FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday, 14 January 2023

ರಾಜ್ಯ ಸಮ್ಮೇಳನ ಹಾಗೂ ರಜತ ಮಹೋತ್ಸವದ ಸಂಘಟನಾ ಸಮಿತಿ ಸಭೆ:

         ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನ ಹಾಗೂ ರಜತ ಮಹೋತ್ಸವದ ಅಂಗವಾಗಿ ಇಂದು ಸಂಘಟನಾ ಸಮಿತಿ ಸಭೆಯನ್ನು ನಡೆಸಲಾಯಿತು.

ಕನ್ನಡ ಅಧ್ಯಾಪಕ ಸಂಘದ ರಜತ ಮಹೋತ್ಸವದ ಅಂಗವಾಗಿ ಅಧ್ಯಾಪಕರಿಗೆ ಸ್ಪರ್ಧೆಗಳು ; ಸಾರಾ ಅಬೂಬಕ್ಕರ್ ರವರಿಗೆ ನುಡಿ ನಮನ :

         ಕೇರಳದ ರಾಜ್ಯದ ಅತ್ಯಂತ ದೊಡ್ಡ ಕನ್ನಡ ಅಧ್ಯಾಪಕರ ಸಂಘಟನೆಯಾದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಅದರಂಗವಾಗಿ ನಡೆಸುವ ರಜತ ಮಹೋತ್ಸವದ ಭಾಗವಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಕನ್ನಡ ಅಧ್ಯಾಪಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.