FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday 17 February 2015


17-02-2015
ಶಿಕ್ಷಕ ಹುದ್ದೆಯನ್ನು ಅಂಗೀಕರಿಸಿದ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆಗಳು - ಅಧ್ಯಾಪಕ ಸಂಘ.
ಕನ್ನಡ ಶಾಲೆಗಳ ಮೇಲಿನ ಕಾಳಜಿಯಿಂದ ಕನ್ನಡ ವಿದ್ಯಾರ್ಥಿ, ಶಿಕ್ಷಕ ಮತ್ತು ಅಧಿಕೃತರಿಗೆ ತೊಡಕಾಗಿ ಕಾಡುತ್ತಿದ್ದ ತೆರವುಗೊಂಡ ಶಿಕ್ಷಕ ಹುದ್ದೆಯ ನೇಮಕಾತಿಗೆ ಅಂಗೀಕಾರ ನೀಡಿದ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳು ನಿಜಕ್ಕೂ ಅಭಿನಂದಾರ್ಹರು. ಇದೇ ರೀತಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ಎಲ್ಲಾ ಹುದ್ದೆಗಳನ್ನು ಆದಷ್ಟು ಬೇಗ ಅಂಗೀಕರಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷರಾದದ ಟಿ.ಡಿ.ಸದಾಶಿವ ರಾವ್ ನುಡಿದರು. ಅವರು ನಗರದ ಬೀರಂತಬೈಲಿನ ಅಧ್ಯಾಪಕ ಭವನದಲ್ಲಿ ಜರಗಿದ ಕೇಂದ್ರ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾರ್ಚ್ 8ನೇ ತಾರೀಕಿನಂದು ನಗರದ ಮುನ್ಸಿಪಲ್ ಕಾನ್ಫೆರನ್ಸ್ ಹಾಲಿನಲ್ಲಿ ನಡೆಯುವ ಕನ್ನಡ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ಸಿಗೆ ಎಲ್ಲಾ ಶಿಕ್ಷಕರು ಸಹಕರಿಸಬೇಕೆಂದು ಕರೆ ನೀಡಲಾಯಿತು.ಪ್ರಸ್ತುತ ಕಾರ್ಯಕ್ರಮದಲ್ಲಿ ಮಂಜೇಶ್ವರ, ಕಾಸರಗೋಡು ಉಭಯ ಶಾಸಕರು, ಡಿ.ಪಿ.. ಎಡನೀರು ಗೋಪಾಲಕೃಷ್ಣ ಭಟ್ ಸಹಿತ ಉನ್ನತ ಶಿಕ್ಷಣಾಧಿಕಾರಿಗಳು ಮತ್ತು ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಸಂಘಟನೆಯ ಬಲವರ್ಧನೆಯ ಕುರಿತು ರೂಪುರೇಷೆ ತಯಾರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷರುಗಳಾದ ಕೆ.ವಿ.ಸತ್ಯನಾರಾಯಣ ರಾವ್ ಮತ್ತು ಮಹಾಲಿಂಗೇಶ್ವರ ಭಟ್ ಎ೦.ವಿ., ಪದ್ಮಾವತಿ ಎ೦,ಕೃಷ್ಣೋಜಿ ರಾವ್, ಅಬ್ದುಲ್ ರಹಿಮಾನ್ ಯನ್, ಅಶೋಕ್ ಕೊಡ್ಲಮೊಗರು, ಪುರುಷೋತ್ತಮ ಕುಲಾಲ್, ಪ್ರದೀಪ್ ಕುಮಾರ್ ಶೆಟ್ಟಿ, ಕೆ.ಸತ್ಯನಾರಾಯಮ ಭಟ್, ಪ್ರೀತಂ ಎ.ಕೆ ಮತ್ತು ವಿಶಾಲಾಕ್ಷ ಪುತ್ರಕಳ ಮಾತನಾಡಿದರು.ಇತ್ತೀಚೆಗೆ ಹತ್ತನೇ ತರಗತಿ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ತಯಾರಿಯಲ್ಲಿ ತೋರಿದ ಅಸಡ್ಡೆಮತ್ತು ಸರಕಾರಿ ಆದೇಶವನ್ನು ಪಾಲಿಸದ ಅಧಿಕಾರಿಗಳ ನಿಲುವಿನ ಕುರಿತು ಸರಕಾರಕ್ಕೆ ದೂರು ಸಲ್ಲಿಸಲು ನಿಯೋಗವನ್ನು ರಚಿಸಲಾಯಿತು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಪ್ರಭಾವತಿ ಪುಂಡೂರು ವಂದಿಸಿದರು.

No comments:

Post a Comment