FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Wednesday, 27 August 2014


-->
28-08-2018

ಕನ್ನಡ ಮಾಧ್ಯಮ ಶಾಲೆಗಳ ಬ್ಲೋಗ್ ಗಳಲ್ಲಿ ಕನ್ನಡ ಬಳಸಿ …..ಕನ್ನಡ ಉಳಿಸಿ,ಕನ್ನಡ ಅಧ್ಯಾಪಕ ಸಂಘ.

          ಒಲವಿನ ಕನ್ನಡ ಬಂಧುಗಳೇ, 
               ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಶಿಕ್ಷಣದಲ್ಲಿ ಪುರೋಗತಿ ಉಂಟಾಗುವುದಲ್ಲದೆ, ಅಧಿಕಾರಿ ವರ್ಗದವರಿಗೆ ತಮ್ಮ ಶಾಲೆಗಳ ಮಾಹಿತಿಗಳನ್ನು ಮತ್ತು ವ್ಯವಸ್ಥೆಯ ಕುರಿತಾದ ಸಮಗ್ರ ಚಿತ್ರಣವನ್ನು ನೀಡುವುದಕ್ಕೆ ಸುಲಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಾಡಿನ ಸಂಸ್ಕೃತಿ, ಕಲೆ,ಸಾಹಿತ್ಯ ,ಪರಂಪರೆಯನ್ನು ಈ ಬ್ಲೋಗಿನ ಸಹಾಯದಿಂದ ಪರಿಚಯಯಿಸುವ ಅನೇಕ ಕಾರ್ಯಕ್ರಮಗಳು ಶಾಲೆಯಲ್ಲಿ ಔದ್ಯೋಗಿಕವಾಗಿ ನಡೆಯುತ್ತಿದೆ. ಇವೆಲ್ಲವನ್ನೂ ಪರಸ್ಪರ ವಿನಿಮಯ ಮಾಡುವ ಮಧ್ಯವರ್ತಿಯಾಗಿ ಈ ಬ್ಲೋಗ್ ಗಳು ಮೂಡಿಬರಬೇಕೆಂಬ ಸದುದ್ದೇಶದಿಂದ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳು ಬ್ಲೋಗನ್ನು ಹೊಂದಬೇಕೆಂದು ಶಾಲೆಯ ಶಿಕ್ಷಕರಿಗೆ ಇಲಾಖೆಯ ವತಿಯಿಂದ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಂದ ಕನ್ನಡ ಅಧ್ಯಾಪಕರೂ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದು ತಮ್ಮ ಶಾಲೆಗಳ ಬ್ಲೋಗಗಳನ್ನು ಕನ್ನಡದಲ್ಲಿಯೂ ಅಲಂಕಾರಗೊಳಿಸಬೇಕಾದ ಅನಿವಾರ್ಯತೆಯಿದೆ.                                 ವಿದ್ಯುತ್ ಬಿಲ್ಲು ಟೆಲಿಫೋನ್ ಬಿಲ್ಲು , ಅನೇಕ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಬಯಸುವ ಸಾಮಾನ್ಯ ಕನ್ನಡಿಗರಿಗೆ ಇಂದು ಕೆಲವು ಕನ್ನಡ ಶಾಲೆಗಳ ಬ್ಲೋಗ್ ಗಳನ್ನು ನೋಡಿದರೆ ಆಘಾತವಾಗಬಹುದು.ಕನ್ನಡದ ನೆಲದಲ್ಲಿ ನೆಲೆನಿಂತಿದ್ದು ಕನ್ನಡ ಅಧ್ಯಾಪಕರಾದ ನಾವು ಈ ಸ್ಥಿತಿಗೆ ಅವಕಾಶ ಮಾಡಿಕೊಡಬಾರದು. ಕೇರಳ,ಕರ್ನಾಟಕ ಸಂಪರ್ಕವನ್ನು ಹೊಂದಿದ ಭವ್ಯ ಇತಿಹಾಸವಿರುವ ಮತ್ತು ಹಿಂದೊಮ್ಮೆ ಅಚ್ಚ ಕನ್ನಡ ಶಿಕ್ಷಣ ಸಂಸ್ಥೆಗಳೇ ಆಗಿದ್ದ ಕಾಸರಗೋಡಿನ ಎಲ್ಲಾ ಶಾಲೆಗಳ ಅಧಿಕೃತರು ಇದನ್ನು ಅರ್ಥೈಸಿಕೊಳ್ಳಬೇಕು. ಮಕ್ಕಳ ಬರಹಗಳಿಂದ ಹಿಡಿದು ಶಿಕ್ಷಕರ ಮಾದರಿ ಅಧ್ಯಾಪನವನ್ನೂ, ವಿವಿಧ ಶಾಲಾ ಚಟುವಟಿಕೆಗಳನ್ನೂ ಪರಸ್ಪರ ನೋಡಲು ಮತ್ತು