FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 26 May 2023

ತಿರುವನಂತಪುರದ ವಿವಿಧ ಇಲಾಖೆಗೆ ಕನ್ನಡ ಅಧ್ಯಾಪಕರ ಸಂಘದ ನಿಯೋಗ ಭೇಟಿ:

      ಕೇರಳ ಪ್ರಾಂತ್ಯ ಕನ್ನಡ ‌ಮಾಧ್ಯಮ‌ ಸಂಘಟನೆಯ ನಿಯೋಗವು ತಿರುವನಂತಪುರದ ವಿವಿಧ ಇಲಾಖೆಗೆ ಭೇಟಿ ನೀಡಿ ಮನವಿ ಸಲ್ಲಿಸಿತು.

       ವಿವಿಧ ಇಲಾಖೆಗಳ ಪ್ರಧಾನ ಕಛೇರಿಗಳಾದ ಪರೀಕ್ಷಾ ಭವನ, ಡಿ.ಜಿ.ಇ ಕಛೇರಿ, ಕೈಟ್‌ ಕೇರಳ, ಸೆಕ್ರಟರಿಯೇಟ್, ಪ್ರಿನ್ಸಿಪಲ್ ಸೆಕ್ರೆಟರಿ ಆಫ್ ಜನರಲ್ ಎಜುಕೇಶನ್ ಮುಂತಾದ ಕಛೇರಿಗಳಿಗೆ ಭೇಟಿ ನೀಡಿ ನಮ್ಮ ಸಂಘಟನೆಯ ಮನವಿಗಳನ್ನು ಮನವರಿಕೆಯಾಗುವಂತೆ ಮಂಡಿಸಿ, ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡಕೊಂಡು ಹಿಂತಿರುಗಲಾಯಿತು.

        ನಿಯೋಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಶ್ರೀ ಶ್ರೀಶ ಕುಮಾರ ಪಿ, ಕಾಸರಗೋಡು ಉಪಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀ ಬಾಬು ಕೆ ಮೊದಲಾದವರು ಇದ್ದರು.








No comments:

Post a Comment