24-09-2014
ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಯೋಗದಿಂದ ಡಿ.ಪಿ.ಐ.ಯವರಿಗೆ ಮನವಿ.
ತಿರುವನಂತಪುರ, ಕಾಸರಗೋಡು ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಕುರಿತು ಸಮಗ್ರ ಚಿತ್ರಣ ನೀಡಲು ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಯೋಗವೊಂದು ತಿರುವನಂತಪುರಕ್ಕೆ ಹೋಗಿ ಡಿ.ಪಿ.ಐ.ಯವರನ್ನು ಭೇಟಿ ಮಾಡಿ , ಶೈಕ್ಷಣಿಕ ವಲಯದಲ್ಲಿ ಈಗ ಇರುವ ಸಮಸ್ಯೆ ಕನ್ನಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪರಿಹಾರೋಪಾಯಗಳ ಕುರಿತು ಸಮಗ್ರ ಚರ್ಚೆ ನಡೆಸಿತು. ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಸ್ಥಿತಿವಿಶೇಷತೆಗನುಸರಿಸಿ ಪಠ್ಯ ಪುಸ್ತಕ ನಿರ್ಮಾಣ, ಭಾಷಾಂತರ ಮೊದಲಾದವುಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ವಿಶ್ಲೇಷಣೆ ನಡೆಸಲಾಯಿತು.ಎಸ್.ಸಿ.ಆರ್.ಟಿ. ನೇತೃತ್ವದಲ್ಲಿ ನಡೆಯುವ ವಿವಿಧ ಕಾರ್ಯಾಗಾರಗಳ ಮೇಲ್ನೋಟ ಮತ್ತು ಬೆಂಬಲ ವ್ಯವಸ್ಥೆಯ ಕುರಿತು ಚಿಂತನೆ ನಡೆಸಲಾಯಿತು. ನಿಯೋಗದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸ ರಾವ್,ಕೇಂದ್ರ ಸಮಿತಿ ಸದಸ್ಯರಾದ ರಾಜಗೋಪಾಲ ಸಹಿತ ಹತ್ತು ಮಂದಿ ಭಾಗವಹಿಸಿದ್ದರು.
No comments:
Post a Comment