24-08-2014
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲೆಯ ಮಹಾಸಭೆ.
ಕುಂಬಳೆ ಘಟಕದ ಮಹಾಸಭೆಯನ್ನು ಶ್ರೀ ರಾಜಗೋಪಾಲ ಪುಣಿಂಚತ್ತಾಯ ನಿವೃತ್ತ ಸಂಸ್ಕೃತಅಧ್ಯಾಪಕರು ಉದ್ಘಾಟಿಸಿದರು.
ಕಾಸರಗೋಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನವರತ ಹೋರಾಡುವ ಕನ್ನಡ ಅಧ್ಯಾಪಕ ಸಂಘದ ಪ್ರಯತ್ನಕ್ಕೆ ಸಮಾಜದ ಎಲ್ಲಾ ಕಡೆಯಿಂದಲೂ ಮನ್ನಣೆ ಸಿಗಲಿ
ಕಾಸರಗೋಡು
ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನವರತ ಹೋರಾಡುವ ಕನ್ನಡ ಅಧ್ಯಾಪಕ
ಸಂಘದ ಪ್ರಯತ್ನಕ್ಕೆ ಸಮಾಜದ ಎಲ್ಲಾ ಕಡೆಯಿಂದಲೂ ಮನ್ನಣೆ ಸಿಗಲಿ,ಎಲ್ಲಾ ಅಧ್ಯಾಪಕರೂ ಈ ಸಂಘಟನೆಗೆ ಬೆನ್ನೆಲುಬಾಗಿ ನಿಂತು ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವಂತಹ ಪ್ರಧಾನ ಸಂಘಟನೆಯಾಗಿ ಬೆಳಗುವಂತೆ ಮಾಡಿರಿ ಎಂದು ಶ್ರೀ ರಾಜಗೋಪಾಲ ಪುಣಿಂಚತ್ತಾಯ ನಿವೃತ್ತ ಸಂಸ್ಕೃತ ಅಧ್ಯಾಪಕರು ನುಡಿದರು ಅವರು ಜಿ.ವಿ.ಎಚ್.ಎಸ್.ಎಸ್.ನಲ್ಲಿ ಜರಗಿದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಮಹಾ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. ಮಹಾಸಭೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಾಜಾರಾಮ ಕೆ.ವಿ. ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಕೆ.ವಿ. ಸತ್ಯನಾರಾಯಣ ರಾವ್, ಮಹಾಲಿಂಗೇಶ್ವರ ಭಟ್ ಎಂ.ವಿ. , ಶಾಲಾ ಪ್ರಾಂಶುಪಾಲರಾದ ವಿಷ್ಣು ಭಟ್ ಮತ್ತ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಉಪಸ್ಥಿತರಿದ್ದರು.ಸಂಘಟನೆಯ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ಸ್ವಾಗತಿಸಿಕೇಂದ್ರ ಸಮಿತಿ ಸದಸ್ಯರಾದ ಗುರುಪ್ರಸಾದ್ ರೈ ವಂದಿಸಿದರು ಖಜಾಂಜಿ ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು.ಜ್ಯೋತ್ಸ್ನಾ ಕಡಂದೇಲು ಪ್ರಾರ್ಥನೆ ಹಾಡಿದರು.
ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿಗೊಂಡ ಶ್ರೀ ಎನ್ ಸದಾಶಿವ ನಾಯಕ್ ರವರನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಗೌರವಿಸಲಾಯಿತು ಹಿರಿಯ ಸಂಸ್ಕೃತ ಅಧ್ಯಾಪಕರಾದ ಶ್ರೀ ರಾಜಗೋಪಾಲ ಪುಣಿಂಚತ್ತಾಯರವರು ಸನ್ಮಾನಿಸಿದರು.
ಸಂಘಟನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜಾರಾಮ ಕೆ.ವಿ ತಮ್ಮ ಅಧಿಕಾರ ಸ್ವೀಕರಿಸಿ ಮಾತನಾಡಿದರು.ಉಪಾಧ್ಯಕ್ಷರುಗಳಾಗಿ ಗುರುಪ್ರಸಾದ್ ರೈ ಮತ್ತು ರಾಜೇಶ್ ಎಸ್ ,ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಎ, ಜೊತೆ ಕಾರ್ಯದರ್ಶಿಗಳಾಗಿ ಜ್ಯೋತಿಕುಮಾರಿ ಮತ್ತು ಕಿರಣ ಶಂಕರ ಕೆ , ಖಜಾಂಜಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ ಆಯ್ಕೆಯಾದರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲೆಯ ಮಹಾಸಭೆ
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಮಹಾಸಭೆಯನ್ನು ಶ್ರೀ ಕೋಚಣ್ಣ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಉದ್ಘಾಟಿಸಿದರು.
ಕೇರಳ
ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ
ಸಂಘದ ಮಂಜೇಶ್ವರ ಉಪಜಿಲ್ಲಾ
ಮಹಾಸಭೆಯು ಜಿ.
ಎಚ್.
ಎಸ್.
ಎಸ್.
ಪೈವಳಿಕೆ
ನಗರದಲ್ಲಿ ಆಗಸ್ಟ್ 24ರಂದು
ಜರಗಿತು.
ಎ.ಯು.ಪಿ.
ಶಾಲೆ
ಕುರುಡಪದವಿನ ನಿವೃತ್ತ ಮುಖ್ಯೋಪಾಧ್ಯಾಯರಾದ
ಶ್ರೀ ಕೋಚಣ್ಣ ಶೆಟ್ಟಿ ಸಭೆಯನ್ನು
ಉಧ್ಘಾಟಿಸಿ,
ಕನ್ನಡ
ಮಾಧ್ಯಮ ಅಧ್ಯಾಪಕ ಸಂಘವು ಒಂದು
ಹೆಮ್ಮರದಂತಿದ್ದು ಇದರ ಬೇರುಗಳು
ಎಲ್ಲೆಡೆ ಹರಡಿ ನೀರನ್ನು ಹೀರುವಂತೆ
ಎಲ್ಲರನ್ನೂ ಸಂಘಟಿಸಿ ಬೆಳೆಯಲೆಂದು
ಹಾರೈಸಿದರು.
ಸಂಘಟನೆಯ
ಉಪಜಿಲ್ಲಾ ಅಧ್ಯಕ್ಷ ಶ್ರೀ ಶ್ರೀನಿವಾಸ
ರಾವ್ ಸಭಾಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ
ನಂದಿಕೇಶನ್ ಅವರನ್ನು ಈ ಸಂದರ್ಭದಲ್ಲಿ
ಗೌರವಿಸಿ ಪದೋನ್ನತಿ ಪಡೆದುದಕ್ಕೆ
ಅಭಿನಂದಿಸಲಾಯಿತು.
ಸಂಘದ
ಕೆಂದ್ರ ಸಮಿತಿಯ ಅಧಿಕೃತ ವಕ್ತಾರ
ಶ್ರೀ ವಿಶಾಲಾಕ್ಷ ಪುತ್ರಕಳ
ಪ್ರಾಸ್ತಾವಿಕ ಭಾಷಣ ಗೈದರು.
ಕೇಂದ್ರ
ಸಮಿತಿ ಅಧ್ಯಕ್ಷರಾದ ಶ್ರೀ ಟಿ.
ಡಿ.
ಸದಾಶಿವ
ರಾವ್,ಗೌರವಾಧ್ಯಕ್ಷ
ಶ್ರೀ ರಾಘವ ಬಲ್ಲಾಳ್ ,
ಶ್ರೀ
ವಿಶ್ವನಾಥ್ ಕೆ,ಶ್ರೀಮತಿ
ಪದ್ಮಾವತಿ,
ಜಿಲ್ಲಾಪಂಚಾಯತು
ಸದಸ್ಯ ಶ್ರೀ ಶಂಕರ ರೈ ಮಾಸ್ತರ್,
ಶ್ರೀ
ಶ್ರೀಕಾಂತ್ ಮುಂತಾದವರು
ಉಪಸ್ಥಿತರಿದ್ದರು.
