20-09-2014
ಕ್ಲಸ್ಟರ್ ಬಹಿಷ್ಕಾದಂತಹ ಮಹತ್ವದ ತೀರ್ಮಾನಕ್ಕೆ ಮನ್ನಣೆಯಿತ್ತು ಬಹಿಷ್ಕಾರದಲ್ಲಿ ಪಾಲ್ಗೊಂಡು ಅಧಿಕಾರಿಗಳ ಗಮನ ಸೆಳೆಯುವಂತೆ ಮಾಡಲು ಸಹಕರಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ ಕೃತಜ್ಞತೆಗಳು.
ಕ್ಲಸ್ಟರ್ ಬಹಿಷ್ಕಾರದಂದು ಮೂಡಿಬಂದ ಕೆಲವು ಘೋಷಗೀತೆಗಳಿವು.
ಕ್ಲಸ್ಟರ್ ಬಹಿಷ್ಕಾರದಂದು ಮೂಡಿಬಂದ ಕೆಲವು ಘೋಷಗೀತೆಗಳಿವು.
ಜಯಕಾರ ಜಯಕಾರ
ಕನ್ನಡ ಸಂಘಕೆ ಜಯಕಾರ
ಧಿಕ್ಕಾರ ಧಿಕ್ಕಾರ
ಮಲತಾಯಿ ಧೋರಣೆಗೆ ಧಿಕ್ಕಾರ
ತರಲಿಲ್ಲ ತರಲಿಲ್ಲ
ಕನ್ನಡ ಪುಸ್ತಕ ತರಲಿಲ್ಲ
ಕೊಡಲಿಲ್ಲ ಕೊಡಲಿಲ್ಲ
ಕೈಪಿಡಿ ನೀವು ಕೊಡಲಿಲ್ಲ
ಬೇಡವೆ ಬೇಡ ಬೇಡವೆ ಬೇಡ
ಕ್ಲಸ್ಟರ್ ನಮಗೆ ಬೇಡವೆ ಬೇಡ
ಒಂದು ಕಣ್ಣಿಗೆ ಬೆಣ್ಣೆಯ ಹಚ್ಚಿ
ಇನ್ನೊಂದು ಕಣ್ಣಿಗೆ ಸುಣ್ಣವ ಹಚ್ಚಿ
ಮೀಸೆಯ ಅಡಿಯಲಿ ನಗುತಿಹ ನೋಡಿ
ಮೋಸವ ಮಾಡಲು ಬಿಡಬೇಡಿ
ಬಂದವರಲ್ಲ ತಂದವರಲ್ಲ
ಕನ್ನಡ ಮಣ್ಣಲಿ ಇದ್ದವರು
ಹೊಸಹೊಸ ರೀತಿಯ ಶಿಕ್ಷಣ ನೀತಿ
ಕನ್ನಡಕಿಂದು ಪುಸ್ತಕ ಭೀತಿ
ಎಲ್ಲಿದೆ ನ್ಯಾಯ ಎಲ್ಲಿದೆ ನೀತಿ
ಹೇಳಿರಿ ಹೇಳಿರಿ ಸರಕಾರ
ಬ್ಲೆಂಡೂ ಬರಲಿ ಸಾಕ್ಷರ ಬರಲಿ
ಆದರೆ ಕೈಪಿಡಿ ಮೊದಲೇ ಬರಲಿ
ಜಯಕಾರ ಜಯಕಾರ
ಕನ್ನಡ ಸಂಘಕೆ ಜಯಕಾರ
ಧಿಕ್ಕಾರ ಧಿಕ್ಕಾರ
ಮಲತಾಯಿ ಧೋರಣೆಗೆ ಧಿಕ್ಕಾರ
ಇನ್ನೂ
ಬಾರದ ಶಿಕ್ಷಕ ಕೈಪಿಡಿ, ಅಧ್ಯಾಪಕರಿಂದ
ಕ್ಲಸ್ಟರ್ ಬಹಿಷ್ಕಾರ
ಬದಿಯಡ್ಕ,
ಶಾಲೆ ಆರಂಭಗೊಂಡು
ಮೂರೂವರೆ ತಿಂಗಳು ಕಳೆದರೂ ಶಿಕ್ಷಕರ
ಕೈಪಿಡಿ ಕನ್ನಡ ಮಾಧ್ಯಮದ ಶಿಕ್ಷಕರಿಗೆ
ಲಭಿಸದೇ ಇರುವ ಸ್ಥಿತಿಗೆದುರಾಗಿ
ಜಿಲ್ಲೆಯಾದ್ಯಂತ ಕನ್ನಡ ಶಿಕ್ಷಕರು
ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ
