FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 11 October 2015

-->
11-10-2015.
''ಕಯ್ಯಾರರಿಗೆ ಅಕ್ಷರಾಂಜಲಿ" ಸಿದ್ಧತೆಯಲ್ಲಿ ಕನ್ನಡ ಅಧ್ಯಾಪಕ ಸಂಘ.
         ಕನ್ನಡದ ಕವಿ ಕಯ್ಯಾರರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸ್ಮರಣೆಗಾಗಿ ಕಾಸರಗೋಡಿನ ಶಾಲಾ ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ. ಇದಕ್ಕಾಗಿ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಪ್ರೌಢ ಶಾಲಾ ವಿಭಾಗಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಿವಿಧ ಸಾಹಿತ್ತಿಕ ಸ್ಪರ್ದೆಗಳ್ನು ಏರ್ಪಡಿಸುವುದು ಮಾತ್ರವಲ್ಲದೆ ಅವರ ಕವನವನ್ನು ಹಾಡುವ ಮೂಲಕ ಅಕ್ಷರಾಂಜಲಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮ ನವೆಂಬರ್ ತಿಂಗಳ ಎರಡನೇ ಶನಿವಾರ ನಡೆಯುವುದು. ಎಲ್ಲಾ ಶಾಲೆಯ ಭಾಗವಹಿಸುವಿಕೆಯನ್ನು ಸಂಘಟನೆಯ ಕಾರ್ಯಕರ್ತರು ಧೃಢಪಡಸಬೇಕಾಗಿದೆ, ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಹೇಳಿದರು. ಅವರು ಕೇಂದ್ರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಂಘಟನೆಯ ಕೇಂದ್ರ ಸಮಿತಿ ಸಭೆಯು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಿತು. ರಾಜ್ಯ ಸಮ್ಮೇಳನ, ಸಂಘಟನೆಯ ಬಲವರ್ಧನೆ ಮತ್ತು ತುರ್ತು ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಯಿತು. ಅಂಗನವಾಡಿಗಳಲ್ಲಿ ಕನ್ನಡ ಅವಗಣನೆ, ಚುನಾವಣೆ ಸಮಯದಲ್ಲಿ ಕನ್ನಡ ಚುನಾವಣಾಧಿಕಾರಿಗಳಿಗೆ ಉಂಟಾಗುವ ತೊಡಕು ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ನಿಯೋಗ ರಚಿಸಲಾಯಿತು.
           ಕುಂಬಳೆ ಉಪಜಿಲ್ಲಾಧ್ಯಕ್ಷರಾದ ಜ್ಯೋತಿ ಕೆ, ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೆ , ಖಜಾಂಜಿ ಕಿರಣಶಂಕರ ಕೆ.ಎಸ್.ಮತ್ತು ಪ್ರಭಾವತಿ ಕೆದಿಲಾಯ ಪುಂಡೂರು ಕಯ್ಯಾರರಿಗೆ ಅಕ್ಷರಾಂಜಲಿಯ ಕುರಿತು ರೂಪುರೇಷೆಯನ್ನು ಮಂಡಿಸಿದರು. ಮಂಜೇಶ್ವರ ಘಟಕಾಧ್ಯಕ್ಷರಾದ ರವೀಂದ್ರನಾಥ ಕೆ.ಆರ್ ಮತ್ತು ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಪಂಚಾಯತ್ ಮಟ್ಟದಲ್ಲಿ ಸಂಘಟನೆಯ ಬಲವರ್ಧನೆಯ ಕುರಿತು ಚಿತ್ರಣ ನೀಡಿದರು.ಕಾಸರಗೋಡು ಘಟಕದ ಕಾರ್ಯದರ್ಶಿ ನವೀನ್ ಕುಮಾರ್ ,ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಮತ್ತು ಪರಮೇಶ್ವರಿ ವೈ, ಎಲ್ಲಾ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬ ಆಚರಣೆ ಮಾಡಬೇಕೆಂಬ ಜಿಲ್ಲಾ ಶಿಕ್ಷಣ ನಿರ್ದೇಶಕರ ನಿರ್ದೇಶವನ್ನು ಕನ್ನಡ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ಬಗ್ಗೆ ರೂಪುರೇಷೆ ತಯಾರಿಸಿ ಮಂಡಿಸಿದರು.
ನಿಕಟ ಪೂರ್ವಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್, ಚಂದ್ರಹಾಸ ಪಿ. , ಬಿ.ರಾಜು ಸ್ಟೀವನ್ ಕ್ರಾಸ್ತಾ, ಬೇಬಿ ಸವಿತಾ , ವಾಣಿ ಪಿ.ಎಸ್, ಸಂಧ್ಯಾರಾಣಿ ಬಿ.ಕೆ ಮತ್ತು ಉಮೇಶ ಕೆ ಸಂಘಟನೆಯ ಬಲವರ್ಧನೆಯ ಕುರಿತು ರೂಪುರೇಷೆ ಪ್ರಸ್ತುತ ಪಡಿಸಿದರು.
         ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಂದಿಸಿದರು.

Friday, 9 October 2015

09-10-2015
ಕೇಂದ್ರ ಸಮಿತಿ ಸಭೆ- ಆಮಂತ್ರಣ.
ಪ್ರಿಯರೇ,
         ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಸಭೆಯು ದಿನಾಂಕ 11-10-2015 ನೇ ರವಿವಾರ ಪೂರ್ವಾಹ್ನ 10.00 ಗಂಟೆಗೆ ಸರಿಯಾಗಿ ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಲಿದೆ. ಎಲ್ಲಾ ಕೇಂದ್ರ ಸಮಿತಿ ಸದಸ್ಯರು ಅಗತ್ಯ ಹಾಜರಿರಬೇಕಾಗಿ ವಿನಂತಿ. 
 ಅಧ್ಯಕ್ಷರು ಮತ್ತು ಸದಸ್ಯರು
                                                                                       
ಅಜಂಡಾಃ 1.ಕಯ್ಯಾರರ ಸ್ಮರಣಾರ್ಥ ಕಾರ್ಯಕ್ರಮ.
         2.ವಾರ್ಷಿಕ ಕ್ಯಾಲೆಂಡರ್ ನಿರ್ಮಾಣ.
         3.ರಾಜ್ಯ ಸಮ್ಮೇಳನ.
         4.ಇತರ.
ಸೂಚನೆ. ಮಂಜೇಶ್ವರ, ಕುಂಬಳೆ, ಕಾಸರಗೋಡು ಮತ್ತು ಬೇಕಲ-ಹೊಸದುರ್ಗ ಉಪಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಜಿಗಳು ಮತ್ತು ಕೇಂದ್ರ ಸಮಿತಿ ಸದಸ್ಯರು, ಕೇಂದ್ರಸಮಿತಿಗೆ ವಿಶೇಷ ಆಹ್ವಾನಿತರು ಮತ್ತು ಕಾಲೇಜು ಪ್ರತಿನಿಧಿಗಳು ಕೇಂದ್ರ ಸಮಿತಿಯ ಸದಸ್ಯರಾಗಿರುತ್ತಾರೆ.