ಉಪಜಿಲ್ಲಾ
ಕಾರ್ಯದರ್ಶಿ ಶ್ರೀ ಜಬ್ಬಾರ್
ಸ್ವಾಗತಿಸಿದರು. ಶ್ರೀ
ಅಶೋಕ್ ಕುಮಾರ್ ನಿರೂಪಿಸಿ,
ಶ್ರೀ
ಭಾಸ್ಕರ ಮಾಸ್ತರ್ ಧನ್ಯವಾದವಿತ್ತರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿಗೊಂಡ ಶ್ರೀ ನಂದಿಕೇಶನ್ ಇವರನ್ನು ಸನ್ಮಾನಿಸಲಾಯಿತು.
ಕೇರಳ
ಪ್ರಾಂತ್ಯ ಕನ್ನಡ ಮಾಧ್ಯಮ
ಅಧ್ಯಾಪಕ ಸಂಘ (ರಿ.)
ಇದರ
ಮಂಜೇಶ್ವರ ಉಪಜಿಲ್ಲಾ ಘಟಕದ
ಮಹಾಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ
ವಿದ್ಯಾಧಿಕಾರಿಯಾಗಿ ಭಡ್ತಿ
ಹೊಂದಿದ ಶ್ರೀ ನಂದಿಕೇಶನ್ ಇವರನ್ನು
ಅಭಿನಂದಿಸಿ ಗೌರವಿಸಲಾಯಿತು.
ಜಿ.ಎಚ್.ಎಸ್.ಎಸ್.ಪೈವಳಿಕೆಯಲ್ಲಿ
ನಡೆದ ಈ ಸಮಾರಂಭದಲ್ಲಿ ಅಧ್ಯಾಪಕರು
ತಮ್ಮ ಔದ್ಯೋಗಿಕ ಚೌಕಟ್ಟನ್ನು
ಮೀರದೆ ಅದರ ಉನ್ನತಿಯನ್ನು
ಉಳಿಸಿಕೊಳ್ಳಬೇಕು,ಆಗ
ಮಾತ್ರ ಕಾಸರಗೋಡಿನ ಕನ್ನಡ ಶಾಲೆಗಳು
ಪುನ:
ಮಕ್ಕಳಿಂದ
ತುಂಬಿ ತುಳುಕುವಂತಾದೀತು.
ಹಾಗೇನೇ
ದೊರಕಿರುವ ಸೌಲಭ್ಯಗಳನ್ನೂ
ಅಧ್ಯಾಪಕರು ಸಮರ್ಪಕವಾಗಿ
ಬಳಸಿಕೊಳ್ಳಬೇಕೆಂದು ಕರೆಯಿತ್ತರು.
ಎ.ಯು.ಪಿ.ಶಾಲೆ
ಕುರುಡಪದವಿನ ನಿವೃತ್ತ ಮುಖ್ಯೋಪಾಧ್ಯಾಯರಾದ
ಶ್ರೀ ಕೋಚಣ್ಣ ಶೆಟ್ಟಿ ಸನ್ಮಾನಿಸಿದರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿಗೊಂಡ ನನ್ನ ಗುರುಗಳಾದ ಶ್ರೀ ನಂದಿಕೇಶನ್ ಅವರಿಗೆ ಅಭಿನಂದನೆ
ReplyDeleteಹರೀಶ . ಜಿ
ಅಧ್ಯಾಪಕ- ವಿ.ಎ.ಎಲ್.ಪಿ ಶಾಲೆ, ಉಕ್ಕಿನಡ್ಕ