ಕ್ಲಸ್ಟರ್ ತರಬೇತಿಯನ್ನು ಬಹಿಷ್ಕರಿಸಿ
ಪ್ರತಿಭಟನೆ ನಡೆಸಿದರು.ಅದರ
ಭಾಗವಾಗಿ ಜಿ.ಬಿ.ಯು.ಪಿ.ಎಸ್.ಪೆರಡಾಲದಲ್ಲಿ
ನಡೆಯಬೇಕಾಗಿದ್ದ ತರಬೇತಿಯ
ಬಹಿಷ್ಕಾರದ ವೇಳೆಯಲ್ಲಿ ಬ್ಲೆಂಡ್
ತರಬೇತಿ, ಸಾಕ್ಷರ
ಕಾರ್ಯಕ್ರಮ ಮೊದಲಾದ ನೂತನ
ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು
ಕನ್ನಡ ಶಿಕ್ಷಕರಗೆ ಅಗತ್ಯವಾದ
ಸಾಮಾಗ್ರಿಗಳನ್ನು ಸಕಾಲದಲ್ಲಿ
ಒದಗಿಸದೇ ಸತಾಯಿಸುವ ಸರಕಾದ
ಕ್ರಮವನ್ನು ಖಂಡಿಸಲಾಯಿತು.
ಇನ್ನು ಮುಂದೆಯೂ
ಅಧಿಕಾರಿಗಳು ಮಲತಾಯಿ ಧೋರಣೆಯನ್ನು
ಮುಂದುವರಿಸಿದ್ದೇ ಆದಲ್ಲಿ ಶಿಕ್ಷಣ
ಇಲಾಖೆ ನಿರ್ದೇಶಿಸುವ ಮುಂದಿನ
ಎಲ್ಲಾ ಕಾರ್ಯಕ್ರಮಗಳಿಗೂ ಅಸಹಕಾರ
ತೋರಬೇಕಾದೀತು ಎಂದು ಸಂಘಟನೆ ಈ
ಮೂಲಕ ಎಚ್ಚರಿಕೆ ನೀಡಿದೆ.ಕ್ಲಸ್ಟರ್
ಬಹಿಷ್ಕಾರದ ನೇತೃತ್ವವನ್ನು
ಕೇಂದ್ರ ಸಮಿತಿ ಉಪಾಧ್ಯಕ್ಷರಾದ
ಮಹಾಲಿಂಗೇಶ್ವರ ಭಟ್ ಎಂ.ವಿ.
ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ
ಸುಬ್ರಹ್ಮಣ್ಯ ಭಟ್ ಕೆ,
ಜೊತೆ ಕಾರ್ಯದರ್ಶಿ
ಪ್ರಭಾವತಿ ಕೆ ಪುಂಡೂರು,ಉಪಜಿಲ್ಲಾ
ಅಧ್ಯಕ್ಷ ರಾಜಾರಾಮ ಕೆ.ವಿ,ಕಾರ್ಯದರ್ಶಿಗಳಾದ
ಅಬ್ದುಲ್ ರಹಿಮಾನ್,
ಖಜಾಂಜಿ ಪ್ರದೀಪ್
ಕುಮಾರ್ ಶೆಟ್ಟಿ ಮೊದಲಾದವರು
ಉಪಸ್ಥಿತರಿದ್ದರು.ಕ್ಲಸ್ಟರ್
ತರಬೇತಿಯಲ್ಲಿ ಭಾಗವಹಿಸಬೇಕಾಗಿದ್ದ
ಸುಮಾರು ನಾನ್ನೂರಕ್ಕೂ ಮಿಕ್ಕಿ
ಕನ್ನಡ ಶಿಕ್ಷಕರು ಮೆರವಣಿಗೆಯಲ್ಲಿ
ತೆರಳಿ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ
ಮನವಿ ಸಲ್ಲಿಸಿದರು.
ಅಧ್ಯಾಪಕ ಕೈಪಿಡಿ ಎಸ್.ಸಿ.ಇ.ಆರ್.ಟಿ ಸೈಟಿನಲ್ಲಿ ಹಾಕಿದ್ದಾರಣ್ಣೋ
ReplyDelete