FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday 16 August 2014

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ,ಕಾಸರಗೋಡು

ನಾವು ನಮ್ಮೊಳಗೆ

 ಪ್ರೀತಿಯ ಅಧ್ಯಾಪಕ ಬಂಧುಗಳೇ,
       ಹದಿನಾರು ವಸಂತಗಳನ್ನು ಯಶಸ್ವಿಯಾಗಿ ದಾಟಿ ಮುನ್ನಡೆಯುತ್ತಿರುವ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ನಿಮ್ಮೆಲ್ಲರ ಸಹಕಾರದಿಂದ ಇಂದು ಕಾಸರಗೋಡು ಜಿಲ್ಲೆಯ ಪ್ರಬಲ ಸಂಘಟನೆಯೆಂಬ ಕೀರ್ತಿಗೆ ಪಾತ್ರವಾಗಿದೆ.
       1997 ರಲ್ಲಿ ಶಾಲಾರಂಭವಾಗಿ ಹಲವುತಿಂಗಳು ಕಳೆದರೂ ಕನ್ನಡ ಶಾಲೆಗಳಿಗೆ ಕನ್ನಡ ಪಠ್ಯಪುಸ್ತಕ ಲಭಿಸದೇ ಇದ್ದಾಗ ಅದನ್ನು ಪ್ರತಿಭಟಿಸಲು ಕನ್ನಡ ಅಧ್ಯಾಪಕರು ಒಗ್ಗೂಡಿದ ಫಲವಾಗಿ ಹುಟ್ಟಿಕೊಂಡ ಈ ಸಂಘವು ಆ ಬಳಿಕ ದಿಟ್ಟವಾಗಿ ಮುನ್ನಡೆದು ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎದುರಿಸುತ್ತಿರುವ ಹೆಚ್ಚಿನೆಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡಿದೆ.
      ಹೊಸದುರ್ಗ ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಅಧ್ಯಾಪಕರ ಹುದ್ದೆಗೆ ಕನ್ನಡ ಬಾರದ ಅಧ್ಯಾಪಿಕೆಯನ್ನು ನೇಮಕ ಮಾಡಿದುದರ ಫಲವಾಗಿ ಆ ಅಧ್ಯಾಪಕಿ ಅಲ್ಲಿಂದ ಎತ್ತಂಡಿಯಾದುದು ಕನ್ನಡಿಗರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯವಾಗಿದೆ.
      ವಿದ್ಯಾರಂಗ ರಾಜ್ಯ ಸಾಹಿತ್ಯೋತ್ಸವದ ಸ್ಪರ್ಧೆಗಳಲ್ಲಿ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಭಾಗವಹಿಸುವಂತಾದುದು ಅಧ್ಯಾಪಕರ ಸಂಘದ ಮನವಿಗೆ ಸಿಕ್ಕ ಪುರಸ್ಕಾರವಾಗಿದೆ. 
       ಒಂದು,ಮೂರು,ಐದು ಮತ್ತು ಏಳನೇ ತರಗತಿಯ ಕನ್ನಡ ಕಲಿಕಾ ಡಿ.ವಿ.ಡಿ.ಬಿಡುಗಡೆ ಕನ್ನಡ ಮಾಧ್ಯಮ ಅಧ್ಯಾಪಕರ ಕಿರೀಟಕ್ಕೆ ಇನ್ನೊಂದು ಗರಿಯಾಗಿದೆ.ನೂರಾರು ಪಾಠ ಪುಸ್ತಕಗಳನ್ನು ಸರಕಾರ ಈ ಶೈಕ್ಷಣಿಕ ವರ್ಷದಲ್ಲಿ ತಯಾರಿಸಿ ಅದಕ್ಕೆ ಪೂರಕವಾದ ಅಧ್ಯಾಪಕ ಪಠ್ಯವನ್ನೂ ಸಿದ್ಧಗೊಳಿಸಿದೆ. ಅದರೊಂದಿಗೆ ಕಲಿಕಾ ಡಿ.ವಿ.ಡಿ.ಗಳ ತಯಾರಿಗೂ ಶಿಫಾರಸು ಮಾಡಿತ್ತು. ಕಾಸರಗೋಡಿನಲ್ಲಿ ಜರಗಿದ ಕನ್ನಡ ಪಠ್ಯ ಪುಸ್ತಕ ರಚನಾ ಕಮ್ಮಟದಲ್ಲಿ ಕನ್ನಡಿಗರು ತಯಾರಿಸಿದ ಕಲಿಕಾ ಸಂಪನ್ಮೂಲಕ್ಕೆ ರಾಜ್ಯಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದಕ್ಕೆ ಸಹಕರಿಸಿದ ಎಲ್ಲರನ್ನೂ ಅಧ್ಯಾಪಕ ಸಂಘ ಶ್ಲಾಘಿಸುತ್ತಿದೆ.
      ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಯವರು ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಸರಕಾರವು 'ಪಂಪ ಪ್ರಶಸ್ತಿ ' ಯನ್ನು ನೀಡಿ ಗೌರವಿಸಿರುವುದೂ ಕಾಸರಗೋಡಿನ ಕನ್ನಡಿಗರಿಗೆ ಸಂದ ಗೌರವವಾಗಿದೆ. ಈ ಸಂದರ್ಭದಲ್ಲಿ ಸಂಘವು ಕಯ್ಯಾರರನ್ನು ಅಭಿನಂದಿಸಿದೆ. 
    ಕನ್ನಡ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ವಿವಿಧ ಇಲಾಖೆಗಳಿಗೆ ಈ ವರ್ಷ ಐವತ್ತಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಲಾಗಿದೆ. ನಮ್ಮ ಶಾಲೆಗಳಿಗೆ ಬರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಲ ಸರ್ವಾಂಗೀಮ ಅಭಿವೃದ್ಧಿ , ಅವರಿಗೆ ಗುಣಮಟ್ಟದ ಶಿಕ್ಷಣ ನಮ್ಮ ಗುರಿಯಾಗಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಮೇಲೆ ದಬ್ಬಾಳಿಕೆ ನಡೆದಾಗ ಅದರ ವಿರುದ್ಧ ಹೋರಾಟ ನಡೆಸಿದ್ದೇವೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ನಡೆಸುತ್ತಿರುವ ಎಲ್ಲಾ ಚಟುವಟಿಕೆಗಳಿಗೆ , ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ದುಡಿಯುತ್ತಿರುವ  ನಿಮಗೆಲ್ಲರಿಗೂ ಅನಂತ ವಂದನೆಗಳು.
      
