28-12-2014
ಕನ್ನಡ ಅಧ್ಯಾಪಕ ಸಂಘದ ಕ್ಯಾಲೆಂಡರ್ ಬಿಡುಗಡೆ
ಜನವರಿ
17ರಂದು
ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ
ಮುಷ್ಕರ.
ಕಾಸರಗೋಡು
ಜಿಲ್ಲೆಯ ಕನ್ನಡ ಶಾಲೆಗಳಿಗೆ
ಸಂವಿಧಾನ ಬದ್ಧವಾಗಿ ನೀಡಬೇಕಾದ
ಅನೇಕ ಸೌಲಭ್ಯಗಳನ್ನು ನೀಡಲು
ಹಿಂದೇಟು ಹಾಕುತ್ತಿರುವ ಅಧಿಕೃತರ
ಮಲತಾಯಿ ಧೋರಣೆಯ ವಿರುದ್ಧ ನ್ಯಾಯಯುತ
ಹೋರಾಟ ಮಾಡಬೇಕಾಗಿದೆ.
ಆದುದರಿಂದ
17-01-2015
ನೇ
ತಾರೀಕು ಶನಿವಾರದಂದು
ಕಾಸರಗೋಡು ಜಿಲ್ಲೆಯ ನಾಲ್ಕು
ಉಪಜಿಲ್ಲಾ ಕಛೇರಿಗಳ ಎದುರು ಧರಣಿ
ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ.
ಎಲ್ಲಾ
ಶಿಕ್ಷಕ ಬಂಧುಗಳು ಈ ಮುಷ್ಕರವನ್ನು
ಯಶಸ್ವಿಗೊಳಿಸಬೇಕಾಗಿದೆ.
ಹೊಸದುರ್ಗದಲ್ಲಿ
ಕನ್ನಡ ಶಿಕ್ಷಕ ಹುದ್ದೆಯನ್ನು
ತೊಡೆದು ಹಾಕಿದುದರ ವಿರುದ್ಧ
ನಡೆಯುವ ಎಲ್ಲಾ ಹೋರಾಟಗಳಿಗೂ
ಅಧ್ಯಾಪಕ ಸಂಘ ತನ್ನ ಬೆಂಬಲ
ವ್ಯಕ್ತಪಡಿಸಿದೆ.
ಎ೦ದು
ಕೇಂದ್ರಾಧ್ಯಕ್ಷ ಟಿ.ಡಿ.ಸದಾಶಿವ
ರಾವ್ ನುಡಿದರು.ಬೀರಂತಬೈಲಿನಲ್ಲಿ
ನಡೆದ ಕೇಂದ್ರ ಸಭೆಯಲ್ಲಿ ಕನ್ನಡ
ಅಧ್ಯಾಪಕ
ಸಂಘದ ಕ್ಯಾಲೆಂಡರನ್ನು
ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಉಪಾಧ್ಯಕ್ಷರಾದ
ಮಹಾಲಿಂಗೇಶ್ವರ ಭಟ್ ಎ೦.ವಿ.
ಪ್ರಸ್ತಾವನೆ
ನುಡಿದರು.
ಕೆ.ವಿ.ಸತ್ಯನಾರಾಯಣ
ರಾವ್,
ವಿಶಾಲಾಕ್ಷ
ಪುತ್ರಕಳ,
ಪ್ರಭಾವತಿ
ಕೆದಿಲ್ಲಾಯ ಪುಂಡೂರು,
ರಾಜೇಶ್ವರ
ಸಿ.ಎಚ್,
ಪುಷ್ಪ
ಕುಮಾರಿ,
ಶ್ರೀನಿವಾಸ
ರಾವ್,
ಪ್ರೀತಂ
ಎ.ಕೆ,
ಪ್ರದೀಪ್
ಕುಮಾರ್,
ಕಷ್ಣೋಜಿ
ರಾವ್ ಎ,
ಅಶೋಕ್
ಕೊಡ್ಲಮೊಗರು,
ಮೊದಲಾದವರು
ಉಪಸ್ಥಿತರಿದ್ದರು.
ಪ್ರಧಾನ
ಕಾರ್ಯದರ್ಶಿ ಸೂಬ್ರಹ್ಮಣ್ಯ ಭಟ್
ಕೆ ಸ್ವಾಗತಿಸಿ,
ಪದ್ಮಾವತಿ
ಎ೦ ವಂದಿಸಿದರು.
No comments:
Post a Comment