FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 21 April 2023

ಕೊಡುಗೈ ದಾನಿ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನರವರಿಗೆ ಸಂಘಟನೆಯ ವತಿಯಿಂದ ಗೌರವಾರ್ಪಣೆ :

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಜತ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆ ಮಾಡಿದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನಕವರು ಅನಿವಾರ್ಯ ಕಾರಣಗಳಿಂದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಬರಲು ಅನಾನುಕೂಲವಾಯಿತು. ಆದರೂ ಕನ್ನಡ ಅಧ್ಯಾಪಕರ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಅಭಿನಂದಿಸಿ, ರಜತ ಮಹೋತ್ಸವಕ್ಕೆ ಶುಭವನ್ನೂ ಹಾರೈಸಿರುವರು. ಜೊತೆಗೆ ರಜತ ಮಹೋತ್ಸವದ ಖರ್ಚಿಗಾಗಿ ಒಂದು ಲಕ್ಷ ರೂ. ಸಹಾಯಧನವನ್ನು ಕೊಡುಗೆಯಾಗಿ ನೀಡಿರುವರು.

       ಸಮಾಜದಲ್ಲಿ ಅತೀ ಪ್ರಭಾವೀ ವ್ಯಕ್ತಿಯಾಗಿ ಗುರುತಿಕೊಂಡಿರುವ ಕೊಡುಗೈ ದಾನಿ, ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಇವರನ್ನು ಸಂಘಟನೆಯ ವತಿಯಿಂದ ಗೌರವಾರ್ಪಣೆಯನ್ನು ನೀಡುವ ಇಂಗಿತವನ್ನು ವ್ಯಕ್ತಪಡಿಸಿದಾಗ ಬಿಡುವಿಲ್ಲದೆ ಕೆಲಸ ಹಾಗೂ ಸಮಯಾವಕಾಶದ ಕೊರತೆಯಿಂದಾಗಿ ಪ್ರೀತಿಯಿಂದ ನಯವಾಗಿ ನಿರಾಕರಿಸಿದ್ದರು. 

          ಆದರೂ ಸಂಘಟನೆಯ ವತಿಯಿಂದ ಸನ್ಮಾನಿಸಬೇಕೆಂಬ ಹಂಬಲದಿಂದ ಇಂದು ಅವರ ಮನೆಯಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಗೌರವಾರ್ಪಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಯುತ ಸದಾಶಿವ ಕೆ ಶೆಟ್ಟಿ ಯವರು ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದು ಮೆಚ್ಚುಗೆಯ ಮಾತುಗಳನ್ನಾಡಿದರು.

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಶ್ರೀ ಸುಕೇಶ್ ಎ, ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಎಂ, ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಮಂಜೇಶ್ವರ ಉಪಜಿಲ್ಲಾ ಘಟಕದ ಕೋಶಾಧಿಕಾರಿ ಶ್ರೀ ಜೀವನ್ ಕುಮಾರ್, ಸದಸ್ಯರಾದ ಶ್ರೀಮತಿ ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.








No comments:

Post a Comment