FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 8 December 2024

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕಲೋತ್ಸವ :

           ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕಲೋತ್ಸವ ಕಾಸರಗೋಡು ಬೀರಂತಬೈಲು ಅಧ್ಯಾಪಕ ಭವನದಲ್ಲಿ ಜರಗಿತು. 

          ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನಿವೃತ್ತ ಅಧ್ಯಾಪಕರಾದ ಕೃಷ್ಣೋಜಿ ರಾವ್ ಪುಂಡೂರು ನೆರವೇರಿಸಿದರು.ಸದಸ್ಯರು ಸಕ್ರಿಯರಾದಾಗ ಸಂಘಟನೆ ಬೆಳೆಯುತ್ತದೆ ಎಂದು ಉದ್ಘಾಟಿಸಿ ಮಾತನಾಡಿದರು. ಶೇಖರ ಶೆಟ್ಟಿ ಬಾಯಾರು, ರಾಧಾಕೃಷ್ಣ ಬಲ್ಲಾಳ್, ವಂದನಾ ಉಳ್ಳೋಡಿ , ಶ್ರೀಪತಿ ಭಟ್ ಪದ್ಯಾಣ, ವೆಂಕಟ್ ಭಟ್ ಎಡನೀರು ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಜಬ್ಬಾರ್ ನಿರೂಪಿಸಿದರು.




No comments:

Post a Comment