ಅಧ್ಯಯನ ಮಾಡಲು ಸಾಧ್ಯತೆ ಕಲ್ಪಿಸುವ ಈ ವ್ಯವಸ್ಥೆಯಲ್ಲಿ ಕನ್ನಡ ಅಧ್ಯಾಪಕರು ಹಿಂದುಳಿಯಬಾರದು. ಅನ್ಯ ಭಾಷೆಗೆಗೆ ಪರಾಧೀನರಾಗದೆ ತಮ್ಮ ಶಾಲೆಗಳ ಅಧಿಕೃತ ಬ್ಲಾಗಿನಲ್ಲಿ ಕನ್ನಡದಲ್ಲಿಯೂ ವಿಚಾರಗಳನ್ನು ಪ್ರಕಟಿಸಬೇಕು. ಇದಕ್ಕೆ ಅಗತ್ಯವಾದ ತರಬೇತಿಗಳನ್ನು ಎಲ್ಲಾ ಕನ್ನಡ ಶಿಕ್ಷಕರಿಗೆ ಸಕಾಲದಲ್ಲಿ ನೀಡಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಅಧಿಕೃತರನ್ನು ಒತ್ತಾಯಿಸಿದೆ.                                         ನಿನ್ನೆ ನಡೆದ ಕಾಸರಗೋಡು ಶಿಕ್ಷಣ ಉಪನಿರ್ದೇಶಕರು ಕರೆದ ಅಂಗೀಕೃತ ಅದಧ್ಯಾಪಕರ ಸಂಘಗಳ ಸಭೆಯಲ್ಲಿ ಈ ವಿಚಾರವನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಸ್ತಾಪಿಸಿದರು. ಈ ಹಿಂದೆ ಎಲ್ಲಾ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬವು ವಿಜೃಂಬಣೆಯಿಂದ ನಡೆಯುತ್ತಿತ್ತು.ಈಗ ಸರಕಾರದ ಕೃಪಾಕಟಾಕ್ಷವಿಲ್ಲದೆ ಸೊರಗಿ ಹೋಗಿದೆ. ಆದರೆ ಕಾಸರಗೋಡಿನ ಕನ್ನಡ ಪರ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದ ಫಲವಾಗಿ ಜಿಲ್ಲೆಯ ಉಪನಿರ್ದೇಶಕರು ಎಲ್ಲಾ ಕನ್ನಡ ಶಾಲೆಗಳಲ್ಲಿ ಕನ್ನಡದ ಸಂಸ್ಕೃತಿಯ ಪ್ರತೀಕವಾದ ದಸರಾ ನಾಡಹಬ್ಬದ ಆಚರಣೆಯನ್ನು ಮಾಡಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ. ಕೇರಳ ರಾಜ್ಯದ ನಾಡಹಬ್ಬವಾದ ಓಣಂನ್ನು ವೈವಿಧ್ಯಮಯವಾಗಿ ಆಚರಿಸುವ ನಮಗೆ ದಸರಾ ನಾಡಹಬ್ಬದ ಆಚರಣೆಯು ಇನ್ನಷ್ಟು ಬಾಂಧವ್ಯವನ್ನು ಬೆಸೆಯುವಂತಾಗಲಿ. ಈ ಸುತ್ತೋಲೆಯನ್ನು ಹೊರಡಿಸಿದ ಅಧಿಕೃತರಿಗೆ ಅಭಿನಂದನೆಗಳು.    
                                             ಇತೀ  ವಿಶ್ವಾಸಗಳೊಂದಿಗೆ,
                                                                                               ಸುಬ್ರಹ್ಮಣ್ಯ ಭಟ್ ಕೆ.
                                                                                                          ಪ್ರಧಾನ ಕಾರ್ಯದರ್ಶಿ

2 comments:

  1. ಮೈನಾರಿಟಿ ಶಾಲೆಗಳ ಹುದ್ದೆ ನಿರ್ಣಯದ ಕುರಿತಾಗಿ ಸರಕಾರ ಇಂದು ಹೊರಡಿಸಿದ ಆದೇಶ ಡೌನ್ಲೋಡ್ಸಿನಲ್ಲಿದೆ. ಆದರೆ ಜಿ.ಒ.ನಂಬ್ರ 162/2014
    www.shenischool.in

    ReplyDelete