FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday, 28 June 2022

ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡೇತರರ ನೇಮಕ ; ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ:

           "ಕನ್ನಡ ಸಂಸ್ಕೃತಿ ಉಳಿಸಲು ಸಾಧ್ಯವಿರುವ ಬಹುದೊಡ್ಡದಾದ ವಿಶ್ವಾಸದ ವರ್ಗ ಅಧ್ಯಾಪಕರಾಗಿದ್ದಾರೆ. ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಕನ್ನಡಿಗರಿಗಿರುವ ಸವಲತ್ತನ್ನು ಉಳಿಸಿಕೊಳ್ಳಲು, ಕನ್ನಡ ಜಿಲ್ಲಾ ವಿದ್ಯಾಧಿಕಾರಿಯನ್ನು ಆಯ್ಕೆ ಮಾಡಲು ಸೂಚನಾ ಧರಣಿ ಮುಷ್ಕರ ಅತ್ಯಗತ್ಯವಾಗಿದೆ. ಕೈಗೆಟಕದೆ ಹೋದರೆ ಉಗ್ರ ಹೋರಾಟಕ್ಕೂ ಸಿದ್ದರಾಗಬೇಕು" ಎಂದು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಎಸ್. ವಿ ಭಟ್ ನುಡಿದರು.