FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 22 August 2014


-->
23-08-2014
ಕನ್ನಡದ ಶ್ರೇಷ್ಠ ಸಾಹಿತಿ ಯು.ಆರ್ ಅನಂತಮೂರ್ತಿಯವರ ನಿಧನಕ್ಕೆ ಕನ್ನಡ ಅಧ್ಯಾಪಕ ಸಂಘಟನೆಯ ವತಿಯಿಂದ ಸಂತಾಪ
ಸಾಹಿತ್ಯ ಸಮಾಜದ ಕೈಗನ್ನಡಿ ವರ್ತಮಾನ ಕಾಲದ ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ಅದ್ಭುತ ಬರವಣಿಯ ಮೂಲಕ ಜನರಿಗೆ ಮನಮುಟ್ಟುವಂತೆ ಮಾಡುತ್ದಿದ್ದ ಹಿರಿಯ ಸಾಹಿತಿ ಯು.ಆರ್ ಅನಂತಮೂರ್ತಿಯವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಾಹಿತಿ ಮಾತ್ರವಲ್ಲದೆ ಉತ್ತಮ ಪ್ರಜಾಪ್ರಭುತ್ವ ನಾಯಕತ್ವಗುಣವನ್ನೂ ಹೊಂದಿದ್ದರು. ಕೇರಳದ ಕೊಟ್ಟಾಯಂ ನ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಕೇರಳೀಯರ ಮನಗೆದ್ದ ಶ್ರೀಯುತರು ಉಭಯ ರಾಜ್ಯಗಳ ಸಂ ವೇದನಾ ಕೊಂಡಿಯೆನಿಸಿದ್ದರು. ಅವರು ಬದುಕಿ ಬಂದ ಹಾದಿ ವಿಚಾರಧಾರೆ ಮತ್ತು ವಿಮರ್ಶಾತ್ಮಕ ಚಿಂತನೆಗಳು ಇಂದಿನ ಜನಾಂಗಕ್ಕೆ ಮಾರ್ಗದರ್ಶಿಯಾಗಿದೆ. ಅಮರ ಆತ್ಮಕ್ಕೆ ಸದ್ಗತಿ ಮತ್ತು ಅಗಲಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎ೦ದು ಸಂಘಟನೆ ಪ್ರಾರ್ಥಿಸುತ್ತಿದೆ.

No comments:

Post a Comment