08-09-2014
ಮಕ್ಕಳ
ಸಾಹಿತ್ಯ ಸಂಗಮದ ವತಿಯಿಂದ ನಡೆಯುವ
ಮಕ್ಕಳ ಧ್ವನಿ ಕಾರ್ಯಕ್ರಮದ ಧ್ವಜ
ಹಸ್ತಾಂತರ,22ನೇಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ
ಕಾಸರಗೋಡು ವೇದಿಕೆ.
ಕಟೀಲು
ಪದವಿ ಪೂರ್ವ ಕಾಲೇಜಿನಲ್ಲಿ ಎರಡು
ದಿನಗಳಿಂದ ನಡೆಯುತ್ತಿದ್ದ ಮಕ್ಕಳ
ಧ್ವನಿ ಕಾರ್ಯಕ್ರಮದ ಸಮಾರೋಪ
ಸಮಾರಂಭದಲ್ಲಿ ಮುಂದಿನ ಮಕ್ಕಳ
ಧ್ವನಿ ಕಾರ್ಯಕ್ರಮ ನಡೆಸುವುದಕ್ಕಾಗಿ
ಕಾಸರಗೋಡು ಜಿಲ್ಲೆಗೆ ಧ್ವಜ
ಹಸ್ತಾಂತರಿಸುವ ಮೂಲಕ ಚಾಲನೆ
ನೀಡಲಾಯಿತು. ಕೇಂದ್ರ
ಅಧ್ಯಕ್ಷರಾದ ಜಯರಾಮ ಪೂಂಜಾ ರವವರು
ನಿಯೋಜಿತ ಅಧ್ಯಕ್ಷರಾದ ಸುಬ್ರಹ್ಮಣ್ಯ
ಭಟ್ ಕೆ ಇವರಿಗೆ ಧ್ವಜ ಹಸ್ತಾಂತರಿಸಿದರು.
ಕನ್ನಡ ಸಾಹಿತ್ಯ
ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ
ನೀಲಾವರ ಸುರೇಂದ್ರ ಅಡಿಗ,
ಸಂಗಮದ ಕೇಂದ್ರ ಸಮಿತಿ
ಕಾರ್ಯದರ್ಶಿ ಶ್ರೀನಿವಾಸ ರಾವ್,
ಕೇಂದ್ರ ಸಮಿತಿ ಸದಸ್ಯರೂ
ಪೂರ್ವಾಧ್ಯಕ್ಷರೂ ಆದ ವಿ.ಬಿ.ಕುಳಮರ್ವ
ಮತ್ತು ಕಾಸರಗೋಡು ಘಟಕದ ಅಧ್ಯಕ್ಷರಾದ
ವಾಣಿ ಪಿ.ಎಸ್
ಉಪಸ್ಥಿತರಿದ್ದರು.
No comments:
Post a Comment