03-02-2015
ಕನ್ನಡ
ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ
ವಿದ್ಯಾರ್ಥಿ ಪ್ರಶಸ್ತಿ ಪ್ರದಾನ
ಕನ್ನಡ
ಅಭಿವೃದ್ಧಿ ಪ್ರಾಧಿಕಾರವು
ನಡೆಸಲುದ್ದೇಶಿಸಿದ ಕನ್ನಡ ಮಾಧ್ಯಮ
ಪ್ರಶಸ್ತಿಯು ಕೇರಳ ರಾಜ್ಯದ ಕನ್ನಡ
ವಿದ್ಯಾರ್ಥಿಗಳಿಗೆ ಪ್ರಾತಿನಿಧಿಕ
ಪ್ರೋತ್ಸಾಹವಾಗಿದೆ .ಆದುದರಿಂದ
ಇದಕ್ಕೆ ಅರ್ಹರಾದ ಎಲ್ಲಾ ಮಕ್ಕಳು,
ಅವರ ಪೋಷಕರು ಮತ್ತು
ಶಿಕ್ಷಕರು ಕಾರ್ಯಕ್ರಮದಲ್ಲಿ
ಭಾಗವಹಿಸಬೇಕು ಎ೦ದು ಕನ್ನಡ
ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ
ಎಚ್.ಎಲ್.
ಹನುಮಂತಯ್ಯನವರು ಕರೆ
ನೀಡಿದ್ದಾರೆ.. ಕಳೆದ
ಶೈಕ್ಷಣಿಕ ವರ್ಷದಲ್ಲಿ
ಎಸ್.ಎಸ್.ಎಲ್.ಸಿ.ಯಲ್ಲಿ
ಕನ್ನಡ ಮಾಧ್ಯಮದಲ್ಲಿ ಕಲಿತು
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್
ಗಳಿಸಿದ ಮಕ್ಕಳು ಇದಕ್ಕೆ
ಅರ್ಹರಾಗಿರುತ್ತಾರೆ.ಇದಲ್ಲದೆ
ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ
ಅತ್ಯನ್ನತ ಗ್ರೇಡ್ ಗಳಿಸಿದ
ಮಕ್ಕಳನ್ನು ಪುರಸ್ಕರಿಸಲಾಗುವುದು.
ಮಾರ್ಚ್ ತಿಂಗಳ ಮೊದಲ
ವಾರದಲ್ಲಿ ಈ ಕಾರ್ಯಕ್ರಮವು
ಕಾಸರಗೋಡಿನ ಮುನ್ಸಿಪಲ್
ಕಾನ್ಫೆರನ್ಸ್ ಹಾಲಿನಲ್ಲಿ
ನಡೆಯಲಿದೆ . ಸ್ಥಳೀಯ
ಶಾಸಕರು, ಡಿ.ಪಿ.ಐ.ಸಹಿತ
ಉನ್ನತ ಶೈಕ್ಷಣಿಕ ಅಧಿಕಾರಿಗಳು,
ಶಿಕ್ಷಣ ತಜ್ಞರು
ಮತ್ತು ನಾಡಿನ ಗಣ್ಯರು ಭಾಗವಹಿಸಲಿದ್ದಾರೆ.
No comments:
Post a Comment