ವಿಳಾಸ 
ಕನ್ನಡ ಅಧ್ಯಾಪಕ ಭವನ,ಬೀರಂತಬೈಲು, ಅಂಚೆ - ಕಾಸರಗೋಡು. 671121,ಕೇರಳ ರಾಜ್ಯ.
Kannada Adhyapaka  Bhavana,  Beeranthabail, Post- Kasaragod. 671121.
ದೂರವಾಣಿ, 9495618082, 9447490287, 9400014534.
Mail, kannadaadyapakasanga@gmail.com

  




1 comment:

  1. ಬ್ಲಾಗ್ ಉತ್ತಮವಾಗಿದೆ . ಸಂಘಟನೆಯ ಸದಸ್ಯನಾದ ನನಗೆ ಹಲವಾರು ವಿಷಯಗಳನ್ನು ಈ ಮೂಲಕ ತಿಳಿಯಲು ಸುಲಭ ಸಾಧ್ಯವಾಗಿದೆ . ಧನ್ಯವಾದಗಳು
    ಹರೀಶ . ಜಿ (ಅಧ್ಯಾಪಕ- ವಿ.ಎ.ಎಲ್.ಪಿ ಶಾಲೆ, ಉಕ್ಕಿನಡ್ಕ )

    ReplyDelete