FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 24 February 2023

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನ

 ಮಾತೃ ಭಾಷೆಯ ಕಲಿಕೆಯೊಂದಿಗೆ ವಿದ್ಯಾ ರ್ಥಿಗಳನ್ನು ಪತ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಬೇಕೆಂದು ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಸಿ.ಕೆ. ವಾಸು ಹೇಳಿದರು.

        ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನವನ್ನು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

        ಮಾತೃ ಭಾಷೆಯಲ್ಲಿ ಮಾತ್ರವೇ ಸರಿಯಾದ ರೀತಿಯಲ್ಲಿ ಆಶಯ ವಿನಿಮಯ ಮಾಡಿಕೊಳ್ಳಲು ಸಾಧ್ಯ ಎಂದ ಅವರು ಯಾವುದೇ ವಿಷಯವಾಗಿರಲಿ ವಿದ್ಯಾರ್ಥಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಹೆಚ್ಚಿನ ಗಮನ ಹರಿಸಬೇಕು. ಕಲಿಕೆ ಎಂದರೆ ಸಿಲಬೆಸ್ ಮಾತ್ರವಲ್ಲ ಪತ್ಯೇತರ ವಿಷಯಗಳಲ್ಲೂ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.

        ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಅಂಕಣಗಾರರು, ಪ್ರಗತಿಪರ ಚಿಂತಕರು ಆಗಿರುವ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಕಾಸರಗೋಡಿನಲ್ಲಿ ಅಧ್ಯಾಪಕರು ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

       ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಬಿ.ಮಹಾಲಿಂಗೇಶ್ವರ ರಾಜ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಶುಭ ಭಕೋರಿದರು.  ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು. ಸಂಘದ ಅಧಿಕೃತ ವಕ್ತಾರ ಶ್ರೀ ರವೀಂದ್ರನಾಥ್ ಕೆ.ಆರ್. ಪ್ರಾಸ್ತಾವಿಕ ನುಡಿದರು. ಸಂಘದ ಕೋಶಾಧಿಕಾರಿ ಪದ್ಮಾವತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಶರತ್ ಕುಮಾರ್ ಎಂ. ರವರು ವಂದಿಸಿದರು.

       ಕಾಸರಗೋಡಿನಲ್ಲಿ ಉದ್ಘಾಟನೆಗೂ ಮುನ್ನ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಿಂದ ವರ್ಣರಂಜಿತ ಮೆರವಣಿಗೆ ನಡೆಯಿತು.

      ಅಪರಾಹ್ನ ಅಧ್ಯಾಪಕರಿಂದ ಬರ್ಬರೀಕ ನಾಟಕ ಪ್ರದರ್ಶನಗೊಂಡಿತು. ಆ ಬಳಿಕ ಪ್ರತಿನಿಧಿ ಸಮ್ಮೇಳನ, ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











Tuesday, 7 February 2023

ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನ ಹಾಗೂ ರಜತ ಮಹೋತ್ಸವ ; ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್ ಬಿಡುಗಡೆ :

         ಕಾಸರಗೋಡಿನ ಕನ್ನಡ ಮಾಧ್ಯಮ ಅಧ್ಯಾಪಕರ ಅತೀ ದೊಡ್ಡ ಸಂಘಟನೆಯಾದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು 25 ವರುಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸಮ್ಮೇಳನ ಹಾಗೂ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಂಗವಾಗಿ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಉಪ್ಪಳದಲ್ಲಿ ಇಂದು ನಡೆಸಲಾಯಿತು.

Saturday, 4 February 2023

ರಜತ ಮಹೋತ್ಸವ ಪೂರ್ವಭಾವಿ ಸಭೆ :

       ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯ ಸಮ್ಮೇಳನ ಆಚರಣೆಯ ಪ್ರಯುಕ್ತ ಇಂದು ಪೂರ್ವಭಾವಿ ಸಭೆ ನಡೆಸಲಾಯಿತು.