FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 9 November 2014

ಕನ್ನಡ ಜಾನಪದ karnataka folklore: ಸುಗ್ಗಿ ಹಬ್ಬ ಸಂಕ್ರಾಂತಿ-ಜನಪದ ಗೀತೆಗಳು



09-11-2014
ಕನ್ನಡಿಗರ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥಿತ ಸಂಚಿನ ವಿರುದ್ಧ ಹೋರಾಟ ಅನಿವಾರ್ಯ- ಕನ್ನಡ ಅಧ್ಯಾಪಕ ಸಂಘ
ಕಾಸರಗೋಡು, ಕೇರಳ ರಾಜ್ಯದ ಶಾಲೆಗಳಿಗೆ ಪುಸ್ತಕ ವಿತರಣೆಯ ನಿಯಮದಂತೆ ಎರಡನೆಯ ಹಂತದ ಪಾಠ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ವಿತರಿಸಬೇಕಾದ ಕಲೆ,ದೈಹಿಕ ಶಿಕ್ಷಣ,ವೃತ್ತಿಪರಿಚಯವೇ ಮೊದಲಾದ ಅನುಬಂಧ ಪುಸ್ತಕಗಳನ್ನು ವಿತರಿಸಬೇಕಾಗಿತ್ತು. ಆದರೆ ಅವುಗಳನ್ನು ಇನ್ನೂ ವಿತರಿಸದೇ ಇರುವ ಅಧಿಕೃತರ ಕ್ರಮ ಖಂಡನೀಯವಾದುದು, ಭಾಷಾಂತರಕ್ಕೆ ಬಾಕಿ ಇರುವ ಪೂರಕ ಸಾಮಾಗ್ರಿಗಳನ್ನು ಆದಷ್ಟು ಬೇಗ ಒದಗಿಸಬೇಕಂದು ಸಭೆ ಒತ್ತಾಯಿಸಿದೆ. ನಿಯಮಾನುಸಾರವಾಗಿ ಅಂಗೀಕೃತ ಶಾಲೆಗಳಲ್ಲಿ ನೇಮಕಗೊಂಡ ಎಲ್ಲಾ ಕನ್ನಡ ಶಿಕ್ಷಕ ಹುದ್ದೆಗಳನ್ನು ಅಂಗೀಕರಿಸಬೇಕೆಂದೂ,ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರಕಾರ ನೀಡುವ ಸವಲತ್ತುಗಳನ್ನು ಸರಿಯಾದ ಸಮಯದಲ್ಲಿ ಒದಗಿಸದ ಉದ್ಯೋಗಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಸಂಘಟನೆ ಒತ್ತಾಯಿಸಿದೆ. ಇತ್ತೀಚೆಗಿನ ದಿನಗಳಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲೆಗಳನ್ನು ಬ್ಲೆಂಡ್ ಎ೦ಬ ನೂತನ ತಂತ್ರವನ್ನು ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ಸಿದ್ದಗೊಳಿಸಲಾಗಿದೆ. ಆದರೆ ಕನ್ನಡ ಮಾಧ್ಯಮದ ಶಿಕ್ಷಕರಿಗೆ ಸಾಕಷ್ಟು ತರಬೇತಿ ಸಿಗದೆ ಹೆಚ್ಚಿನ ಶಾಲೆಗಳ ಬ್ಲೋಗ್ ಗಳೂ ಈಗ ಮಲಯಾಳಮಯವಾಗಿದೆ. ಈ ಮಲತಾಯಿ ಧೋರಣೆಯನ್ನು ಸಂಘಟನೆ ಸಹಿಸದು ಎ೦ದು ಸಂಘಟನೆ ಎಚ್ಚರಿಸಿದೆ. ಶಾಲೆಗಳಲ್ಲಿ ಅದೆಷ್ಟೋ ಕನ್ನಡ ಚಟುವಟಿಕೆಗಳು ನಡೆಯುತ್ತಿದ್ದರೂ ಅವುಗಳನ್ನು ಮಲಯಾಳ ಭಾಷೆಯಲ್ಲಿ ಮಾತ್ರ ಪ್ರಕಟಿಸುವ ಸ್ಥಿತಿಗೆ ಜಿಲ್ಲಾ ಶಿಕ್ಷಣ ವ್ಯವಸ್ಥೆಯ ಅನಾಸ್ಥೆಯೇ ಕಾರಣವೆಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಜಿಲ್ಲೆಯ ಎಲ್ಲಾ ಕನ್ನಡ ಶಿಕ್ಷಕರಿಗೂ ಬ್ಲೋಗಿನ ತರಬೇತಿ ನೀಡಿ ಈ ಕೊರತೆಯನ್ನು ಹೋಗಲಾಡಿಸಬೇಕೆಂದು ಸಂಘಟನೆ ತಿಳಿಸಿದೆ.ಕೇರಳದ ನೂತನ ಶಿಕ್ಷಣಕ್ಕೆ ಪೂರಕವಾದ ಕಲಿಕಾ ಡಿ.ವಿ.ಡಿ.ಗಳನ್ನು ತಯಾರಿಸಿದ ಕನ್ನಡ ಅಧ್ಯಾಪಕರಿಗೆ ಬ್ಲೆಂಡಿನ ತರಬೇತಿ ಸಾಕಷ್ಟು ಕೊಡದೆ ಸತಾಯಿಸುವುದು ಸೋಜಿಗವೆ ಸರಿ. ಶಾಲೆಗಳಿಗೆ ಒದಗಿಸಲಾಗುವ ಎಲ್ಲಾ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಒದಗಿಸಬೇಕೆಂದು, ಇದಕ್ಕೆ ಅಗತ್ಯವಿರುವ ಭಾಷಾಂತರಗಾರರ ನೇಮಕಾತಿಯನ್ನು ಜಿಲ್ಲೆಯಲ್ಲಿ ಮಾಡಬೇಕೆಂದೂ ಈ ಮೂಲಕ ಭಾಷಾ ಅಲ್ಪ ಸಂಖ್ಯಾತ ಕನ್ನಡಿಗರಿಗೆ ಆಗುವ ಅನ್ಯಾಯವನ್ನು ಕೊನೆಗಾಣಿಸಬೇಕೆಂದೂ ಇದಕ್ಕೆ ತಡೆಯೊಡ್ಡುವ ಯಾವನೇ ಅಧಿಕಾರಿಯ ವಿರುದ್ದ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಲಾಯಿತು. ಸರಕಾರವು ಒದಗಿಸುವ ಸಾಂವಿಧಾನಿಕ ಸವಲತ್ತುಗಳನ್ನು ಕಸಿದುಕೊಳ್ಳವ ವ್ಯವವಸ್ಥಿತ ಸಂಚಿನ ವಿರುದ್ಧ ಧರಣಿ ಮುಷ್ಕರ ಹೂಡಲು ಸಂಘಟನೆ ಸಿದ್ಧತೆ ಮಾಡುತ್ತಿದೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಸಭೆ ಕಾಸರಗೋಡು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಿತು. ಕೆ.ವಿ.ಸತ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ, ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ, ಅಬ್ದುಲ್ ರಹಿಮಾನ್, ಅಮಿತ ಎಚ್, ಕೆ.ಸತ್ಯನಾರಾಯಣ ಭಟ್, ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಪುರುಷೋತ್ತಮ ಕುಲಾಲ್ ಚರ್ಚೆಯಲ್ಲಿ ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ವಿಷಯ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿ ಸುಕೇಶ ಎ. ವಂದಿಸಿದರು.