಗೈದಿದೆ.
ಮೂರು
ವರ್ಷಗಳಿಂದ ಕೇರಳ ಪ್ರಾಂತ್ಯ
ಕನ್ನಡ ಮಾಧ್ಯಮ ಅಧ್ಯಾಪಕ ಸಂಘ
ಇದಕ್ಕಾಗಿ ಸರಕಾರವನ್ನು ನಿರಂತರ
ಸಂಪರ್ಕಿಸಿತ್ತು.
ಉದುಮದಲ್ಲಿ
ಹೊಸದಾಗಿ ಆರಂಭಗೊಳ್ಳುವ ಸರಕಾರಿ
ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ
ಕನ್ನಡ ಭಾಷೆಯನ್ನು ಕಲಿಯುವ
ಅವಕಾಶವನ್ನು ಮಾಡಬೇಕೆಂದು ಕೇರಳ
ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ
ಸಂಘ ಸರಕಾರವನ್ನು ಒತ್ತಾಯಿಸಿದೆ.
ಆ
ಕಾಲೇಜಿನ ಆಸುಪಾಸಿನಲ್ಲಿ ಅನೇಕ
ಕನ್ನಡಿಗರು ವಾಸಿಸುತ್ತಿದ್ದು
ಅವರಿಗೆ ಕನ್ನಡ ಕಲಿಯಲು ಇದು
ವರದಾನವಾಗಿದೆ ಎ೦ದು ಸಂಘಟನೆ
ಅಭಿಪ್ರಾಯಪಟ್ಟಿದೆ.
ಕಾಸರಗೋಡು
ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ
ಪ್ರದೇಶಗಳಲ್ಲಿ ಹೊಸದಾಗಿ
ಪ್ರಾರಂಭಗೊಳ್ಳಲಿರುವ ಎಲ್ಲಾ
ಹೈಯರ್ ಸೆಕಂಡರಿಗಳಲ್ಲಿ ಕನ್ನಡ
ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ
ಕಲಿಯಲು ಅವಕಾಶವಿರ ಬೇಕು ಮತ್ತು
ಇದಕ್ಕಾಗಿ ಬೇಕಾದ ಆದೇಶವನ್ನು
ಈ ಕೂಡಲೇಹೊರಡಿಸ ಬೇಕೆಂದು ಸಂಘಟನೆ
ಅಧಿಕೃತರನ್ನು ಒತ್ತಾಯಿಸಿದೆ.
ಎನ್.ಎಚ್.ಎಸ್.ಎಸ್.ಪೆರಡಾದಲ್ಲಿ
ನಡೆದ ಕುಂಬಳೆ ಉಪಜಿಲ್ಲಾ ಘಟಕದ
ಕಾರ್ಯಕಾರಿ ಸಭೆಯ ಅಧ್ಯಕ್ಷತೆಯನ್ನು
ಘಟಕದ ಅಧ್ಯಕ್ಷರಾದ ರಾಜಾರಾಮ
ಕೆ.ವಿ.ವಹಿಸಿದ್ದರು.
ಕೇಂದ್ರಸಮಿತಿ
ಉಪಾಧ್ಯಕ್ಷರಾದ ಮಹಾಲಿಂಗೇಶ್ವರ
ಭಟ್ ಎ೦.ವಿ.
ಪ್ರಧಾನ
ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್
ಕೆ ಮತ್ತು ಪ್ರಭಾವತಿ ಕೆದಿಲ್ಲಾಯ
ಪುಂಡೂರು ಉಪಸ್ಥಿತರಿದ್ದರು.
ಘಟಕದ
ಕಾರ್ಯದರ್ಶಿ ಪುರುಷೋತ್ತಮ ಕುಲಾಲ್
ಸ್ವಾಗತಿಸಿ , ಖಜಾಂಜಿ
ಅಬ್ದುಲ್ ರಹಿಮಾನ್ ವಂದಿಸಿದರು.
This comment has been removed by the author.
ReplyDeleteಹೊಸತಾಗಿ ಆರಂಭವಾದ ಹೈಯರ್ ಸೆಕಂಡರಿ ಶಾಲೆಗಳಲ್ಲಿ ಅಲ್ಪ ಸಂಖ್ಯಾತ ಪ್ರದೇಶಗಳಲ್ಲಿ ದ್ವಿತೀಯ ಭಾಷೆಯಾಗಿ ಮಲಯಾಳದ ಬದಲಿಗೆ ಕನ್ನಡ ಭಾಷೆಯನ್ನೂ ಹಿಂದಿಯ ಬದಲಿಗೆ ಅರೇಬಿಕ್ ಭಾಷೆಯನ್ನೂ ಕಲಿಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.ಹೊಸ ಆದೇಶಗಳು ಮತ್ತು ಸುತ್ತೋಲೆಗಳು ತಕ್ಷಣ ದೊರೆಯಲು ನನ್ನನ್ನು ಕ್ಲಿಕ್ಕಿಸಿ http://www.shenischool.in/
ReplyDelete